ಸಾಧಕರಿಗೆ ಸಾವಿಲ್ಲಾ. ಅವರ ಸಾಧನೆ ಭೂಮಿ ಇರುವ ತನಕ ಅಜರಾಮರವಾಗಿವೆ : ಕಮಲ ರತ್ನ ಬಂತೇಜಿ
The achievers do not die. Their achievements remain immortal as long as the earth exists: Kamala Rat
ಲೋಕದರ್ಶನ ವರದಿ
ಹಾವೇರಿ 30: ಸಾಧಕರಿಗೆ ಸಾವಿಲ್ಲಾ. ಅವರ ಸಾಧನೆಯ ಕಾರ್ಯಗಳನ್ನು ಭೂಮಿ ಇರುವ ತನಕ ಅಜರಾಮರವಾಗಿ ಇರಲಿವೆ. ಭಾರತದ ಇತಿಹಾಸದಲ್ಲಿ ಮಹಿಳಾ ಸಾಧಕಿಯರ ಪಾತ್ರ ಸದಾ ಸ್ಮರಣೀಯವಾಗಿದೆ ಎಂದು ಹಾವೇರಿ ನಿಯೋಜಿತ ಗೌತಮಿ ಮೌರ್ಯ ಬುದ್ಧ ವಿಹಾರದ ಪರಮಪೂಜ್ಯ ಕಮಲ ರತ್ನ ಬಂತೇಜಿ ಅವರು ಹೇಳಿದರು. ಇಲ್ಲಿನ ರಾಜೇಂದ್ರನಗರದ ಸಿಂದಗಿ ಸಭಾಭವನದಲ್ಲಿ ಕರ್ನಾಟಕ ಪ್ರದೇಶ ಮೌರ್ಯ ಮಹಾ ಸಂಸ್ಥಾನ,ಹಾವೇರಿ.ಸಮತಾ ಸೈನಿಕ ದಳ ಡಾ. ಅಂಬೇಡ್ಕರವಾದ ಸಂಯುಕ್ತ ಆಶ್ರಯದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿ ಮೌರ್ಯ ಜನ್ಮ ದಿನಾಚಾರಣೆಯನ್ನು ಭಾರತದ ಸಾಮಾಜಿಕ ಸಮಾನತೆ ಸಂಕೇತದ ದಿನವನ್ನಾಗಿ ಹಾಗೂ ಮಾತೋಶ್ರೀ ರಾಮಾಬಾಯಿ ಅಂಬೇಡ್ಕರರವರ ಜನ್ಮ ದಿನವನ್ನು ರಾಷ್ಟ್ರೀಯ ಮಹಿಳಾ ಸ್ವಾತಂತ್ರ್ಯ ದಿನ ಆಚರಣೆ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಅನೇಕ ಸಾಮಾಜಿಕ ಅವೈಜ್ಞಾನಿಕ ಪದ್ದತಿಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಸಮಾಜದಲ್ಲಿ ಮಹಿಳೆಯ ಹಕ್ಕುಗಳ ರಕ್ಷಣೆಗಾಗಿ ಹಲವಾರು ಮಹಿಳೆಯರು ಸಮಾಜಿಕ ಹೋರಾಟಗಳನ್ನು ಮಾಡಿದ್ದಾರೆ.ಎಲ್ಲರಿಗೂ ಸಮಾನತೆಯಡಿ ಜೀವನ ನಡೆಸಲು ಸಹಕಾರಿಯಾಗಲು ಮಹಿಳಾ ಸಾಧಿಕಿಯರು ಶ್ರಮಮಿಸಿದ್ದಾರೆ.ಮಾತೋಶ್ರೀ ತಾಯಿ ಜೀಜಾಬಾಯಿ,ಅಕ್ಷರದ ಅವ್ವ ಸಾವಿತ್ರಾಬಾಯಿ ಪುಲೆ, ಕಿತ್ತೂರರಾಣಿ ಚೆನ್ನಮ್ಮ.ಕೆಳದಿ ಚನ್ನಮ್ಮ,ಮಾತೋಶ್ರೀ ರಾಮಾಬಾಯಿ ಅಂಬೇಡ್ಕರ್ ಇವರು ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಪ್ರಮುಖ ಪಾತ್ರವಹಿಸಿದ್ದಾರೆ. ಇವರೆಲ್ಲರ ಬದುಕು ನಮಗೆ ಆದರ್ಶವಾಗಬೇಕು ಎಂದು ಕಮಲ ರತ್ನ ಬಂತೇಜಿ ಅವರು ಹೇಳಿದರು.
