ಮಹಿಳಾ ಪಿಎಸೈ ಅನ್ನಪೂರ್ಣ ಶೌರ್ಯವನನು ಶ್ಲಾಘನೀಯ: ನಾಲತವಾಡ

The bravery of female PAS Annapurna Shauryavan is commendable: Nalathwada

ಲೋಕದರ್ಶನ ವರದಿ 

ಮಹಿಳಾ ಪಿಎಸೈ ಅನ್ನಪೂರ್ಣ ಶೌರ್ಯವನನು ಶ್ಲಾಘನೀಯ: ನಾಲತವಾಡ 

ಮುದ್ದೇಬಿಹಾಳ 17: ಕಳೆದ ಎರಡು ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ನಗರದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಿಹಾರ ರಾಜ್ಯದ ಮೂಲದ ಹಂತಕನ್ನು ಎನ್ ಕೌಂಟರ್ ಮಾಡುವ ಮೂಲಕ ಶೌರ್ಯ ಮೆರೆದ ಮಹಿಳಾ ಪಿಎಸೈ ಅನ್ನಪೂರ್ಣ ಅವರ ಕಾರ್ಯವನ್ನು  ಶ್ಲಾಘಿಸಲೇಬೇಕು ಎಂದು ತಾಲೂಕಾ ಭೋವಿ ಸಮಾಜದ ಹಿರಿಯ ಮುಖಂಡ ಪರಶುರಾಮ ನಾಲತವಾಡ ದಿಟ್ಟತನ ಪ್ರದರ್ಶಿಸಿದ ಪೋಲಿಸ್ ಇಲಾಖೆಗೆ ಒಂದು ಸೇಲ್ಯುಟ್ ಹೇಳಲೇ ಬೇಕು ಎಂದು ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯ ಕಳೆದ ಹಲವು ದಿನಗಳಿಂದ ಬಿಹಾರ ಮೂಲದವರು ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಮಿಕರಾಗಿ ಬಂದು ನೆಲೆಸಿದ್ದಾರೆ. ಆದರೇ ಇಂತಹ ಮನುಕುಲವೇ ತಲೆ ತಗ್ಗಿಸುವಂತಹ ಕೃತ್ಯಗಳು ನಡೆದಿರಲಿಲ್ಲ. ಈ ಘಟನೆಯಿಂದ ಹೆಣ್ಣು ಹೆತ್ತ ಅನೇಕ ತಂದೆ ತಾಯಿಯರು ಸಹಿತ ಹೆಣ್ಣು ಮಕ್ಕಳನ್ನು ಹೊರಗಡೆ ಕಳಿಸಲು ಯೋಚಿಸಬೇಕಾದ ಸ್ಥಿತಿ ಎದುರಾಗಿದೆ.  

ನಮ್ಮ ಮುದ್ದೇಬಿಹಾಳ ತಾಲೂಕು ಪಟ್ಟಣದಲ್ಲಿ ಟೈಲ್ಸ್‌, ಫರ್ನಿಚರ್, ಪಿಓಪಿ ಹೀಗೆ ಅನೇಕ ರೀತಿಯ ಕಟ್ಟಡ ಕಾರ್ಮಿಕರಾಗಿ ಬಿಹಾರ ಮೂಲದ ನೂರಾರು ಕುಟುಂಬಗಳು ಬಂದು ನೆಲೆಸಿದ್ದು.  ಸಧ್ಯ ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ವ್ಯಕ್ತಿಯು ಬಿಹಾರ ರಾಜ್ಯದವನು ಎಂಬುದು ತಿಳಿದು ಬಂದಿದ್ದು ತುಂಬಾ ಆತಂತಕ್ಕೊಳಗಾಗುವಂತೆ ಮಾಡಿದೆ. ಜತೆಗೆ ಇದೇ ರೀತಿ ಬಿಹಾರ ಮಾತ್ರವಲ್ಲದೇ ಇತರೇ ರಾಜ್ಯಗಳಿಂದ ಇಲ್ಲಿ ಉದ್ಯೋಗ ನೆಪದಲ್ಲಿ ವಲಸೆ ಬಂದಿದ್ದಾರೆ. ಕಾರಣ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ ಇರುವ ಕರ್ನಾಟಕದವರಲ್ಲದೆ ಬಿಹಾರ ಮೂಲದ ಕುಟುಂಬಗಳ ಬಗ್ಗೆ ಅವರ ಸಂಪೂರ್ಣ ಜಾತಕ ವಿಳಾಸವನ್ನು  ಸ್ಥಳಿಯ ಪೋಲಿಸ್ ಇಲಾಖೆಯು ಮಾಹಿತಿ ಪಡೆದು ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.