ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಂಘಗಳ ಕೊಡುಗೆ ಶ್ಲಾಘನೀಯ: ವೀರಭದ್ರೇಶ್ವರ ಸ್ವಾಮೀಜಿ

ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಂಘಗಳ ಕೊಡುಗೆ ಶ್ಲಾಘನೀಯ: ವೀರಭದ್ರೇಶ್ವರ ಸ್ವಾಮೀಜಿ  The contribution of cooperative societies to the economic empowerment of farmers is praiseworthy: Ve


ರಾಯಬಾಗ 03 : ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜೈ ಹನುಮಾನ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 5ನೇ ಶಾಖೆಯನ್ನು ಗಣ್ಯರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರೇಶ್ವರ ಸ್ವಾಮೀಜಿ ಮಾತನಾಡಿ, ರೈತರ ಹಾಗೂ ಸಾರ್ವಜನಿಕರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಸಂಘಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. 1994ರಲ್ಲಿ ಇಂಗಳಿ ಗ್ರಾಮದಲ್ಲಿ ಸ್ಥಾಪನೆಯಾದ ಜೈ ಹನುಮಾನ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ರೈತರು ಹಾಗೂ ಸಾರ್ವಜನಿಕರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದೆಯೂ ರೈತರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಆಶಿಸಿದರು. ಮಹಾಸ್ವಾಮೀಜಿ ಹಾಗೂ ಗಣ್ಯರು ನೂತನ ಶಾಖೆ, ಲಾಕರ್ ಮತ್ತು ಕಂಪ್ಯೂಟರ್ಗಳನ್ನು ಉದ್ಘಾಟಿಸಿ ಸಂಸ್ಥೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. ಸಹಕಾರಿಯ ಪ್ರಧಾನ ಶಾಖೆಯ ನಿರ್ದೇಶಕ ಶಂಕರ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರಿಯ ವಿವಿಧ ಶಾಖೆಗಳ ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಜಲಾಲಪುರ ಶಾಖೆಯ ಸಂಚಾಲಕ ರವೀಂದ್ರ ಮೈಶಾಳೆ ಸ್ವಾಗತಿಸಿದರು.