ಬೀಜಿಂಗ್, ಜನವರಿ 27 ,ಹಾಂಗ್ ಕಾಂಗ್‌ನ ಆಸ್ಪತ್ರೆಯಲ್ಲಿ ದೇಶಿಯ ಬಾಂಬ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ವರದಿಯಾಗಿಲ್ಲ.ಆದರೆ ಈ ಘಟನೆಯ ಹಿಂದಿ ಶಕ್ತಿ ಯಾರು ಎಂಬುದನ್ನು ಪತ್ತೆ ಮಾಡಲು ಪೊಲೀಸರು ವ್ಯಾಪಕ ಶೋಧನೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಸ್ಫೋಟವು ಹಾಂಕಾಂಗ್‌ನ ಕ್ಯಾರಿಟಾಸ್ ವೈದ್ಯಕೀಯ ಕೇಂದ್ರದಲ್ಲಿ ಭಾನುವಾರ ಸ್ಪೋಟ ಸಂಭವಿಸಿದ್ದು, ನಂತರ 20 ರೋಗಿಗಳನ್ನು ಸ್ಥಳಾಂತರಿಸಲಾಗಿದೆ.ಅಪಘಾತ ಮತ್ತು ತುರ್ತು ವಿಭಾಗದ ಸಿಬ್ಬಂದಿ ಸಾರ್ವಜನಿಕ ಶೌಚಾಲಯದಲ್ಲಿ ಜೋರಾಗಿ ಅಬ್ಬರಿಸುವುದನ್ನು ಕೇಳಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ. ಆಸ್ಪತ್ರೆಗೆ ಹಾನಿಯನ್ನುಂಟುಮಾಡುವ ಉದ್ದೇಶಪೂರ್ವಕ ಕೃತ್ಯವನ್ನು ಖಂಡಿಸುವುದಾಗಿ ಅವರು ಹೇಳಿದರು.