ಲೋಕದರ್ಶನವರದಿ
ರಾಣೆಬೆನ್ನೂರ. ಜೂ 30: ಪೌರ ಕಾರ್ಮಿಕರು ನಮ್ಮ ನಗರ ಸ್ವಚ್ಛತೆಗೆ ನಿಜವಾಗಿ ವಾರಿಯರ್ಸ್ಗಳಾಗಿದ್ದಾರೆ. ಅಂತಹವರ ಸೇವೆ ನಾವು ಸ್ಮರಿಸಬೇಕಾಗಿರುವುದು ಮಾನವೀಯ ಧರ್ಮವಾಗಿದೆ. ಕೊರೊನಾ ಸೋಂಕು ಹರಡದಂತೆ ಅದರ ವಿರುದ್ದ ಹೋರಾಡಿದ ವಾರಿಯಸರ್್ಗಳು ನಮ್ಮ ಪೌರಕಾಮರ್ಿಕರು. ಅವರು ಹಗಲಿರುಳು ಎನ್ನದೇ ನಿತ್ಯವೂ ಜನಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಸೇವಾ ಮುಖಿಯಾಗಿದ್ದಾರೆ ಎಂದು ನಗರಸಭಾ ಸದಸ್ಯ ಪ್ರಕಾಶ್ ಬುರಡಿಕಟ್ಟಿ ಹೇಳಿದರು.ನಗರಸಭಾ ಆವರಣದಲ್ಲಿ ಪ್ರಕಾಶ ಬುರುಡಿಕಟ್ಟಿ ಅವರ ಜನ್ಮದಿನೋತ್ಸವದ ನಿಮಿತ್ತ ಆಯೋಜಿಸಿದ್ದ, ಪೌರಕಾಮರ್ಿಕ ಕರೋನಾ ವಾರಿಯರ್ಸ್ಗಳಿಗೆ ಅಭಿನಂದಿಸಿ ಸನ್ಮಾನಿಸಿ ಮಾತನಾಡಿದರು. ಸಾರ್ವಜನಿಕರು ವೈರಸ್ ಕುರಿತು ಭಯ ಪಡದೇ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯಕರ ಜೀವನ ನಡೆಸಬೇಕು.
ಕೊರೊನಾ ವೈರಸ್ ಮಹಾಮಾರಿ ತಡೆಗಟ್ಟಲು ನಾವೇಲ್ಲರೂ ಕೇಂದ್ರ ಮತ್ತು ರಾಜ್ಯ ಸಕರ್ಾರ ಜಾರಿಗೆ ತಂದಿರುವ ನಿಯಮಗಳನ್ನು ಅನುಸರಿಸಿ ಬದುಕನ್ನು ಸಾಗಿಸಲು ಮುಂದಾದಾಗ ಮಾತ್ರ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ ಎಂದರು.ನಗರಸಭಾ ಸದಸ್ಯರಾದ ಹನುಮಂತಪ್ಪ ಹೆದ್ದೆರಿ, ನಾಗರಾಜ ಅಡ್ಮನಿ, ಶಂಭಣ್ಣ ಮಾಕನೂರು, ಕುಮಾರ ಕೊಪ್ಪದ್, ನೀಲಪ್ಪ ಕಸವಾಳ, ಕರಿಯಪ್ಪ ಅಣ್ಣೇರ, ಚಿಕ್ಕಪ್ಪ ಹೊಸಮನಿ, ಕುಮಾರ ಬಣಕಾರ ಸೇರಿದಂತೆ ಮತ್ತಿತರ ಗಣ್ಯರು ಅಭಿಮಾನಿಬಳಗದ ಸದಸ್ಯರು ಉಪಸ್ಥಿತರಿದ್ದರು.