ಭಗವಾನ ಮಹಾವೀರರ ಭಕ್ತಿ, ಶ್ರದ್ಧೆ, ಸಂಭ್ರಮದ ಪಲ್ಲಕ್ಕಿ ಉತ್ಸವ
The Palanki Festival of devotion, faith and celebration of Lord Mahavira
ತಾಳಿಕೋಟೆ 30: ಪಟ್ಟಣದಲ್ಲಿ ಜೈನ ಸಮುದಾಯದ ವತಿಯಿಂದ ಭಗವಾನ ಮಹಾವೀರರ ಜಯಂತ್ಯುತ್ಸವವನ್ನು ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಸೋಮವಾರ ನೆರವೇರಿಸಲಾಯಿತು. ಜಯಂತ್ಯುತ್ಸವ ದ ಪ್ರಯುಕ್ತ ಬೆಳಿಗ್ಗೆ ಮೂಲ ತೀರ್ಥಂಕರ ಭಗವಾನ ಆದಿನಾಥನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ಬೀಮನ ಭಾವಿಯಲ್ಲಿ ಗಂಗಸ್ಥಳ ಮುಗಿಸಿಕೊಂಡು ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀ ಪಲ್ಲಕ್ಕಿ ಉತ್ಸವ, ಕಳಸ ಹಾಗೂ ಶೋಭಾ ಯಾತ್ರೆ ಜರುಗಿತು.ದೇವಸ್ಥಾನಕ್ಕೆ ಮರಳಿದ ನಂತರ ಭಗವಾನ ತೋರ್ಥಂಕರ ಮಹಾವೀರನ ಭವ್ಯ ಮೂರ್ತಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ತೊಟ್ಟಿಲು, ನಾಮಕರಣ,, ಮಹಾಮಂಗಳಾರಾತಿ ನಂತರ ಪ್ರಸಾದ ವಿತರಣೆ ಮಾಡಲಾಯಿತು. ಉತ್ಸವದಲ್ಲಿ ಸಮಾಜದ ಪ್ರಮುಖರಾದ ವಜ್ರಕುಮಾರ ಪ್ರಥಮಶೆಟ್ಟಿ, ಎಸ್.ಬಿ.ಸುರಪುರ, ಗಂಗಣ್ಣ ಸುರಪುರ, ಎಸ್.ಆರ್.ಹುಬ್ಬಳ್ಳಿ, ಶ್ರೀಪಾಳ ಸಂಗ್ಮಿ, ವಿ.ಎನ್.ಯಾತಗಿರಿ, ಗುಂಡುರಾವ್ ಧನಪಾಲ. ಪ್ರಕಾಶ ಸುರಪುರ, ಸುರೇಶ ದೇವೂರ, ರತ್ನಪ್ಪ ಪ್ರಥಮಶೆಟ್ಟಿ,ನೇಮಿನಾಥ ಧನಪಾಲ, ಪದ್ಮಾವತಿ ಮಹಿಳಾ ಮಂಡಳಿಯ ಸದಸ್ಯರು ಸೆರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 