ಅಗ್ನಿ ದೇವನನ್ನೇ ಧರೆಗಿಳಿಸಿದ ಧೀರ ಸನ್ಯಾಸಿ ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜ
The brave monk Sri Channavrishabhendra Devarakondajja
.jpg)
ಲೋಕದರ್ಶನ ವರದಿ
ಮಹಾದೇವ ಅರಕೇರಿ
ವಿಶೇಷ ವರದಿ
ಹಾರೂಗೇರಿ 08: 1926ರಲ್ಲಿ ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜನವರು ಲೀಲಾಮಠದ ಅಗ್ನಿಕುಂಡದಲ್ಲಿ ಸಾಕ್ಷಾತ್ ಅಗ್ನಿ ದೇವನನ್ನೇ ಧರೆಗಿಳಿಸಿದ ಧೀರ ಸನ್ಯಾಸಿ, ತಮ್ಮ ತಪಶಕ್ತಿಯನ್ನೆಲ್ಲಾ ಧಾರೆಯೆರೆದು ಉರಿಸಿದ ಅಗ್ನಿಕುಂಡ ಇಂದಿಗೆ 100 ವರ್ಷಗಳಾದರೂ ಇನ್ನೂ ನಿರಂತರವಾಗಿ ಉರಿಯುತ್ತಿದೆ.
ಅಗ್ನಿಕುಂಡಕ್ಕೆ ಜ್ಞಾನಯಜ್ಞ, ಧಾರ್ಮಿಕ, ಆಧ್ಯಾತ್ಮಿಕ ಶಕ್ತಿಯನ್ನೆಲ್ಲಾ ಧಾರೆಯೆರೆಯುವುದರೊಂದಿಗೆ 1926ರಲ್ಲಿಯೇ ಓಂ ನಮಃ ಶಿವಾಯ ತಾರಕ ಮಂತ್ರ ಪಠಣ ಮಹಾಶಿವರಾತ್ರಿ ಸಪ್ತಾಹವನ್ನು ದೇವರಕೊಂಡಜ್ಜನವರು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಏಳು ದಿನಗಳವರೆಗೆ ಹಗಲು-ರಾತ್ರಿ ನಿರಂತರವಾಗಿ ಈ ಮಂತ್ರದ ಘೋಷಣೆ ಶ್ರೀ ಚನ್ನವೃಷಭೇಂದ್ರ ಲೀಲಾಮಠದಲ್ಲಿ ಮೊಳಗುತ್ತಿದೆ.
ನೌಕರಿ ಸಿಗಲೆಂದು, ಉದ್ಯೋಗದಲ್ಲಿ ಯಶಸ್ಸು, ಹೊಲಗದ್ದೆಗಳಲ್ಲಿ ಸಮೃದ್ಧ ಬೆಳೆ ಬರಲೆಂದು, ಶೈಕ್ಷಣಿಕವಾಗಿ ಪ್ರಗತಿ, ಮನೆಯಲ್ಲಿ ಸುಖ, ಶಾಂತಿ, ಸಂತೋಷ ನೆಲೆಸಲೆಂದು, ಕೌಟುಂಬಿಕ ಸಮಸ್ಯೆಗೆ ಪರಿಹಾರ, ಅನೇಕ ಹೆಣ್ಣು ಮಕ್ಕಳು ತಮ್ಮ ಬಂಜೆತನ ನಿವಾರಣೆಯಾಗಲೆಂದು, ಮಕ್ಕಳು ರಾತ್ರಿ ಅಂಜದಿರಲು, ಮಕ್ಕಳಿಗೆ ದುಷ್ಟಶಕ್ತಿಗಳ ಕಾಟ ತಪ್ಪಿಸಲು, ಮಾಟಮಂತ್ರಗಳಿಂದ ಮುಕ್ತಿ ಹೊಂದಲು, ಮಕ್ಕಳಾಗಲೆಂದು, ಮಕ್ಕಳು ಶಕ್ತಿಯುತ ಹಾಗೂ ಆರೋಗ್ಯವಾಗಿ ಬೆಳೆಯಲೆಂದು ಹೀಗೆ ತಾವು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಲಭಿಸಲೆಂದು ಈ ದೇವರಕೊಂಡಜ್ಜನವರ ತಪಶಕ್ತಿಯಿರುವ ಅಗ್ನಿಕುಂಡಕ್ಕೆ ಭಕ್ತಿಯಿಂದ ಬೇಡಿಕೊಂಡು, ಪ್ರದಕ್ಷಿಣೆ ಹಾಕಿದರೆ ನೆರವೇರುವುದೆಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.
