ಎಲ್ಲವನ್ನೂ ಎದುರಿಸಿ ಹೋರಾಟವನ್ನು ಜೀವಂತವಾಗಿ ಇಟ್ಟಿರುವುದೇ ಸಾಧನೆ : ಭೂಮರಡ್ಡಿ

 ಎಲ್ಲವನ್ನೂ ಎದುರಿಸಿ ಹೋರಾಟವನ್ನು ಜೀವಂತವಾಗಿ ಇಟ್ಟಿರುವುದೇ ಸಾಧನೆ : ಭೂಮರಡ್ಡಿ The achievement is to keep the fight alive in the face of everything: Bhumaradi

ಲೋಕದರ್ಶನ ವರದಿ 

ಎಲ್ಲವನ್ನೂ ಎದುರಿಸಿ ಹೋರಾಟವನ್ನು ಜೀವಂತವಾಗಿ ಇಟ್ಟಿರುವುದೇ ಸಾಧನೆ : ಭೂಮರಡ್ಡಿ 


ಕೊಪ್ಪಳ 02:  ನಗರಕ್ಕೆ ಹೊಂದಿಕೊಂಡು ಬೃಹತ್ ಕಾರ್ಖಾನೆ ಹಾಕುವದಕ್ಕೆ ಅನುಮತಿ ಕೊಟ್ಟ ಆಡಳಿತ ಮತ್ತು ಸರಕಾರದ ತಪ್ಪುಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಇಲ್ಲಿಯವರೆಗೆ ಕಾಯ್ದುಕೊಮಡು ಬಂದಿರುವುದೇ ದೊಡ್ಡ ಸಾಧನೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೂಮರಡಡಿ ಹೇಳಿದರು. 

ಅವರು ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ ಜಂಟಿ ಕ್ರಿಯಾ ವೇದಿಕೆ (ಕೊಪ್ಪಳ ಜಿಲ್ಲಾ  ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ) ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್‌ ಇಂಡಿಯಾ ಸೇರಿ ಎಲ್ಲಾ ಕಾರ್ಖಾನೆಗಳ ವಿಸ್ತೀರ್ಣ ಮತ್ತು ಆರಂಭವನ್ನು ವಿರೋಧಿಸಿ ಅನಿರ್ದಿಷ್ಟವಾಧಿ ಧರಣಿ ಸತ್ಯಾಗ್ರಹದ ಎರಡನೇ ದಿನ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. 

ಮುಂದುವರೆದು ಮಾತನಾಡಿದ ಸುರೇಶ ಭೂಮರೆಡ್ಡಿ ಕ್ಷೇತ್ರದ ಅಭಿವೃದ್ಧಿ ಅಂದರೆ ಅದು ಇಲ್ಲಿರುವ ಆರೋಗ್ಯ ಕೆಡಿಸುವದಲ್ಲ. ಮೊದಲು ಜೀವ ಮತ್ತು ಆರೋಗ್ಯ ಆನಂತರವಷ್ಟೇ ಉದ್ಯೋಗ, ಬೇಕಾದರೆ ಉದ್ಯೋಗ ಸೃಜನೆಯ ಮಾಲಿನ್ಯಕಾರಕವಲ್ಲದ ಕಾರ್ಖಾನೆಗಳನ್ನು ಸ್ಥಾಪಿಸಲಿ, ಅಲ್ಲದೆ ಈ ಹೋರಾಟ ನಗರದ ಪ್ರತಿಯೊಬ್ಬರ, ಬಾಧಿತಗೊಂಡ ಹಳ್ಳಿಗಳ ಜನರದ್ದಾಗಿದೆ. ಇದಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತದೆ ಎಂದರು. 

ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಎರಡನೇ ದಿನ ಕಲ್ಯಾಣನಗರ ಆಂಜನೇಯ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ನಡೆಸಲಾಯಿತು. ಈ ವೇಳೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಆಗಮಿಸಿ ಬೆಂಬಲ ಸೂಚಿಸಿ, ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡುವ ಭರವಸೆ ನೀಡಿದರು. 

