ಗಣಿತದ ಮೂಲ ಪರಿಕಲ್ಪನೆಗಳನ್ನು ಅಥರ್ೈಸಿದಲ್ಲಿ ಉತ್ತಮ ಫಲಿತಾಂಶ ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮುಳ್ಳೂರ


                                                  ಬೆಳಗಾವಿ 26: ಪ್ರಸಕ್ತ ಜೀವನದಲ್ಲಿ ಮೌಲ್ಯಗಳ ಅಗತ್ಯತೆಯನ್ನು ಹಾಗೂ ಮೌಲ್ಯ ತಳಹದಿಯೇ ಶಿಕ್ಷಣ. ಸಮಾಜದ ಉತ್ತಮ ನಾಗರಿಕರನ್ನಾಗಿ ಮಾಡುವುದಲ್ಲದೆ, ಅದು ಉತ್ತಮ ಸಮಾಜ ನಿಮರ್ಾಣಕ್ಕೆ ನಾಂದಿ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಅಂಬಿಕಾ ಅಕ್ಕ ಹೇಳಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಹಾಂತೇಶ ನಗರದಲ್ಲಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರ ಬೆಳಗಾವಿ ವತಿಯಿಂದ ಆಯೋಜಿಸಲಾಗಿದ್ದ ಪ್ರೌಢಶಾಲಾ ಗಣಿತ ಶಿಕ್ಷರಿಗೆ ಜಿಲ್ಲಾ ಮಟ್ಟದ ಗಣಿತ ವಿಷಯ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

     ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಮತ್ತು ಅಭಿವೃದ್ಧಿ ನಿದರ್ೇಶಕ ಮುಳ್ಳುರ ಮಾತನಾಡುತ್ತ ಗಣಿತದ ಮೂಲ ಪರಿಕಲ್ಪನೆಗಳನ್ನು ಅಥರ್ೈಸಿಕೊಳ್ಳುವಂತೆ ಶಿಕ್ಷಕರು ಮಾಡಿದಲ್ಲಿ ಮಕ್ಕಳು ಗಣಿತ ವಿಷಯದಲ್ಲಿ ಉತ್ತಮ ಫಲಿತಾಂಶ ಸಾಮಥ್ರ್ಯ ಗಳಿಸಲು ಸಾದ್ಯ ಎಂದು ಹೇಳಿದರು.

      ತರಬೇತಿ ನಿದರ್ೇಶಕರು, ಡಯಟ್ ಉಪನ್ಯಾಸಕಿ ಡಾ; ಆರ್. ಬಿ. ಕಿತ್ತೂರ ಮಾತನಾಡುತ್ತ ಪರಿವರ್ತನೆ ಪ್ರಗತಿಗೆ ನಾಂದಿ, ಅದಕ್ಕಾಗಿ ಬದಲಾಗುತ್ತಿರುವ ಸಮಾಜಕ್ಕೆ, ಶಿಕ್ಷಣದಲ್ಲಿ ಬದಲಾವಣೆ ಹಾಗೂ ತರಬೇತಿ ತಂತ್ರಗಳ ಅವಶ್ಯಕತೆ ಇದೆ ಎಂದು ಹೇಳಿದರು.

       ಡಯಟ್ನ ಉಪಪ್ರಾಚಾರ್ಯ ಯಮ್. ಯನ್. ದಂಡಿನ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಭುವನೇಶ್ವರಿ ಹೀರೇಮಠ, ಶಿವಾನಂದ ಗಿರಿಯಪ್ಪಗೌಡ್ರ, ಹಾಗೂ ಬಿ, ಜಿ, ಪಮ್ಮಾರ ಮುಂತಾದವರು ಉಪಸ್ಥಿತರಿದ್ದರು.

      ಡಯಟ್ ಉಪನ್ಯಾಸಕಿ ಡಾ; ಆರ್. ಬಿ. ಕಿತ್ತೂರ. ಸ್ವಾಗತಿಸಿದರು. ಡಯಟ್ ಉಪನ್ಯಾಸಕ ಸದಲಗಿಯವರು ನಿರೂಪಿಸಿ ವಂದಿಸಿದರು..