ವಿಶ್ವಕ್ಕೆ ಜ್ಞಾನದ ಬೆಳಕು ನೀಡಿ, ರಾಷ್ಟ್ರದ ಘಣತೆ ಹೆಚ್ಚಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ರಾಘವೇಂದ್ರ ನೀಲನ್ನವರರನ್ನ

ವಿಶ್ವಕ್ಕೆ ಜ್ಞಾನದ ಬೆಳಕು ನೀಡಿ, ರಾಷ್ಟ್ರದ ಘಣತೆ ಹೆಚ್ಚಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ರಾಘವೇಂದ್ರ ನೀಲನ್ನವರರನ್ನ  The Rashtriya Swayamsevak Sangh (RSS) has given the light of knowledge to the world and enhanced the

ವಿಶ್ವಕ್ಕೆ ಜ್ಞಾನದ ಬೆಳಕು ನೀಡಿ, ರಾಷ್ಟ್ರದ ಘಣತೆ ಹೆಚ್ಚಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ರಾಘವೇಂದ್ರ ನೀಲನ್ನವರರನ್ನ  

ಬೆಳಗಲಿ 12:  ಪಟ್ಟಣದ ಸಮೀಪದ ಮುಗಳಖೋಡ ಗ್ರಾಮದ ಶ್ರೀ ಗುರುಪಾದೇಶ್ವರ ಮಠದಲ್ಲಿ ಶುಕ್ರವಾರ ದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಸಂಭ್ರಮ ಜರಗಿತು.ಮುಖ್ಯ ವಕ್ತಾರ  ರಾಘವೇಂದ್ರ ನೀಲನ್ನವರ ಮಾತನಾಡಿ ಧರ್ಮ ಹಾಗೂ ದೇಶದ ರಕ್ಷಣೆಗಾಗಿ 1925ರ ಸೆ 27ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಹಾರಾಷ್ಟ್ರದ ನಾಗಪುರದಲ್ಲಿ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ದೇಶ ಹಾಗೂ ಧರ್ಮಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕರಲ್ಲಿ ಶಿಸ್ತು ಬೆಳೆಸುವ ಕೆಲಸ ಮಾಡುತ್ತಿದೆ. ಹಿಂದೂ ಸಮುದಾಯವನ್ನು ಒಗ್ಗೂಡಿಸಲು ಮತ್ತು ವಿಶ್ವದ ಎಲ್ಲಾ ಧರ್ಮಗಳಿಗೆ ಜ್ಞಾನವನ್ನು ನೀಡಿದ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಯುವ ಸಮುದಾಯಕ್ಕೆ ವ್ಯಕ್ತಿತ್ವ ತರಬೇತಿ ನೀಡುವುದು ಮತ್ತು ಶಿಸ್ತು ಬೆಳೆಸುವುದು. ಈ ಸಂಘಟನೆಯು ಹಿಂದೂ ಸಮುದಾಯವನ್ನು ಬಲಪಡಿಸಲು ಹಿಂದುತ್ವದ ಸಿದ್ಧಾಂತವನ್ನು ಹರಡುವ ಗುರಿಯನ್ನು ಹೊಂದಿದೆ. ಭಾರತೀಯ ಸಂಸ್ಕೃತಿ ಮತ್ತು ಅದರ ನಾಗರಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಆದರ್ಶವನ್ನು ಉತ್ತೇಜಿಸುತ್ತದೆ.ವಿಶ್ವವ್ಯಾಪಿ ವ್ಯಾಪಿಸಿದ ಸಂಘವು ಕಳೆದ ವಿಜಯದಶಮಿಗೆ ನೂರು ವರ್ಷಗಳನ್ನು ಪೂರೈಸಿ. ಶತಮಾನೋತ್ಸವದ ವರ್ಷದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಅಮೃತಗಳಿಗೆ ಸಂಘವು ಐದು ಪಂಚ ಪರಿವರ್ತನೆಯ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು.  