18-19ನೇ ಶತಮಾನದ ಶ್ರೀ ಸಿದ್ಧಾರೂಢರು, ಗರದಗ ಮಡಿವಾಳೇಶ್ವರರು, ನಾಗಲಿಂಗ ಅಜ್ಜನವರು, ಬಂತನಾಳ ಶಿವಯೋಗಿಗಳು, ಅಥಣಿಯ ಶಿವಯೋಗಿಗಳು, ಕಲಬುರ್ಗಿಯ ಶರಣ ಬಸವರು, ಬಬಲಾದಿಯ ಸದಾಶಿವಪ್ಪನವರು, ಸೊಗಲದ ಶಿವಯೋಗಿಗಳು, ಶಿಶುನಾಳ ಶರೀಫರು ಸೇರಿದಂತೆ ಅನೇಕರ ಸಮಕಾಲಿನವರಾದ ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜನವರು ಪವಾಡ ಪುರುಷರು.
1909ರಲ್ಲಿ ಲೋಕ ಸಂಚಾರಗೈಯುತ್ತ ಹಾರೂಗೇರಿಗೆ ಪಾದಾರೆ್ಣ ಮಾಡಿದ ಶ್ರೀಗಳು, 1922ರಲ್ಲಿ ಹಾರೂಗೇರಿ ಹಿರಿಯರಾದ ಲಚ್ಚಪ್ಪ ಧರ್ಮಟ್ಟಿಯವರಿಂದ 2.25 ಎಕರೆ ಜಮೀನನ್ನು ದಾನವಾಗಿ ಪಡೆದು, ಚಿಕ್ಕಗುಡಿಸಲನ್ನೇ ದೇವಸ್ಥಾನವನ್ನಾಗಿ ಪರಿವರ್ತಿಸಿದರು. ಕಡು ಬಡತನ, ದಾರಿದ್ರ್ಯ, ಬರಗಾಲ ಆವರಿಸಿ ಕುಡಿಯಲು ನೀರಿಲ್ಲದೇ, ದುಡಿಯಲು ಕೆಲಸವಿಲ್ಲದೇ ವಲಸೆ ಹೋಗುತ್ತಿದ್ದ ಕಾಲಘಟ್ಟದಲ್ಲಿ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದಲ್ಲಿ ನಡೆಯುತ್ತಿದ್ದ ಓಂ ನಮಃ ಶಿವಾಯ ತಾರಕ ಮಂತ್ರವನ್ನು ಶ್ರೀಮಠದಲ್ಲಿ ಪ್ರಾರಂಭಿಸಿ, ಡುರ್ ಅಲಕ್ ನಿರಂಜನ್ ಎಂಬ ಮಂತ್ರಘೋಷದಿಂದ ಹಾರೂಗೇರಿಯನ್ನು ಉದ್ಧಾರ ಮಾಡಿದ ಪುಣ್ಯಪುರುಷರು.
