ಜನಮನ ಸೆಳೆದ ಮಲ್ಲೂರ ಗ್ರಾಮದಲ್ಲಿ ಜರುಗಿದ ಎತ್ತಿನ ಓಟದ ಸ್ಪರ್ಧೆ

ಜನಮನ ಸೆಳೆದ ಮಲ್ಲೂರ ಗ್ರಾಮದಲ್ಲಿ ಜರುಗಿದ ಎತ್ತಿನ ಓಟದ ಸ್ಪರ್ಧೆ The bull racing competition held in Mallura village attracted attention

ಜನಮನ ಸೆಳೆದ ಮಲ್ಲೂರ ಗ್ರಾಮದಲ್ಲಿ ಜರುಗಿದ ಎತ್ತಿನ ಓಟದ ಸ್ಪರ್ಧೆ  

ಬ್ಯಾಡಗಿ 26: ತಾಲೂಕಿನ ಮಲ್ಲೂರ  ಗ್ರಾಮದಲ್ಲಿ  ಗುರುವಾರ  ಆಯೋಜಿಸಿದ್ದ ಎತ್ತಿನ ಓಟದ ಸ್ಪರ್ಧೆಗಳು ಜನಮನ ಸೆಳೆದವು.ಈ ಭಾಗದ ಸುತ್ತ ಮುತ್ತಲಿನ ಜಿಲ್ಲೆಗಳಾದ ದಾವಣಗೇರಿ, ಸಿರ್ಸಿ, ಶಿವಮೂಗ್ಗ,  ಗದಗ, ಹಾಗೂ ಹಾವೇರಿ, ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ್ದ ನೂರಾರಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವುಗಾಗಿ ಓಡುತ್ತ  ಸೆಣಸಾಡಿದವು.ವಿವಿಧ ಗ್ರಾಮಗಳಿಂದ ಗೆಲುವಿಗಾಗಿ ಅನೇಕ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಹೋರಿಗಳು ಗೆಲುವಿಗಾಗಿ ಹರಸಾಹಸಪಡುತ್ತಿದ್ದವು.ಹೋರಿ ಓಡಿಸುವ ಎತ್ತುಗಳ ಸವಾರರು ಕೈಯಲ್ಲಿ ಚಾವಟಿ ಹಿಡಿದು ಎತ್ತುಗಳ ಮೈಮೇಲೆ ಗುರಿ ಮುಟ್ಟುವವರೆಗೆ ಪಟ, ಪಟನೆ ಬಾರಿಸುತ್ತಿದ್ದರು. ಕೆಲವು ಸವಾರರು ಎತ್ತಿನ ಬಾಲವನ್ನು ತಿರುವುವ ಮೂಲಕ ನಾಗಲೋಟದಲ್ಲಿ ಓಡುತ್ತಿದ್ದ ಎತ್ತುಗಳನ್ನು ಇನ್ನಷ್ಟು ವೇಗವಾಗಿ ಓಡುವಂತೆ ಕಿಚ್ಚು ಹತ್ತಿಸುತ್ತಿದ್ದರು. ಪ್ರೆ?ಕ್ಷ ಕರು ಸಿಳ್ಳೆ ಹೊಡೆದು, ಕೇಕೆ ಹಾಕುವ ಮೂಲಕ ಹುರಿದುಂಬಿಸುತ್ತಿದ್ದರು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನ ಆಗಮಿಸಿ ಸ್ಪರ್ಧೆಯನ್ನು ಕಣ್ತುಂಬಿಕೊಂಡರು.ರೈತರಿಗೆ ಮುಂಗಾರು ಬಳಿಕ ಸದ್ಯ ಬಿಡುವಿನ ವೇಳೆ. ಇದೇ ಸಮಯದಲ್ಲಿ ಬೆಳಕಿನ ಹಬ್ಬ. ಇದರ ನಂತರ ಗ್ರಾಮೀಣ ಮತ್ತು ಹಳ್ಳಿಗರ ಅಚ್ಚುಮೆಚ್ಚಿನ ಕ್ರೀಡೆ ಅಂದ್ರೆ ಅದು ಹೋರಿ ಬೆದರಿಸುವ ಹಬ್ಬವಾಗಿದೆ. ತಮ್ಮ ಅಚ್ಚುಮಚ್ಚಿನ ಹೋರಿಗಳ ಸಾಮರ್ಥ್ಯ ಮತ್ತು ಶಕ್ತಿ ಪ್ರದರ್ಶನಕ್ಕಾಗಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಒಂದು ಸಲ ಸ್ಪರ್ಧೆ ಅಖಾಡಕ್ಕೆ ಇಳಿದ್ರೆ ಸಾಕು.. ಬಲಿಷ್ಠ ಕಟ್ಟು ಮಸ್ತಾದ ವಿವಿಧ ಮೂಲೆ ಮೂಲೆ ಯಿಂದ ಬಂದಿರುವ ಹೋರಿಗಳು ಎಂಟ್ರಿ ಕೊಡುತ್ತವೆ. ಈ ಹೋರಿಗಳ ಮಿಂಚಿನ ಓಟ ನೋಡುವುದೇ ರೋಮಾಂಚನವಾಗಿದೆ..