ವಚನಾನಂದಶ್ರೀಗಳ ದ್ವಿತೀಯ ಪೀಠಾರೋಹಣ

ಲೋಕದರ್ಶನವರದಿ

ರಾಣೇಬೆನ್ನೂರು: ಪಂಚಮಸಾಲಿ ಸಮಾಜದ ಪ್ರಪ್ರಥಮ ಜಾತ್ರಾ ಮಹೋತ್ಸವ ಹಾಗೂ ಅಕ್ಕಮಹಾದೇವಿ ವಚನ ವಿಜಯೋತ್ಸವ ಮತ್ತು ಹರಿಹರ ವೀರಶೈವ ಲಿಂಗಾಯತ ಪಂಚಮಶಾಲಿ ಪೀಠದ ವಚನಾನಂದ ಸ್ವಾಮಿಜಿಗಳವರ ದ್ವಿತೀಯ ಪೀಠಾರೋಹಣ ಸಮಾರಂಭವು ಜ.14 ಮತ್ತು 15 ರಂದು ಹರಿಹರದ ವೀರಶೈವ ಲಿಂಗಾಯತ ಪಂಚಮಶಾಲಿ ಮಠದಲ್ಲಿ ಬಹು ವಿಜೃಂಭಣೆಯಿಂದ ನಡೆಯಲಿವೆ ಎಂದು ಸ್ಥಳೀಯ ಜಾತ್ರಾ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಸಿ.ಆರ್.ಬಳ್ಳಾರಿ ಹೇಳಿದರು.

    ನಗರದ ಉನ್ನತಿ ಪಪೂ ಮಹಾವಿದ್ಯಾಲದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಈ ತಾಲೂಕಿನಿಂದ 20ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ತಾಲೂಕಿನಾದ್ಯಂತ ವಚನಾನಂದ ಶ್ರೀಗಳ ನೇತೃತ್ವದಲ್ಲಿ ಜಾಗೃತಿ ಸಭೆಯ ಮೂಲಕ ಸಂಘಟನೆ ಮಾಡಲಾಗಿದೆ ಎಂದರು. ಜ.14 ರಂದು ಬೆಳಗ್ಗೆ ಬ್ರಾಹ್ಮಿಮಹೂರ್ತದಲ್ಲಿ ಇಷ್ಟಲಿಂಗ ಮಹಾ ಪೂಜೆಯು ಬಾಲೆ ಹೊಸೂರಿನ ದಿಂಗಾಲೇಶ್ವರ ಶ್ರೀಗಳ ಮತ್ತು ಇಳಕಲ್ ಗುರು ಮಹಾಂತ ಶಿವಯೋಗಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದರು.

     ಜ.14 ರಂದು ಬೆಳಗ್ಗೆ 11.30ಕ್ಕೆ ವೀರರಾಣಿ ಕಿತ್ತೂರ ಚನ್ನಮ್ಮ ವೇದಿಕೆಯಲ್ಲಿ ನಡೆಯುವ ಹರ ಜಾತ್ರಾ ಮಹೋತ್ಸವ ಹಾಗೂ ಯುವ ಸಮಾವೇಶದ ದಿವ್ಯ ಸಾನಿಧ್ಯವನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಜಿಗಳು, ಬೆಂಗಳೂರಿನ ಆಟರ್್ ಆಫ್ ಲಿವಿಂಗ್ ಆಶ್ರಮದ ರವಿಶಂಕರ ಗುರೂಜಿ ವಹಿಸುವರು. ಮಾಜಿ ಸಚಿವ ಮುರುಗೇಶ ನಿರಾಣಿ ಸಮಾರಂಭ  ಉದ್ಘಾಟಿಸುವರು ಎಂದರು.

   ಬಿಜೆಪಿ ರಾಷ್ಟ್ರೀಯ ಕಾರ್ಯದಶರ್ಿ ಬಿ.ಎಲ್.ಸಂತೋಷ, ಶಾಸಕರಾದ ಅರುಣಕುಮಾರ ಪೂಜಾರ. ಡಾ. ಸುಧಾಕರ ಕೆ, ಅರವಿಂದ ಲಿಂಬಾವಳಿ, ವೀರಣ್ಣ ಚರಂತಿಮಠ, ಶಂಕರಗೌಡ ಮುನೇವನಹಳ್ಳಿ,  ಬಿಜೆಪಿ ಮುಖಂಡರಾದ ಬಿ.ವೈ. ವಿಜಯೇಂದ್ರ, ನವೀನ ಪಾಟೀಲ, ಚಂದ್ರಶೇಖರ ಪೂಜಾರ ಆಗಮಿಸುವರು ಎಂದರು.

