ವಾರ್ಷಿಕ ಸಂಪ್ರದಾಯದ ಕಾರ್ತಿಕೋತ್ಸವ

ವಾರ್ಷಿಕ ಸಂಪ್ರದಾಯದ ಕಾರ್ತಿಕೋತ್ಸವ The annual tradition of Kartik festival


ರಾಣೇಬೆನ್ನೂರು 06: ಇಲ್ಲಿನ ಸಿದ್ದೇಶ್ವರ ನಗರದ ಪದ್ಮಶಾಲಿ ಸಮಾಜದ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವವು ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರು, ಗಣ್ಯರು ಸಮಾಜದ ಸಮುದಾಯ ಭವನವನ್ನು ಲೋಕಾರೆ​‍್ಣಗೊಳಿಸಿದರು. ಅಧ್ಯಕ್ಷ ಹನುಮಂತಪ್ಪ ಮುಕ್ತೆನಹಳ್ಳಿ, ನಾಗರಾಜ್ ಅಗಡಿ, ಕೊಟ್ರೇಶಪ್ಪ ಎಡೇಹಳ್ಳಿ, ಶಂಕರಣ್ಣ ಗರಡಿಮನಿ, ಕರಬಸಪ್ಪ ಕಡ್ಲಿಬಾಳ, ಪರಶುರಾಮ ಅಗಡಿ, ಲಕ್ಷ್ಮಣ ಕಡ್ಲಿಬಾಳ, ಮಾರುತಿ ಗರಡಿಮನಿ, ಪ್ರವೀಣ್ ಗುತ್ತೂರ್, ನಾಗರಾಜ ಕಾಸಲ್, ಮಂಜುನಾಥ್ ಕಂಚಿ, ಭೋಜರಾಜ ರಂಗನವರ್ ಸೇರಿದಂತೆ ಮತ್ತಿತರಗಣ್ಯರು ಉಪಸ್ಥಿತರಿದ್ದರು. ಸಮುದಾಯ ಭವನದ ನಿರ್ಮಾಣ ಕಾರ್ಯಕ್ಕೆ ತನು ಮನ ಧನ ಕಾಯಕ ದಾಸೋಹಿಗಳಾದ ನೂರಾರು ಅಭಿನಂದಿಸಿ ಗೌರವಿಸಿ ಸನ್ಮಾನಿಸಲಾಯಿತು.