ನವದೆಹಲಿ, ಜೂನ್ 5, ಭೂಗ್ರಹದಲ್ಲಿನ ಸಸ್ಯ ಮತ್ತು ಪ್ರಾಣಿ-ಪಕ್ಷಿ ಸಂಕುಲವನ್ನು ಸಂರಕ್ಷಿಸುವಂತೆ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಶುಕ್ರವಾರ ಜನತೆಗೆ ಕರೆ ನೀಡಿದ್ದಾರೆ. ‘ನಮ್ಮ ಭೂಗ್ರಹದ ಸಮೃದ್ಧ ಜೀವವೈವಿಧ್ಯತೆಯನ್ನು ಕಾಪಾಡುವ ನಮ್ಮ ಸಂಕಲ್ಪವನ್ನು ನಾವು ಪುನರುಚ್ಚರಿಸುತ್ತೇವೆ. ಸಸ್ಯ ಮತ್ತು ಪ್ರಾಣಿ-ಪಕ್ಷಿ ಸಂರಕ್ಷಿಸಲು ಒಟ್ಟಾಗಿ ಸಾಧ್ಯವಾದಷ್ಟು ಕೆಲಸ ಮಾಡೋಣ. ಮುಂದಿನ ಪೀಳಿಗೆಗೆ ಇನ್ನೂ ಉತ್ತಮ ಪರಿಸರದ ಮತ್ತು ಸಮೃದ್ಧ ಜೀವವೈವಿಧ್ಯತೆಯ ಭೂಮಿಯನ್ನು ಕಾಪಾಡೋಣ' ಎಂದು ದೇಶಕ್ಕೆ ನೀಡಿದ ಸಂದೇಶದಲ್ಲಿ ನರೇಂದ್ರಮೋದಿ ಹೇಳಿದ್ದಾರೆ. ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ನಮ್ಮ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮಗಳನ್ನು ಉತ್ತೇಜಿಸುವ ವಿಶ್ವಸಂಸ್ಥೆಯ ಪ್ರಮುಖ ವಾಹಕ ಇದಾಗಿದೆ.1974 ರಲ್ಲಿ ಮೊದಲ ಬಾರಿಗೆ ನಡೆದ ಈ ದಿನವನ್ನು ಆಚರಿಸಲಾಯಿತು. ಪರಿಸರ ಸಮಸ್ಯೆಗಳಿಂದ ಸಮುದ್ರ ಮಾಲಿನ್ಯ, ಜನಸಂಖ್ಯೆ ಏರಿಕೆ ಮತ್ತು ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಬಳಕೆ ಮತ್ತು ವನ್ಯಜೀವಿ ಮೇಲಿನ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಅಭಿಯಾನವಾಗಿ ಈ ದಿನವನ್ನು ಆಚರಿಸಲಾಗುತ್ತದೆ.