   ಜ.15 ರಂದು ಬೆಳಗ್ಗೆ ಬ್ರಾಹ್ಮಿಮಹೂರ್ತದಲ್ಲಿ ಸುಮಾರು 2000 ಜನರಿಗೆ ಇಷ್ಟಲಿಂಗ ಮಹಾಪೂಜೆಯನ್ನು ಇಳಕಲ್ ಗುರು ಮಹಾಂತ ಶಿವಯೋಗಿಗಳು  ನಡೆಸಿಕೊಡುವರು, ಚಿತ್ರದುರ್ಗದ ಬಸವಕುಮಾರ ಶ್ರೀಗಳು, ತೀರ್ಥಹಳ್ಳಿಯ ರೇಣುಕಾನಂದ ಶ್ರೀಗಳು, ಶಿರಸಿಯ ಬಸವ ಮಲ್ಲಿಕಾಜರ್ುನ ದೇವರು, ಚಿತ್ರದುರ್ಗದ ಬಸವ ಮಾಚಿದೇವ ಶ್ರೀಗಳು, ಶಿವಮೊಗ್ಗದ ಬಸವ ಮರುಳಸಿದ್ದ ಶ್ರೀಗಳು, ಗಂಗಾಪುರದ ಮರುಳಶಂಕರ ಶ್ರೀಗಳು ಸಾನಿಧ್ಯ ವಹಿಸುವರು ಎಂದರು.

    ಬೆಳಗ್ಗೆ 8.30ಕ್ಕೆ ಮಹಾಕುಂಭಮೇಳ ನಡೆಯಲಿದೆ, 11 ಗಂಟೆಗೆ ನಡೆಯುವ ಮಹಿಳಾ ಸಮಾವೇಶವನ್ನು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಉದ್ಘಾಟಿಸುವರು. ಸಿರಿಗೇರಿಯ  ಡಾ.ಶಿವಮೂತರ್ಿ ಶಿವಾಚಾರ್ಯ ಶ್ರೀಗಳು, ಕನಕ ಗುರುಪೀಠದ ನಿರಂಜನಾನಂದ ಶ್ರೀಗಳು, ರಾಜನಹಳ್ಳಿಯ ಪ್ರಸನ್ನಾನಂದಪುರಿ ಶ್ರೀಗಳು, ವೇಮನ ಪೀಠದ ವೇಮನಾನಂದ ಶ್ರೀಗಳು ಸಾನಿಧ್ಯ ವಹಿಸುವರು. ಕೇಂದ್ರದ ಮಾಜಿ  ಸಚಿವ ಬಸವನಗೌಡ ಪಾಟೀಲ ಯತ್ನಾಳ, ನಾಗರತ್ನಮ್ಮ ಬಾವಿಕಟ್ಟಿ, ವಸಂತ ಹುಲ್ಲತ್ತಿ, ಶಾಸಕ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶಶಿಕಲಾ ಜೊಲ್ಲೆ, ನಟಿ ರಾಗಿಣಿ ದ್ವಿವೇದಿ ಆಗಮಿಸುವರು ಎಂದರು. ಅಂದು ಮದ್ಯಾಹ್ನ 3 ಗಂಟೆಗೆ ಕೆಳದಿ ಚನ್ನಮ್ಮ ವೇದಿಕೆಯಲ್ಲಿ ವಚನಾನಂದ ಸ್ವಾಮಿಜಿಗಳವರ ದ್ವಿತೀಯ ಪೀಠಾರೋಹಣ ಸಮಾರಂಭವನ್ನು ಕನಕಪುರ ಶಾಸಕ ಡಿ.ಕೆ. ಶಿವಕುಮಾರ ಉದ್ಘಾಟಿಸುವರು. ಹರಿಹರ ಪಂಚಮಸಾಲಿ  ಪೀಠದ ಅಧ್ಯಕ್ಷ ಬಿ.ಸಿಉಮಾಪತಿ ಅಧ್ಯಕ್ಷತೆ ವಹಿಸುವರು. ಬಾವಿ ಬೆಟ್ಟಪ್ಪ, ಶಾಸಕ ಶಿವಾನಂದ ಪಾಟೀಲ, ಪ್ರಭಾಕರ ಕೋರೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು ಎಂದು ಬಳ್ಳಾರಿ ವಿವರಿಸಿದರು.

   ಬಸವರಾಜ ಪಾಟೀಲ, ಎಸ್.ಎಸ್.ರಾಮಲಿಂಗಣ್ಣನವರ, ಚಂದ್ರಣ್ಣ ತಿಳವಳ್ಳಿ, ಸಿದ್ದಪ್ಪ ಚಿಕ್ಕಬಿದರಿ, ಮಲ್ಲಣ್ಣ ಅಂಗಡಿ,  ಬಸವರಾಜ ಚಿಮ್ಮಲಗಿ, ಪೂಣರ್ಿಮಾ ಬೆನ್ನೂರ, ಗೀತಾ ಜಂಬಗಿ, ವಸಂತ ಹುಲ್ಲತ್ತಿ, ಶಿವಣ್ಣ ಗುರಿಕಾರ, ಬಸವರಾಜ ಹುಲ್ಲತ್ತಿ,  ಶಿವಕುಮಾರ ಹರ್ಕನಾಳ, ಅಮೋಘ ಬಾದಾಮಿ ಸೇರಿದಂತೆ ಮತ್ತಿತರರು ಗೋಷ್ಠಿಯಲ್ಲಿ ಇದ್ದರು.