ಹಜರತ್ ಪೀರ್ ಪಾಷಾ ಖಾದ್ರಿ ಅವರ ಉರುಸ್ ಸಂಭ್ರಮ
The Urs celebrations of Hazrat Peer Pasha Qadri
ಕೊಪ್ಪಳ, ಆ.29: ನಗರದ ದಿಡ್ಡಿಕೇರಿ ಓಣಿಯ ನಿವಾಸಿ ಪೀರ್ ಪಾಷಾ ಖಾದ್ರಿ ಅವರ ವಂಶದ ಖಲೀಫಾ ಸೂಫಿ ಶೇಖ್ ಜಾಕೀರ್ ಹುಸೇನ್ ಷಾ ಖಾದ್ರಿ ಸಾಲುಗುಂದ ರವರ ಮನೆಯಲ್ಲಿ ಪ್ರಸಿದ್ಧ ಹಜರತ್ ಸೈಯದ್ ನೂರುಲ್ಲಾ ಖಾದ್ರಿ ಉರ್ಫ್ ಹಜರತ್ ಪೀರ್ ಪಾಷಾ ಖಾದ್ರಿ ಅವರ ಉರುಸ್ನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಉರುಸ್ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಪ್ರವಚನ ಕಾರ್ಯಕ್ರಮದ ನೇತೃತ್ವವನ್ನು ಖಾನಕಾಹ್ ಪೀಠ ನಿರ್ಮಿತಿ ಕೇಂದ್ರದ ಪೀಠಾಧಿಪತಿ ಹಜರತ್ ಸೈಯದ್ ಷಾ ಅಬ್ದುಲ್ ವಹಾಬ್ ನದಿರಾ ಖಾದ್ರಿ ಉರ್ಫ್ ಮುದಸಿರ್ ಪಾಷಾ ಖಾದ್ರಿ ಸಾಹೇಬ್ ವಹಿಸಿದ್ದರು.
ಅವರು ಪ್ರವಚನ ನೀಡಿ, ನೆರೆದಿದ್ದ ಭಕ್ತ ಸಮೂಹ ಹಾಗೂ ಸಾರ್ವಜನಿಕರಿಗೆ ಆಶೀರ್ವಾದ ನೀಡಿದರು. ಗದಗ್ ಖಾದರ್ ಭಾಷಾ ಮುಕುಂದ ಶರೀಫ್ ದರ್ಗಾದ ಪೀಠಾಧಿಪತಿ ಹಾಗೂ ನ್ಯಾಯವಾದಿ ಸೈಯದ್ ರೆಹಮತುಲ್ಲಾ ಖಾದ್ರಿ ಸಾಹೇಬ್ ಕೂಡ ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಸೂಫಿ ಅಬ್ದುಲ್ ಖದಿರ್ ಸಾಹೇಬ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಂತರ ಸಾಮೂಹಿಕ ವಿಶೇಷ ಪ್ರಾರ್ಥನೆಯೊಂದಿಗೆ ಅನ್ನಸಂತರೆ್ಣ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರ್ಮಗುರುಗಳ ಆಶೀರ್ವಾದ ಪಡೆದುಕೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 