ಅದರಲ್ಲಿ ಮೊದಲನೆಯ ಎರಡು ಕಾರ್ಯಗಳೆಂದರೆ ಸುಂದರ, ಸಬಲ ಸಮಾಜ ನಿರ್ಮಾಣ ಮತ್ತು ಸ್ವದೇಶಿ ಜೀವನ ಶೈಲಿ  ಸಂಘಟನಾತ್ಮಕವಾಗಿದ್ದರೆ, ಉಳಿದ ಮೂರು ಸಮಾಜಕ್ಕೆ ಕೊಡುಗೆ ನೀಡುವುದೇ ( ನಾಗರಿಕ ಕರ್ತವ್ಯ), ಬಲಿಷ್ಠ ರಾಷ್ಟ್ರದ ನಿರ್ಮಾಣದ ಧ್ಯೇಯವೇ ( ಕುಟುಂಬ ಪ್ರಬೋಧನೆ) ಮತ್ತು ಹೊಣೆಗಾರಿಕೆಯ ಭಾವ( ಪರಿಸರ ಸಂರಕ್ಷಣೆ) ಸಮಾಜದ ಸಭಾಗಿತ್ವದಲ್ಲಿ ಮಾಡುವ ಸಾಮೂಹಿಕ ಕಾರ್ಯಗಳಾಗಿವೆ ಎಂದು ತಿಳಿಸಿದರು. ಈ ವೇಳೆಯಲ್ಲಿ ಮುಖ್ಯ ಅತಿಥಿಯಾಗಿ ಪೂಜ್ಯರಾದ ರಾಮಯ್ಯ ಗುರುಪಾದಯ್ಯ ಹಿರೇಮಠ ಶ್ರೀಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ಕಾರ್ಯವು ದೇಶದ ಶಕ್ತಿಯಾಗಿದೆ. ಯುವ ಸಮುದಾಯ ಇಂದ್ರಿಗಳ ಆಸೆಗೆ ಬಿದ್ದು ರೋಗವನ್ನು ಹಂಚಿಕೊಂಡು ಹಾಳಾಗುತ್ತಿರುವ ಸನ್ನಿವೇಶದಲ್ಲಿ ಯುವ ಸಮುದಾಯಕ್ಕೆ ದಿಕ್ಕು ತೋರಿಸಿ, ಭಾರತೀಯ ನಾಗರಿಕತೆಯ ಮಹತ್ವ ಸಾರುವ ಶ್ರೇಷ್ಠ ಸಂಘವೇ ಆರ್ ಎಸ್ ಎಸ್ ಎಂದು ತಿಳಿಸಿದರು. ಶಿವ ಸೇನಾ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ,ಅಮಿಸಿದ್ಧ ಬಾಳಿಬೂದಿ,ಮುತ್ತಪ್ಪ ತಾವಳಗೆರಿ,ಮಲ್ಲಪ್ಪ ಬಿಸನಕೊಪ್ಪ, ಪ್ರವೀಣ ಬಾವಿಕಟ್ಟಿ,ಸಂಜಯ ಶಿಂಪಿ,ಆನಂದ ಶಿರಗುಂಪ್ಪಿ,ಅಡಿವೇಶ ಜೋಗಿ,ನಾಗು ಒಡೆಯರ,ಮಲ್ಲಪ್ಪ ಹುಂಡೇಕಾರ, ಡಾ.ಶರಣಯ್ಯ ಬಬಲಾದಿಮಠ,ಗುರು ನಾವಿ, ಸಂತೋಷ ನಾವಿ,ಪರಮಾನಂದ ನಂದಿಕೆಶ್ವರ,ಪ್ರಭು ಜಗದಾಳ, ಸಚಿನ ಮಂತ್ರಣ್ಣವರ,   ಚಿದಾನಂದ ಹುಂಡೆಕಾರ, ನಾಮದೇವ ಬಟಕುರ್ಕಿ,ಅಡಿವೇಶ ಜೋಗಿ, ಮುರಗೇಶ ಹೂಗಾರ, ಚೇತನ ರಾಮಪುರ,ಸುಖದೇವ ಪವಾರ,ನಾಗು ಒಡೆಯರ,ಅಭಿಷೇಕ ಜೋಗಿ,ಹೊಂಣೇಶ ರಂಗಾಪುರ,  ವಿಜಯ ಹುಕ್ಕೇರಿ,ನಂದಪ್ಪ ಜೋಗಿಗುರುಬಸು ಶಿವಾಪುರ,ರಮೇಶ ನಿಲಜಗಿ, ಸಿದ್ದಪ್ಪ ಬಾಳಿಬುದಿ, ಪರಮಾನಂದ ಕುಂಬಾರ, ಈರಯ್ಯ ಮಠಪತಿ ಇದ್ದರು.