ಸಂವಿಧಾನ ಪ್ರತಿ ಸುಟ್ಟವರ ಮೇಲೆ ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿ
ಹಾವೇರಿ18 : ದೆಹಲಿಯ ಜಂತರಮಂತರನಲ್ಲಿ ಭಾರತ ಸಂವಿಧಾನದ ಪ್ರತಿಗಳನ್ನು ಸುಟ್ಟಿರುವ ಕಿಡಿಗೇಡಿಗಳಿಗೆ ರಾಷ್ಟದ್ರೋಹಿಗಳೆಂದು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಪ್ರತಿ ಬಜೆಟಿನಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶೇ25 ಮಿಸಲಿಡಬೇಕು ಎಂದು ಒತ್ತಾಯಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ(ಡಿಎಸ್4)ವತಿಯಿಂದ ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳಾದ ಡಾ|| ಎಂವ್ಹಿ ವೆಂಕಟೇಶ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಬಜೆಟಿನಲ್ಲಿ ಹಣ ಮಿಸಲಿಡುವ ಪರಿಶಿಷ್ಟ ಜಾತಿ ಪಂಗಡಗಳ ಉಪಯೋಜನೆ ಕಾಯ್ದೆಯನ್ನು ಜಾರಿಗೆ ತರಬೇಕು.ಕೇಂದ್ರ ಸಕರ್ಾರ ಭಂಡವಾಳಶಾಹಿತ್ವದ ಧೋರಣೆ ಬಿಟ್ಟು, ವಿದ್ಯೆ, ಆರೋಗ್ಯ ಸೇವೆ ಮತ್ತು ಭೂಮಿ ವ್ಯಾಪಾರಿಕರಣವಾಗುತ್ತಿರುವ ಕಾರಣ ಈ ಸೇವೆಗಳನ್ನು ರಾಷ್ಟೀಕರಣ ಮಾಡಿ ಉಚಿತವಾಗಿ ದೇಶದ ಪ್ರತಿಯೊಬ್ಬರಿಗೂ ಜಾತಿ, ಮತ ಎನ್ನದೆ ಅನುಭವಿಸಲು ಅವಕಾಶ ಕಲ್ಪಸಬೇಕು.ಸಮಾನ ಶಿಕ್ಷಣ ನೀತಿ ರೂಪಿಸಲು ಶಿಕ್ಷಣ ತಜ್ಞರನ್ನೊಳಗೊಂಡ ಆಯೋಗ ರಚಿಸಬೇಕು. ಯುವಕರಿಗೆ ಉದ್ಯೋಗ ನೀಡುವ ಹಾಗೂ ಅವರಿಗೆ ಜೀವನ ಭದ್ರತೆ ಒದಗಿಸುವ ಯೋಜನೆ ಜಾರಿಗೆ ತರಬೇಕು ಸೇರಿದಂತೆ ಪ್ರಸಕ್ತವಾಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಹಲವಾರು ಬೇಡಿಕೆಗಳನ್ನು ಇಡೇರಿಸುವಂತೆ ಡಿಎಸ್4 ಸಂಘಟನೆ ಮನವಿಯಲ್ಲಿ ತಿಳಿಸಿದೆ. ಡಿಎಸ್4 ರಾಜ್ಯ ಪ್ರಧಾನ ಕಾರ್ಯದಶರ್ಿ ಎನ್ ಎನ್ ಗಾಳೆಮ್ಮನವರ.ಮುಖಂಡರಾದ ಸತೀಶ ಕಾಟೇನಹಳ್ಳಿ.ಸುರೇಶ ಛಲವಾದಿ.ಫಕ್ಕಿರೇಶ ಕಾಳಿ.ಮಲ್ಲೇಶಪ್ಪ ಕಡಕೋಳ.ಕೃಷ್ಣ ಲಮಾಣಿ. ನಾಗೇಶ ಲಮಾಣಿ ಪದಾಧಿಕಾರಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 