(ಚನ್ನವೃಷಭೇಂದ್ರ ಲೀಲಾಮಠದ ಮಣ್ಣಿನಲ್ಲಿ ದೈವಿಕ ಶಕ್ತಿ ಅಡಗಿದೆ. ಇಲ್ಲಿ ಹಲವಾರು ಪವಾಡ, ಲೀಲೆಗಳು ನಡೆದಿದ್ದು, ಭಕ್ತಿಯಿಂದ ಬೇಡಿಕೊಂಡ ಲಕ್ಷ್ಯಾಂತರ ಭಕ್ತರ ಬೇಡಿಕೆಗಳು ಈಡೇರಿವೆ. ಹಿ ಅಪ್ಪಾಸಾಬ ಕುಲಕರ್ಣಿ, ಶ್ರೀಮಠದ ಕಾರ್ಯದರ್ಶಿ)
* ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಅಮೃತ ವಾಣಿಗಳು *
:- ಗಂಗಮಾತೆ ಹರಿಯುವಳು, ಜನರ ಬಾಳು ಹಸನಾಗುವುದು : ಅದರಂತೆ ಘಟಪ್ರಭಾ ಎಡದಂಡೆ ಕಾಲುವೆ ನಿರ್ಮಾಣವಾಗಿದೆ.
:- ಲಕ್ಷ್ಮೀ, ಸರಸ್ವತಿಯರು ನರ್ತನ ಮಾಡುವರು : ಅದರಂತೆ ಇಂದು ಹಾರೂಗೇರಿಯಲ್ಲಿ ನೂರಾರು ವಿದ್ಯಾಸಂಸ್ಥೆಗಳು, ಬ್ಯಾಂಕುಗಳು ಮತ್ತು ಪ್ರಮುಖ ವಾಣಿಜ್ಯ, ವ್ಯಾಪಾರ ಕೇಂದ್ರವಾಗಿದೆ.
:- ನೂರು ವರ್ಷದ ಹಿಂದೆ ಶ್ರೀಗಳು ತೋರಿದ ಜಾಗದಲ್ಲಿ ಜಿಲ್ಲೆಯಲ್ಲಿಯೇ ದೊಡ್ಡ ಸಂತೆ ನಡೆಯುತ್ತಿದೆ.
:- ಹಾರೂಗೇರಿ ಮುಂದೆ ಮುಂಬೈ ಮರಿಯಾಗುತ್ತದೆ : ಇಲ್ಲಿ ಮುಂಬೈ ನಗರದಂತೆ ಸದಾ ಜನದಟ್ಟನೆ, 200ಕ್ಕೂ ಹೆಚ್ಚು ಬಸ್ಸುಗಳ ಓಡಾಟ, ಸದ್ಯದಲ್ಲೇ ರೈಲುಗಳ ಓಡಾಟವೂ ಆರಂಭವಾಗಲಿದೆ.
:- ಸರ್ವರೂ ಕ್ಷೇಮದಿಂದಿರಲು ಧನ್ವಂತರಿಯ ಕೃಪೆಯಾಗುವುದು : ಸದ್ಗುರುವಿನ ಕೃಪೆಯಿಂದ 20ಕ್ಕೂ ಹೆಚ್ಚು ಮಲ್ಟಿಸ್ಪೇಶಾಲಿಟಿ ಸೇರಿದಂತೆ ನೂರಾರು ಆಸ್ಪತ್ರೆಗಳಿವೆ.
:- ಜಾತ್ಯಾತೀತ ಮಠ : ಇಲ್ಲಿ ಯಾವ ಜಾತಿ-ಮತ-ಪಂಥ, ಪುರುಷ-ಸ್ತ್ರೀ ಎಂಬ ಭೇಧ ಭಾವನೆಯಿಲ್ಲ. ಎಲ್ಲರೂ ‘ಒಂದಾಗಿ ಬಾಳಿರಿ, ವಿಶ್ವಶಾಂತಿ ಪಡೆಯಿರಿ’ ಎಂಬ ಶ್ರೀಗಳ ವಾಣಿ ನಡೆದಿದೆ.
:- ಶ್ರೀಗಳು ಪಾದಸ್ಪರ್ಶ ಮಾಡಿದ ಗ್ರಾಮಗಳಲ್ಲಿ ಸಾವಿರಾರು ಲೀಲೆ, ಪವಾಡಗಳನ್ನು ಸೃಷ್ಠಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 