ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರು ಮಂಡಿಸಿದ ಬಜೆಟ್ ಕರ್ನಾಟಕಕ್ಕೆ ಪ್ರಯೋಜನವಲ್ಲದ, ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್‌.

 ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರು ಮಂಡಿಸಿದ ಬಜೆಟ್ ಕರ್ನಾಟಕಕ್ಕೆ ಪ್ರಯೋಜನವಲ್ಲದ, ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್‌. The budget presented by Union Finance Minister Nirmala Sitharaman is neither beneficial to Karnataka

ಲೋಕದರ್ಶನ ವರದಿ 


ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರು ಮಂಡಿಸಿದ ಬಜೆಟ್ ಕರ್ನಾಟಕಕ್ಕೆ ಪ್ರಯೋಜನವಲ್ಲದ, ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್‌. 


ವಿಜಯನಗರ  03: ಕಲ್ಯಾಣ ಕರ್ನಾಟಕ ಪ್ರದೇಶವು ಸಂವಿಧಾನದ 371(ಎ) ವಿಧಿಯ ಅಡಿಯಲ್ಲಿ ವಿಶೇಷ ಮಾನ್ಯತೆ ಪಡೆದಿದ್ದರೂ, ಈ ಬಾರಿಯ ಬಜೆಟ್‌ನಲ್ಲಿ ಈ ಭಾಗದ ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ ಅಥವಾ ಕೈಗಾರಿಕಾ ಕಾರಿಡಾರ್‌ಗಳಿಗೆ ಯಾವುದೇ ನಿರ್ದಿಷ್ಟ ಪ್ಯಾಕೇಜ್ ಘೋಷಣೆಯಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನದ ಕೊರತೆ ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5,300 ಕೋಟಿ ಘೋಷಿಸಲಾಗಿತ್ತು. ಆದರೆ, ಈ ಬಾರಿ ಅದರ ಅನುಷ್ಠಾನಕ್ಕೆ ಬೇಕಾದ ಹಣಕಾಸಿನ ಹರಿವಿನ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ನೀರಾವರಿ ಆಧಾರಿತ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ-ಧಾರವಾಡ ಅಥವಾ ಬೆಳಗಾವಿ ರೈಲ್ವೆ ಸಂಪರ್ಕದ ಬಗ್ಗೆ ಹೊಸ ಘೋಷಣೆ ಮತ್ತು ಭರವಸೆಗಳೇ ಇಲ್ಲದಂತಾಗಿದೆ. 


ತೆರಿಗೆ ಹಂಚಿಕೆಯಲ್ಲಿ ತಾರತಮ್ಯ :- ಕರ್ನಾಟಕವು ಕೇಂದ್ರಕ್ಕೆ ಅತಿ ಹೆಚ್ಚು ಜಿಎಸ್‌ಟಿ ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದ್ದರೂ, ಮರಳಿ ರಾಜ್ಯಕ್ಕೆ ಬರುವ ಪಾಲಿನಲ್ಲಿ (ಆಜತಠಣಣಠ) ಅನ್ಯಾಯವಾಗುತ್ತಿದೆ, ನೆರೆ ರಾಜ್ಯಗಳಾದ ಆಂಧ್ರ​‍್ರದೇಶ ಮತ್ತು ಬಿಹಾರಕ್ಕೆ ಸಿಕ್ಕ ವಿಶೇಷ ಪ್ಯಾಕೇಜ್‌ಗಳಿಗೆ ಹೋಲಿಸಿದರೆ ಕರ್ನಾಟಕವನ್ನು ಕಡೆಗಣಿಸಲಾಗಿದೆ ಇದರಿಂದ ರಾಜ್ಯವು ಆರ್ಥಿಕ ಹಿನ್ನಡೆ ಅನುಭವಿಸುವಂತಾಗಿದೆ.  ಜಿಎಸ್‌ಟಿ ಬಾಕಿ ಹಣದ ಪೂರ್ಣ ಪಾವತಿ ಬಗ್ಗೆ ಸ್ಪಷ್ಟತೆ ಇಲ್ಲ. ಕೃಷಿ ವಲಯದ ಒಣ ಭೂಮಿ ಬೇಸಾಯ ಹೆಚ್ಚಿರುವ ಉತ್ತರ ಕರ್ನಾಟಕದ ರೈತರಿಗೆ ಪೂರಕವಾದ ವಿಶೇಷ ತಾಂತ್ರಿಕ ನೆರವು ಅಥವಾ ಯಾವುದೇ ತರಹದ ಆರ್ಥಿಕ ನೆರವು ಘೋಷಣೆಯಾಗಿಲ್ಲ.  ವಿಜಯನಗರ ಜಿಲ್ಲೆ ಅಥವಾ ಕಲಬುರಗಿ ಭಾಗದ ಜಿಲ್ಲೆಗಳಿಗೆ ಬೃಹತ್ ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಗೆ ಆದ್ಯತೆ ಸಿಕ್ಕಿಲ್ಲ.  ಬಜೆಟ್ ಅನ್ನು ವಿಶ್ಲೇಷಿಸುವಾಗ ಸರ್ಕಾರವು ಇದು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ತತ್ವದಡಿ ಎಲ್ಲರಿಗೂ ಸಮಾನ ಅವಕಾಶ ನೀಡಿದೆ ಎಂದು ವಾದಿಸಿದರೆ, ರಾಜ್ಯದ ಹಿತಾಸಕ್ತಿ ಗಮನಿಸುವವರು ಪ್ರಾದೇಶಿಕ ಅಸಮಾನತೆಯನ್ನು ಎತ್ತಿ ತೋರಿಸುತ್ತಿದ್ದಾರೆ.  ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇದೊಂದು ಸಾಮಾನ್ಯ ಜನರ ಪರವಾಗಿ ಇಲ್ಲದ ಬಜೆಟ್ ಎಂದು ಭಾವಿಸಬಹುದು ಮತ್ತು ಇದು ಉಳ್ಳವರ ಪರವಾಗಿರುವ ಬಜೆಟ್ ಎಂದು ಹೇಳಬಹುದು. ಈ ಅಸಮಾನತೆಯ ಬಜೆಟ್ಟನ್ನು ವಿಜಯನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗವು ತೀವ್ರವಾಗಿ ಖಂಡಿಸುತ್ತದೆ.