ಕರ್ನಾಟಕ ಪ್ರದೇಶ ಮೌರ್ಯ ಮಹಾ ಸಂಸ್ಥಾನ ಹಾಗೂ ಸಮತಾ ಸೈನಿಕ ದಳದ ಅಧ್ಯಕ್ಷರಾದ ಎನ್.ಎನ್.ಗಾಳೆಮ್ಮನವರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಅಖಂಡ ಪ್ರಾಚೀನ ಭಾರತವು ಸಾಮ್ರಾಟ್ ಅಶೋಕ ಚಕ್ರವರ್ತಿ ಆಡಳಿತದಲ್ಲಿ ಅಪಘಾನಿಸ್ಥಾನದಿಂದ ಬರ್ಮಾದವರಿಗೂ ಭೂ ಪ್ರದೇಶವನ್ನು ಹೊಂದಿತ್ತು. ಇವರ ಆಡಳಿತದಲ್ಲಿ ಮಹಿಳೆಯರು ಹಾಗೂ ಪುರುಷರು ಸಮಾನ ಅವಕಾಶ ಹೊಂದಿದ್ದರು.ಭಾರತವು 565 ಸಂಸ್ಥಾನಗಳು ಇದ್ದ ಸಂದರ್ಭದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರು ಅಖಂಡ ಭಾರತದ ಪರಿಕಲ್ಪನೆಯನ್ನು ನೀಡುತ್ತಾ ಭಾರತ ಏಕೀಕರಣ ಮಾಡಲು ಶ್ರಮಿಸಿದ ಫಲವಾಗಿ ಸಂವಿಧಾನ ಬರೆಯುವ ಜವಾಬ್ದಾರಿಯನ್ನು ಅಂದಿನ ನಾಯಕರು ವಹಿಸಿದರು.ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕಲ್ಪಸುವಲ್ಲಿ ಮತ್ತು ರಾಷ್ಟ್ರ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಂವಿಧಾನದಲ್ಲಿ ಅವಕಾಶ ಒದಗಿಸಿಕೊಟ್ಟರು.ಮಹಿಳೆಯರಿಗೆ ಇನ್ನೂ ಅವಕಾಶ ನೀಡಲು ಸಮಾಜದ ಮುಂದಾಗಬೇಕು ಎಂದು ಎನ್ ಎನ್ ಗಾಳೆಮ್ಮೆನವರ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉಡಚಪ್ಪ ಮಾಳಗಿ ಸಮಸಮಾಜವನ್ನು ಕಟ್ಟುವ ಕೆಲಸವನ್ನು ಮಹಾನ್ ಸಾಧಕರು ಮಾಡಿದ್ದಾರೆ.ಸಾಧಕ ಮಹಿಳೆಯರ ಮೌಲ್ಯಗಳನ್ನು ತಾಯಂದಿರು ಅಳವಡಿಸಿಕೊಳ್ಳಬೇಕಾಗಿದೆ.ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಭಾರತಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ.ಎನ್.ಎನ್.ಗಾಳೆಮ್ಮನವರ ಅವರು 35 ವರ್ಷಗಳಿಂದ ನಿರಂತರವಾಗಿ ಸಮಾಜದ ಹಿಂದುಳಿದವರ ಪರವಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.ನಿಮ್ಮೊಂದಿಗೆ ನಾವು ಇದ್ದೇವೆ.ಸ್ವಾಭಿಮಾನದ ಬದುಕಿಗೆ ಹೋರಾಟ ಮಾಡೋಣ ಎಂದರು.ಪತ್ರಕರ್ತರಾದ ನಿಂಗಪ್ಪ ಎಂ ಆರೇರ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಾದ ಶ್ರೀಮತಿ ದುರಗವ್ವ ಪೂಜಾರ,ಮಮತಾಜ ದೇವಗೇರಿ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.ಚಿಕ್ಕಲಿಂಗದಹಳ್ಳಿಯ ಶ್ರೀ ಮೈಲಾರಲಿಂಗೇಶ್ವರ ಡೊಳ್ಳಿನ ಸಂಘದಿಂದ ಪೌರಾಣಿಕ ಡೊಳ್ಳಿನ ಪದಗಳು ಪ್ರಸ್ತುಗೊಂಡವು.ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಶ್ರೀಮತಿ ನಿರ್ಮಲಾ ಅಂಟಗಣಿ,ಉಳವೆಪ್ಪ ಕಲಾದಗಿ,ಶ್ರೀಮತಿ ರಾಧಾ ಈಳಗೇರ,ಶ್ರೀಮತಿ ಜಯಮ್ಮ ಹೊನಕೇರಿ.ಪಾರವ್ವ ಕುರುಬರ,ಶ್ರೀಮತಿ ಚನ್ನವ್ವ ಮುಳಗುಂದ, ಕು.ಪಲ್ಲವಿ ಚಾಲುಕ್ಯ,ಗೌತಮಿ ಮೌರ್ಯ,ತಿರಕಪ್ಪ ಬಾತಿ,ಶ್ರೀಕಾಂತ ಹೊಳೆಪ್ಪನವರ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು,ಮಹಿಳೆಯರು ಪಾಲ್ಗೊಂಡಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 