ಕೇಂದ್ರ ಸರ್ಕಾರ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳಿಗೆ ಶಾಶ್ವತ ಪರಿಹಾರ ನೀಡಲಿ- ರವೀಂದ್ರಗೌಡ ಪಾಟೀಲ
The central government should provide permanent relief to the serial suicide cases of farmers - Ravi
ರಾಣೇಬೆನ್ನೂರು 24 : ತಾನು ಸಾಲ ಸೂಲ ಮಾಡಿ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಇರುವುದು ಸೇರಿದಂತೆ ರೈತ ವಿರೋಧಿ ಕಾನೂನುಗಳಿಂದ ರೈತ ತಾನು ಮಾಡಿದ ಕೃಷಿ ಸಾಲವನ್ನು ತೀರಿಸಲಾಗದೆ ಮಾನ ಮರ್ಯಾದೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ದೇಶಾದ್ಯಂತ ರೈತಾಪಿ ವರ್ಗ ಆತಂಕದ ಸ್ಥಿತಿಯಲ್ಲಿದೆ ಒಂದೇ ಒಂದು ಬಾರಿ ಕೇಂದ್ರ ಸರ್ಕಾರ ದೇಶದ ರೈತರ ರಾಷ್ಟಿಕೃತ ಬ್ಯಾಂಕಿನಲ್ಲಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ದೇಶದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯಾ ಪ್ರಕರಣಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ರೈತ ಮುಖಂಡ, ರವೀಂದ್ರಗೌಡ ಎಫ್. ಪಾಟೀಲ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಅವರು ನಿನ್ನೆ ಸಾಲದ ಸುಳಿಗೆ ಸಿಲುಕೆ ಆತ್ಮಹತ್ಯೆ ಮಾಡಿಕೊಂಡ ರಾಣೇಬೆನ್ನೂರ ತಾಲೂಕಿನ ಹೊಳೆಆನ್ವೇರಿ ಗ್ರಾಮದ ರೈತ ರವಿ ತಂದೆ ಸೋಮಲಿಂಗಪ್ಪ ಐರಣಿ (50) ಯವರ ಪಾರ್ಥಿವ ಶರೀರವನ್ನು ಶವ ಪರೀಕ್ಷೆಯ ನಂತರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂದೆ ಇಟ್ಟು ರೈತರು ಮತ್ತು ಮೃತ ರೈತನ ಕುಟುಂಬದವರು, ಸೇರಿ ಕೇಂದ್ರ ಸರ್ಕಾರ ಮತ್ತು ವ್ಯವಸ್ಥೆಯ ವಿರುದ್ಧ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಈ ಹಿಂದೆ 2007-08ರಲ್ಲಿ ಆಗಿನ ಕೇಂದ್ರದ ಯುಪಿಐ ಸರ್ಕಾರ ಈ ದೇಶದ ರೈತರ 88 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿತ್ತು ತದನಂತದಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ
ಉಪತಹಶೀಲ್ದಾರ್ ಕಡೂರ ಮತ್ತು ಕೃಷಿ ಇಲಾಖೆಯ ಸಂತೋಷ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಚಂದ್ರಣ್ಣ ಬೇಡರ, ಪುಟ್ಟಪ್ಪ ಮರಿಯಮ್ಮನವರ, ಬಸವನಗೌಡ ಕೋಟೆಗೌಡ್ರ, ಕರಬಸಪ್ಪ ಕೂಲೇರ, ಮಾರುತಿ ಅಂಗಡಿ, ಮಲ್ಲಪ್ಪ ಆನ್ವೇರಿ, ಶಿವಾನಂದ ದೊಣಗೊಂದಿ, ಹರಿಹರಗೌಡ ಪಾಟೀಲ ಸೇರಿದಂತೆ ಮೃತ ರೈತನ ಕುಟುಂಬಸ್ಥರು ಹೊಳೆಆನ್ವೇರಿ ಗ್ರಾಮದ ನೂರಾರು ರೈತರು, ರೈತ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 