ಕಂಚಿನಕಂಠದ ಹಾಡುಗಾರ್ತಿ ಫಕ್ಕೀರವ್ವ ಗುಡಿಸಾಗರ : ಕೃಷ್ಣಾ ಕೊಳ್ಳಾನಟ್ಟಿ

ಕಂಚಿನಕಂಠದ ಹಾಡುಗಾರ್ತಿ ಫಕ್ಕೀರವ್ವ ಗುಡಿಸಾಗರ : ಕೃಷ್ಣಾ ಕೊಳ್ಳಾನಟ್ಟಿ The bronze-voiced singer Fakkiravva Gudisagara: Krishna Kollanatti

ಲೋಕದರ್ಶನ ವರದಿ 

ಧಾರವಾಡ 14 : ನಮ್ಮಹಿಂದಿನ ಜನಪದ ಕಲಾವಿದರು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ವೇದಿಕೆ ಸಿಕ್ಕಾಗ ಅತಿ ಸಂತೋಷದಿಂದ ಬಂದುಕಾರ್ಯಕ್ರಮ ನೀಡುತ್ತಿದ್ದರು ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣಾ ಡಿ. ಕೊಳ್ಳಾನಟ್ಟಿ ಅಭಿಪ್ರಾಯಪಟ್ಟರು. ಅವರುರಾಜ್ಯ ಪ್ರಶಸ್ತಿ ವಿಜೇತೆ ಫಕ್ಕಿರವ್ವಗುಡಿ ಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯೋಗದಲ್ಲಿಇಲ್ಲಿಯ ಸಾಹಿತ್ಯ ಭವನದಲ್ಲಿ ಏರಿ​‍್ಡಸಿದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ನಮ್ಮಗ್ರಾಮೀಣ ಕಲೆಯಾದ ಭಜನೆ ಹಾಡುಗಳು ಗುಡಿ, ಗುಂಡಾರಗಳಲ್ಲಿ ಹಗಲೆಲ್ಲ ದುಡಿದು ಬಂದುದಣಿವು ಕಳೆಯುವುದಕ್ಕೆ ಸಂಜೆ ಹೊತ್ತು ಭಜನಾಪದಗಳನ್ನು ಹಾಡುತ್ತಿದ್ದರು. ಆದರೆ ಇಂದಿನ ಕಲಾವಿದರು ಯಾರಾದರೂ ತೀರಿಕೊಂಡಲ್ಲಿ ಭಜನಾಪದ ಹಾಡಲುಕರೆದರೆ10-15 ಸಾವಿರಕೇಳಿ ಕರಾರು ಮಾಡುತ್ತಾರೆ.ಇದು ಕಲೆ ಹಾಗೂ  ಕಲಾವಿದರಿಗೆ ಶೋಭೆತರು ವಂಥದ್ದಲ್ಲ, ಕಲೆಗೆ ಬೆಲೆ ನೀಡಬೇಕೆ ಹೊರತು ಕಲೆಗೆ ಬೆಲೆ ನಿಗದಿಪಡಿಸಬಾರದು ಕಲಾವಿದರು ಈ ನಿಟ್ಟಿನಲ್ಲಿ ನಡೆಯಬೇಕು ಕಲಾವಿದರಲ್ಲಿ ತಿಳುವಳಿಕೆ ಬರಬೇಕು ಅಂದಾಗ ಜನಪದ ಉಳಿದು, ಬೆಳೆಯಲು ಸಾಧ್ಯ ಎಂದರು.

ಅಥಿತಿಯಾಗಿ ಆಗಮಿಸಿದ ತಾಲೂಕಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಈಶ್ವರ ಶಿವಳ್ಳಿ ಮಾತನಾಡಿ, ಕಾರ್ಯಕ್ರಮ ಮಾಡುವಾಗ ವೇದಿಕೆಯ ಮೇಲಿರುವ ಗಣ್ಯರಿಗೆ ಶಾಲು, ಹಾರ, ತುರಾಯಿ ಹೂಮಾಲೆ ಹಾಕಿ ಖರ್ಚು ಮಾಡುವುದರ ಬದಲು ಒಂದು ಜನಪದ ಪುಸ್ತಕ ಕೊಟ್ಟರೆ ಜನಪದದ ಬಗ್ಗೆ ತಿಳಿದುಕೊಳ್ಳಲು  ಅನುಕೂಲವಾಗುತ್ತದೆ. ಕೃತಿಯ ಲೇಖಕರಿಗೂ ಸಹಾಯ ಮಾಡಿದಂತಾಗುತ್ತದೆ ಎಂದರು. 

ಕಲಾವಿದಯಕ್ಕೇರ​‍್ಪ ನಡುವಿನಮನಿ (ಶಾನವಾಡ ಮಾಸ್ತರ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಪ್ರಶಸ್ತಿ ವಿಜೇತೆ, ಹಾಗೂ ದಲಿತಹಿರಿಯ ಕಲಾವಿದೆಯಾಗಿದ್ದ ದಿ.ಫಕ್ಕಿರವ್ವಗುಡಿ ಸಾಗರ ಇವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಏರಿ​‍್ಡಸಲು ಹಲವಾರು ಬಾರಿ ಸರಕಾರವನ್ನು ವಿನಂತಿಸಿಕೊಂಡಾಗ  ತಾತ್ಸಾರ ಮನೋಭಾವ ತೋರಿ, ಅನುದಾನ ನೀಡದಿರುವುದು ಖೇದಕರ ಸಂಗತಿ. ಇಂಥ ಹಿರಿಯ ಕಲಾವಿದರ ವಿಷಯದಲ್ಲಿ ಸರಕಾರದ ಇಂಥ ಧೋರಣೆ ಸರಿಯಲ್ಲಎಂದರು. ಯಲ್ಲಪ್ಪ ಪರಸಪ್ಪನವರ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕುಮಾರಿ ಮಂಜುಳಾ ಕೌಲಗೇರಿ, ಪ್ರಭುರಂಗಾಪುರ, ಗಂಗವ್ವ ಆಡಿನವರ, ಸೋಮಲಿಂಗ ಒಡಿಯರ, ಮಾದೇವಿ ವಾಲಿಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.