ರಷ್ಯಾದಲ್ಲಿ ಮಾಯವಾದ ಚಳಿ,ಚಳಿ....!!

ಮಾಸ್ಕೋ,  ಡಿ20 ಜಗತ್ತಿ ಅನೇಕ  ಭಾಗದಲ್ಲಿ ಈಗ ಹಿಮಪಾತ ಮತ್ತು ಚಳಿಗಾಳಿ  ಬೀಸುತ್ತಿದೆ. ಪರಿಣಾಮವಾಗಿ ಅನೇಕ  ಕಡೆ ರೈಲು ವಿಮಾನ ಸಂಚಾರಗಳು ರದ್ದಾಗಿ , ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ ಇದೆಲ್ಲ ಮಾಮೂಲು ಸುದ್ದಿ . ಆದರೆ ಹೊಸ ಸಂಗತಿ, ಸುದ್ದಿ  ಏನೆಂದರೆ  ರಷ್ಯಾದಲ್ಲಿ ಈಗ ಚಳಿಯೇ  ಇಲ್ಲವಂತೆ.!! ಜನರು ಅರೆ  ಚಳಿಗಾಲ ಎಲ್ಲಿಗೆ ಹೋಯಿತು ಎಂದು ರಷ್ಯಾದ  ರಾಜಧಾನಿ ಮಾಸ್ಕೋದ ನಿವಾಸಿಗಳು ಅಚ್ಚರಿಪಡುತ್ತಿದ್ದಾರೆ.ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದರಂತೆ.! ಮಾಸ್ಕೋದಲ್ಲಿ 133 ವರ್ಷಗಳಲ್ಲೇ ಅಧಿಕ ಡಿಸೆಂಬರ್ ನಲ್ಲಿ  ಉಷ್ಣತೆ ದಾಖಲಾಗಿದ್ದು, ಈ ಅವಧಿಯಲ್ಲಿ ಸಾಮಾನ್ಯವಾಗಿದ್ದ  ಹಿಮಪಾತ ಈ ಬಾರಿ ಸಂಭವಿಸಿಲ್ಲ.'ಇದು ನಮ್ಮ ಚಳಿಗಾಲವಲ್ಲ ಎಂದೂ  ಹಿರಿಯರೂ ಸಹ ಅಚ್ಚರಿಯಿಂದ ಕೇಳುತ್ತಾರೆ.ಸಾಮಾನ್ಯವಾಗಿ ವರ್ಷದ ಈ ಅವಧಿಯಲ್ಲಿ ಹಿಮವು ರಸ್ತೆಗಳನ್ನು ಆವರಿಸಿಕೊಂಡಿರುತ್ತದೆ.ಹಾಗೂ ಕಟ್ಟಡಗಳಿಂದ ಮಂಜಿನ ಹನಿಗಳು ಮುತ್ತಿನಂತೆ ಉದುರುತ್ತವೆ. ಈಗ  ರಾತ್ರಿಯ ಉಷ್ಣತೆ 6 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ  ಎಂದು ಹವಾಮಾನ ಕೇಂದ್ರದ ಎಲೀನಾ ವೊಸೊಲ್ಯುಕ್ ಹೇಳಿದ್ದಾರೆ.