ದಿ. ಶಿವಲಿಂಗಪ್ಪ ಅಂಗಡಿ ಕ್ರೀಯಾಶೀಲ ವ್ಯಕ್ತಿತ್ವದ ವ್ಯಕ್ತಿ: ಶೆಟ್ಟರ
ಧಾರವಾಡ 18: ದಿ. ಶಿವಲಿಂಗಪ್ಪ ಅಂಗಡಿ ಓರ್ವ ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ವೃತ್ತಿಧರ್ಮ ಕಾಪಾಡುವುದರೊಂದಿಗೆ ಶಿಸ್ತುಬದ್ಧ ಜೀವನ ಹಾಗೂ ಕ್ರೀಯಾಶೀಲ ವ್ಯಕ್ತಿತ್ವದ ಜನಮಾನಸದ ವ್ಯಕ್ತಿಯಾಗಿದ್ದರು ಎಂದು ಡಾ. ಶಿವಾನಂದ ಶೆಟ್ಟರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಶಾಂತಾದೇವಿ ಶಿವಲಿಂಗಪ್ಪ ಅಂಗಡಿ ಸಂಸ್ಮರಣ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಲಿಂಗಪ್ಪ ಅಂಗಡಿ ಅವರ ಇಂಗ್ಲೀಷ ಕೃತಿ “ಬಸವಣ್ಣನವರ ವಚನಗಳು” ಕುರಿತು ಮಾತನಾಡುತ್ತಿದ್ದರು.
ದಿ. ಶಿವಲಿಂಗಪ್ಪ ಅಂಗಡಿ ಅಧ್ಯಯನ ಮಾಡಿದ್ದು ಗಣಿತ. ಆದರೆ ಪ್ರೊ. ಶ್ರೀನಿವಾಸ ಅಯ್ಯಂಗಾರ ಎಂಬ ಆಂಗ್ಲ ಭಾಷಾ ಪ್ರಾಧ್ಯಾಪಕರ ಪ್ರಭಾವದಿಂದ ಆಂಗ್ಲ ಭಾಷೆಯಲ್ಲಿ ಆಸಕ್ತಿ ಹೊಂದಿದ್ದರು. ಪ್ರೊ. ಶ್ರೀನಿವಾಸ ಅಯ್ಯಂಗಾರ ಅಂಡಿಯವರು ಬರೆದ ಬಸವಣ್ಣನವರ ವಚನಗಳು ಕೃತಿಗೆ ಪ್ರಸ್ತಾವನೆ ಬರೆದಿದ್ದಾರೆ. ಅಂಗಡಿಯವರು ಈ ಆಂಗ್ಲ ಭಾಷಾ ಅನುವಾದಿತ ಕೃತಿಯಲ್ಲಿ ಪ್ಲೇಟೊ, ಡಾಂಟೆ, ಅರಬಿಂದೊರ ಪ್ರಭಾವವಿದೆ.
ಬಸವಣ್ಣನವರ ಜೀವನ ಹಾಗೂ ಸಾಧನೆ ಒಳಗೊಂಡ ಬಸವ ದರ್ಶನ ಎಂಬ ಕೃತಿಯನ್ನು ಅಂಗಡಿಯವರು ಆಂಗ್ಲಭಾಷೆಗೆ ಅನುವಾದಿಸಿದರು. ತಿಪ್ಪೇರುದ್ರಸ್ವಾಮಿ ಅವರ ಕೃತಿ ಕರ್ತಾರಣ ಕಮ್ಮಟ ಹಾಗೂ ಅನೇಕ ಶಿವಶರಣರ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ವಚನ ಸಾಹಿತ್ಯದ ಕಂಪನ್ನು ವಿದೇಶಿಯರೂ ಓದುವಂತೆ ಮಾಡಿದರು. ಇವರ ಪಾಂಡಿತ್ಯ ಗಮನಿಸಿದ ಕ.ವಿ.ವಿ. ಕನ್ನಡ ಹಾಗೂ ತತ್ವಶಾಸ್ತ್ರದ ಪ್ರಾಧ್ಯಾಪಕರೆಂದು ನೇಮಕ ಮಾಡಿ ತನ್ನ ಗೌರವ ಹೆಚ್ಚಿಸಿಕೊಂಡಿತು. ಕುವೆಂಪು, ಬೇಂದ್ರೆ, ಕಣವಿ ಹಾಗೂ ಗೋಕಾಕರು ಇವರ ಪಾಂಡಿತ್ಯವನ್ನು ಪ್ರಶಂಶಿಸಿದ್ದು ಉಂಟು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ದಿ. ಶಿವಲಿಂಗಪ್ಪ ಅಂಗಡಿ ಅವರದು ಅಸಾಧಾರಣ ವ್ಯಕ್ತಿತ್ವ. ಅವರು ಬಸವ ತತ್ವಗಳ ಪ್ರತಿಪಾದಕರಾಗಿ ಬಸವಾದಿ ಶರಣರಂತೆ ಕಾಯಕದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ವೃತ್ತಿ ಜೀವನ ನಡೆಸಿದವರು ಎಂದರು.
ವೇದಿಕೆಯ ಮೇಲೆ ಅಂಗಡಿ ಅವರ ಪುತ್ರ ಜಿ.ಎಸ್. ಅಂಗಡಿ ಉಪಸ್ಥಿತರಿದ್ದರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಎಂ. ಬಿ. ಹೆಗ್ಗೇರಿ ಸೇರಿದಂತೆ ಅಂಗಡಿ ಪರಿವಾರದವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 