ಇದನ್ನು ನೋಡಿದ್ರೆ ಮೈಜುಂ.. ಎನ್ನಿಸುತ್ತದೆ. ಮೈನವೀರಿಳಿಸಿ ಬಿಡುತ್ತವೆ. ಅಖಾಡದಲ್ಲಿ ಹೋರಿಗಳು ಓಟ ನೋಡಲು ನೆರೆಯ ಗ್ರಾಮಗಳನ್ನು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಒಂದಡೆ ಹೋರಿ ವೇಗದಲ್ಲಿ ಓಡಿ ಬಂದ್ರೆ ಅದರ ಕೊರಳಲ್ಲಿರುವ ಕೊಬ್ಬರಿ ಹಾರ ಕಿತ್ತುಕೊಳ್ಳಲು ಸಾಹಸ ಯುವಕರ ಗುಂಪು ಮತ್ತೊಂದಡೆ ಇರುತ್ತದೆ.. ಈ ಯುವಕರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯಗಳು ಮೈನವಿರೇಳಿಸುವಂತಿತ್ತು..  ಹೀಗೆ ನಡೆದ ಹೋರಿ ಬೆದರಿಸುವ ಸ್ಪರ್ಧೆಯು ಸಾವಿರಾರು ಜನರನ್ನು ಭರ್ಜರಿಯಾಗಿ ರಂಜಿಸಿದವು.ಸ್ಪರ್ಧೆಗೆ ಬಂದ ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿ, ವಿವಿಧ ಚಿತ್ರ ನಟರು ಹಾಗೂ ಚಲನ ಚಿತ್ರ ನಟರ ಹೆಸರನ್ನು ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಅಖಾಡದಲ್ಲಿ ಓಡಿದವುಬೆಳಗಿನಿಂದ ಜಿಟಿಜಿಟಿ ಮಳೆಯಾಗುತ್ತಿದ್ದರೂ ಮಳೆಯ ಮಧ್ಯೆದಲ್ಲಿಯೇ ಹೋರಿ ಬೆದರಿಸುವ ಸ್ಪರ್ಧೆ ನಡೆದವು. ಮಳೆಯನ್ನು ಲೆಕ್ಕಿಸದ ಹೋರಿ ಮಾಲೀಕರು ತಮ್ಮ ಹೋರಿಗಳನ್ನು ಸ್ಪರ್ಧೆಯಲ್ಲಿ ತೊಡಗಿಸಿದ್ದರು, ಹೋರಿ ಬೆದರಿಸುವ ಪೈಲ್ವಾನರು ಮಳೆಯಲ್ಲಿ ಯೇ ಅನೇಕ ಹೋರಿಗಳನ್ನು ಬೆದರಿಸಿ ತಮ್ಮ ಕೈ ಚಳಕ ತೋರಿಸುತ್ತಾ ಖುಷಿ ಹಂಚಿಕೊಳ್ಳುತ್ತಿದ್ದ ದೃಸ್ಯಗಳು ಕಾಣಿಸುತ್ತಿದ್ದವು. ಹೋರಿ ಹಬ್ಬವನ್ನು ನೋಡಲಿಕ್ಕೆ ಆಗಮಿಸಿದ ಸಾವಿರಾರು ಜನರು ಮಳೆಯ ಮಧ್ಯೆದಲ್ಲಿಯೇ ಹೋರಿ ಹಬ್ಬವನ್ನು ನೋಡಿ ಸಂಭ್ರಮಿಸಿದರು. ಮಳೆಯ ಅವಘಡದಿಂದ ಹೋರಿ ಓಡಿಸುವ ಸ್ಪರ್ಧೆಗಳನ್ನು ಮಧ್ಯಾಹ್ನವೇ ಅಂತ್ಯಗೊಳಿಸಿದ್ದರಿಂದ ಹೋರಿ ಮಾಲೀಕರು, ಹೋರಿ ಬೆದರಿಸುವಲಿಕ್ಕೆ ಆಗಮಿಸಿದ ಪೈಲ್ವಾನರು ಹಾಗೂ ಹೋರಿ ಹಬ್ಬವನ್ನು ನೋಡಲಿಕ್ಕೆ ಬಂದ ಜನತೆ ಮಳೆರಾಯನ ಕಾಟಕ್ಕೆ ಬೇಸರಗೊಂಡರು.