ಲೋಕದರ್ಶನ ವರದಿ
ಚಿಂಚಲಿ 13: ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣನ್ನು ರಚಿಸಿ 'ಆದಿಕವಿ' ಮಹರ್ಷಿ ವಾಲ್ಮೀಕಿಯ ರಾಮಾಯಣವು ಭಾರತೀಯರ ಜೀವನ ಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸು ಮಾಹಾಕಾವ್ಯವಾಗಿದೆ. ಮತ್ತು ಗುರುಭಕ್ತಿಗೆ ಏಕಲವ್ಯ ಧಾರ್ಮಿಕ ಭಕ್ತಿಗೆ ವಾಲ್ಮೀಕಿ ಮಹರ್ಷಿಗಳು, ದೇಶಭಕ್ತಿಗೆ ಸಿಂಧೂರ ಲಕ್ಷ್ಮಣ, ಸುರಪುರ ವೆಂಕಟಪ್ಪ ನಾಯಕ, ವೀರ ಮದಕರಿನಾಯಕ, ಈಗೆ ಸಮಾಜದ ಎಲ್ಲ ಸ್ತರಗಳಲ್ಲಿಯೂ ನಾಯಕ ಜನಾಂಕದ ವ್ಯಕ್ತಿಗಳ ಎಸರು ವಾಸಿಯಾಗಿದ್ದಾರೆಂದು ಚಿಂಚಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಸ್.ಜಿ. ಪೂಜೇರಿ ಹೇಳಿದರು.
ಅವರು ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಆಯೋಜಿಸಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪವನ್ನು ಹಾಕಿ ಪೂಜೆ ಆಗೂ ಜ್ಯೋತಿ ಬೆಳಗಿಸಿ ಮಾತನಾಡುತ್ತಾ. ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ದೇಶಪ್ರೇಮ, ಅಳಿಲು, ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇಂತಹ ಅನನ್ಯಾವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯನ್ನು 'ಕವಿಗಳ ಕವಿ' ಎಂದು ಮಹಾಕಿ ಕಾಳಿದಾಸ ಗೌರಿಸಿದ್ದಾರೆ " ರಾಮಾಯಣದಂತ ಮಹಾಕಾವ್ಯ ಮತ್ತು ವಾಲ್ಮೀಕಿಯಂತಹ ಮಾಕವಿ ನಮಗೆ ದೊರೆತಿರುವುದು ಭುವನದ ಭಾಗ್ಯ ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಾಲ್ಮೀಕಿ ರಾಮಾಯಣ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾಗದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆಂದರು.
ಪಟ್ಟಣ ಪಂಚಾಯತಿ ಸದಸ್ಯರಾದ ಅಕುಂಶ ಜಾಧವ, ಜಾಕೀರ ತರಡೆ, ಸ್ವಪನಿಲ ಶೇರಖಾನೆ, ಗ್ರಾಮಲೇಕಾಧಿಕಾರಿ ಜಗದೀಶ ಕಿತ್ತೂರ, ರಾಜು ಶಿಂಧೆ, ರಾಜು ಪೋಳ, ಸಂಜು ನಿಗನೂರೆ, ಲಕ್ಷ್ಮಣ ಕೋಳಿಗುಡ್ಡೆ, ಲವು ಚೌಗಲಾ, ಮಾರುತಿ ವಡ್ಡರ, ಮಿರಾಸಾಬ ಕೊಥಳಿ, ಶ್ರಾವಣ ಕಾಂಬಳೆ, ನಾಮದೇವ ಟೋಣೆ ಹಾಗೂ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.