ಇರಾನ್, ಇರಾಕ್ ವಾಯು ಪ್ರದೇಶ ದಾಟದಂತೆ ತನ್ನ ವಿಮಾನಗಳಿಗೆ ನಿಷೇಧ ವಿಧಿಸಿರುವ ಅಮೆರಿಕಾ

ವಾಷಿಂಗ್ಟನ್, ಜ 8 ಇರಾನ್ ಮತ್ತು ಇರಾಕ್ ಜತೆಗೆ ಪರ್ಷಿಯನ್ ಹಾಗೂ ಓಮನ್ ಕೊಲ್ಲಿಯ ವಾಯುಪ್ರದೇಶಗಳ ಮೇಲೆ ಹಾರಾಟ ನಡೆಸದಂತೆ ಅಮೆರಿಕಾ ವಿಮಾನಗಳಿಗೆ, ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಿಷೇಧಾಜ್ಞೆಗಳನ್ನು ವಿಧಿಸಿದೆ. ಇರಾನ್ ಮತ್ತು ಇರಾಕ್ ದೇಶಗಳ ಜತೆಗೆ ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿ ಸಮುದ್ರಗಳ ಮೇಲಿನ ವಾಯುಪ್ರದೇಶಗಳ ಮೇಲೆ ಅಮೆರಿಕಾ ವಿಮಾನಗಳು ಹಾರಾಟ ನಡೆಸದಂತೆ ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನ್ನ ವಿಮಾನಯಾನ ಸಂಸ್ಥೆಗಳಿಗೆ ಕಠಿಣ ನಿಷೇಧದ ಆದೇಶ ಜಾರಿ ಮಾಡಿದೆ.ಇರಾನ್ ಮತ್ತು ಇರಾಕ್ ದೇಶಗಳೊಂದಿಗೆ ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿ ವಾಯು ಪ್ರದೇಶಗಳ ಮೇಲೆ ವಿಮಾನಗಳ ಹಾರಾಟ ನಿರ್ಬಂಧಿಸಿ ಯುಎಸ್ ಫಡರಲ್ ಏವಿಯೇಷನ್ ನೋಟಿಸ್ ಜಾರಿಗೊಳಿಸಿದೆ. ಕೊಲ್ಲಿ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಭಾರತ ಸಹ ಇರಾನ್ ಮತ್ತು ಇರಾಕ್ ದೇಶಗಳ ವಾಯು ಪ್ರದೇಶಗಳ ಮೇಲೆ ಭಾರತೀಯ ವಿಮಾನಸಂಸ್ಥೆಗಳ ವಿಮಾನಗಳು ಹಾರಾಟ ಕೈಗೊಳ್ಳದಂತೆ ಭಾರತ ಆದೇಶಿಸಿದೆ.ಇರಾನ್ ಮತ್ತು ಇರಾಕ್ ವಾಯುಪ್ರದೇಶದ ಮೇಲಿನ ವಿಮಾನ ಹಾರಾಟ ಅತಿ ಹೆಚ್ಚು ಅಪಾಯಕಾರಿಯಾಗಿದೆ, ಎಂತಹ ಪರಿಸ್ಥಿತಿಯಲ್ಲೂ ಈ ಪ್ರದೇಶವನ್ನು ಬಳಕೆ ಮಾಡದಂತೆ ಅಮೆರಿಕ ನಿಷೇಧಾಜ್ಞೆ ಜಾರಿಗೊಳಿಸಿದೆ. ಇರಾನ್ ದೇಶದ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸುಲೈಮಾನ್ ಅವರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕಾ ಮಿಲಿಟರಿ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಇರ್ಬ್ಲ್, ಅಲ್-ಅಸದ್ ನಲ್ಲಿರುವ ಅಮೆರಿಕಾ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಹಿನ್ನಲೆಯಲ್ಲಿ ಅಮೆರಿಕಾದ ಫೆಡರಲ್ ಏವಿಯೇಷನ್ ಆಡಳಿತ ಈಗಾಗಲೇ ಅಮೆರಿಕಾದ ನಾಗರೀಕ ವಿಮಾನ ಯಾನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೈಲೆಟ್ ಗಳಿಗೆ ಆದೇಶಗಳನ್ನು ನೀಡಿದೆ.