ಕೃಷಿಬೆಲೆ ಆಯೋಗದ ಸದಸ್ಯರಾದ ಡಿ.ಎಚ್‌. ಪೂಜಾರ ಮಾತನಾಡಿ, ಇಲ್ಲಿನ ಕಂಪನಿಗಳ ಪ್ರಭಾವ ಹೋರಾಟ ಮುಂದುವರಿಸದಂತೆ ತಡೆಮಾಡುತ್ತಿದೆ. ನಮ್ಮ ಸಂವಿಧಾನದತ್ತ ಹೋರಾಟದ ಹಕ್ಕನ್ನು ಕಿತ್ತುಕೊಳ್ಳುವ ಎಲ್ಲಾ ಹತಾಶ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ, ಈ ಭಾಗದ ಜನ ಗವಿಶ್ರೀಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಬದುಕಿನ ಭರವಸೆ ಸ್ವಾಮೀಜಿಗಳ ಮೇಲಿದೆ. ಅವರು ಕೂಡಲೆ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಮನವಿ ಮಾಡಿದರು. ಮಹಿಳಾ ಹೋರಾಟಗಾರರಾದ ಸಾವಿತ್ರಿ ಮುಜುಮದಾರ, ಹೈಕೋರ್ಟ್‌ ವಕೀಲರಾದ ಮಂಜುನಾಥ ಬಾಗೆಪಲ್ಲಿ ಮಾತನಾಡಿದರು.  

ಗುತ್ತಿಗೆದಾರರಾದ ಕೃಷ್ಣಾ ಎಂ. ಇಟ್ಟಂಗಿ, ಹನುಮೇಶ ಕಡೇಮನಿ, ಸುಕರಾಜ ತಾಳಕೆರಿ, ಬಿ.ವಿರುಪಾಕ್ಷಿ ಕಿನ್ನಾಳ, ದೇವಪ್ಪ ಅರಕೇರಿ, ಜಿ.ವಿ.ಅಂಗಡಿ, ಜಿ. ಶ್ರೀನಿವಾಸುರಾವು, ಶಿವಪುತ್ರ​‍್ಪ ಹತ್ತಿ, ಬಿ. ಮಾರುತಿ, ಎಲ್‌. ಎಂ. ಮಲ್ಲಯ್ಯ, ವಿಶ್ವನಾಥ ತಮ್ಮಣ್ಣರ, ವೀರಣ್ಣ ಹುಣಸಿಮರದ, ಶ್ರೀಧರ ಬನ್ನಿಕೊಪ್ಪ, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ಡಾ. ಮಂಜುನಾಥ ಸಜ್ಜನ, ಭೀಮಸೇನ ಕಲಕೇರಿ, ಯಲ್ಲಪ್ಪ ಬಂಡಿ, ಬಸವರಾಜ. ಎನ್‌. ಯರದಿಹಾಳ, ರಮೇಶ ಪಾಟೀಲ್ ಬೇರಗಿ, ವಕೀಲ ಎಸ್‌. ಎಚ್‌. ಇಂಗಳದಳ್ಳಿ, ಶಾಂತಯ್ಯ ಅಂಗಡಿ, ಹನುಮಂತಪ್ಪ ಗೊಂದಿ, ಬಸವರಾಜ ಶೀಲವಂತರ, ಫಾಸ್ಟರ್ ಅಸೋಸಿಯೇಶನ್ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಎಸ್‌. ಎ. ಗಫಾರ್, ಮಖ್ಬೂಲ್ ರಾಯಚೂರು, ಶಿವಪ್ಪ ಹಡಪದ, ಬಸವರಾಜ ನರೇಗಲ್, ದುರುಗೇಶ ಹಿರೇಮನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಸುಂಕಮ್ಮ ಗಾಂಧಿನಗರ, ಗಂಗಮ್ಮ, ಭೀಮಪ್ಪ ಯಲಬುರ್ಗಿ ಇದ್ದರು.