ಪ್ರಜಾಪ್ರಭುತ್ವದ ಪರಿಕಲ್ಪನೆ ವಚನ ಸಾಹಿತ್ಯದಲ್ಲೂ ಕಾಣಬಹುದು: ರಫೀಕ್ ಶಿಡಗಿನಮೊಳ
The concept of democracy can also be found in Vachana literature: Rafiq Shidaginamola
ಬಳ್ಳಾರಿ, ಸೆ.19: ವಚನ ಸಾಹಿತ್ಯವು ಮಾನವೀಯತೆಯ ಆಗರವಾಗಿದ್ದು, ಸಮಾನತೆ, ಸಹಬಾಳ್ವೆ ಹಾಗೂ ಸಹಿಷ್ಣುತೆಯ ಮೌಲ್ಯಗಳನ್ನು ಸಾರುತ್ತದೆ. ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡಬೇಕು ಎಂದು ನಿವೃತ್ತ ಉಪನಿರ್ದೇಶಕ ಹಾಗೂ ಲೇಖಕ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ನಗರದ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಲಿಂ. ಡಾ. ವೈ. ನಾಗೇಶ್ ಶಾಸ್ತ್ರಿಗಳ ದತ್ತಿ ಹಾಗೂ ಲಿಂ. ಕೆ.ಎಂ. ಶೆಟ್ಟಿ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಚನ ಸಾಹಿತ್ಯದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಇತಿಹಾಸ ಉಪನ್ಯಾಸಕ ರಫೀಕ್ ಶಿಡಗಿನಮೊಳ ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ, ಮತದಾನ ಅಥವಾ ಸರ್ಕಾರ ರಚನೆಯ ವ್ಯವಸ್ಥೆಯಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಮನುಷ್ಯನಾಗಿ ಬದುಕುವ ಹಕ್ಕು ನೀಡುವ ಜೀವನಮೌಲ್ಯವೇ ಪ್ರಜಾಪ್ರಭುತ್ವ ಎಂದರು.
ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸಹೋದರತೆ, ಜನರ ಪಾಲ್ಗೊಳ್ಳುವಿಕೆ ಹಾಗೂ ಮಾನವ ಘನತೆ ಪ್ರಜಾಪ್ರಭುತ್ವದ ಮೂಲತತ್ವಗಳಾಗಿವೆ. ವಚನ ಸಾಹಿತ್ಯವು ಆಧುನಿಕ ಸಾಂವಿಧಾನಿಕ ಪ್ರಜಾಪ್ರಭುತ್ವದ ನೇರ ಮಾದರಿಯಲ್ಲದಿದ್ದರೂ, ಅದರಲ್ಲಿರುವ ಹಲವು ಮೌಲ್ಯಗಳು ಇಂದಿನ ಪ್ರಜಾಪ್ರಭುತ್ವದ ಆಶಯಗಳೊಂದಿಗೆ ಸಾಮ್ಯ ಹೊಂದಿವೆ ಎಂದು ವಿವರಿಸಿದರು.
ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ಧರಾಮ ಸೇರಿದಂತೆ ಅನೇಕ ವಚನಕಾರರು ಜಾತಿ, ಲಿಂಗ, ವೃತ್ತಿ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಪ್ರಶ್ನಿಸಿದ್ದಾರೆ. ಅನುಭವ ಮತ್ತು ವಿಚಾರದ ಮೂಲಕ ಸತ್ಯವನ್ನು ಅರಿಯಲು ವಚನಕಾರರು ಪ್ರಯತ್ನಿಸಿದರು. ಶರಣರ ವಿಚಾರ ವಿನಿಮಯದ ಪ್ರಮುಖ ವೇದಿಕೆಯಾಗಿದ್ದ ಅನುಭವ ಮಂಟಪವು ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ವಿಚಾರ ಸ್ವಾತಂತ್ರ್ಯದ ಆಶಯಗಳನ್ನು ಪ್ರತಿಬಿಂಬಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್. ವೀರಭದ್ರ್ಪ ಅಧ್ಯಕ್ಷತೆ ವಹಿಸಿದ್ದರು.
ಡಾ. ವೈ. ನಾಗೇಶ್ ಶಾಸ್ತ್ರಿಗಳ ಮೊಮ್ಮಗಳು ಡಿ. ನಾಗರತ್ನ, ಉದ್ಯಮಿ ಎಂ. ಚಂದ್ರಮೌಳಿ, ಸಮಾಜ ಸೇವಕರಾದ ಹಲಕುಂದಿ ಸತೀಶ್ ಕುಮಾರ್ ಹಾಗೂ ಕೇಣಿ ಬಸವರಾಜ್ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಆಲಂಭಾಷ ಸ್ವಾಗತಿಸಿದರು. ಅಧ್ಯಾಪಕಿ ಮಂಗಳಗೌರಿ ನಿರೂಪಿಸಿದರು. ಅಶ್ವಿನಿ ವಂದನಾರೆ್ಣ ಸಲ್ಲಿಸಿದರು. ಗಣೇಶ್ ಡಿ.ಎಸ್. ಗೀತಗಾಯನ ನಡೆಸಿಕೊಟ್ಟರು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 