ಜಿಲ್ಲೆಗೆ ನಿವೇದಿತಾ ಕೀರ್ತಿ ಕರೆ ಮಾಡಿ ಅಭಿನಂದಿಸಿದ ಉಸ್ತುವಾರಿ ಸಚಿವರು
The Minister in-charge congratulated the district on its success by calling Nivedita Kirti
ಲೋಕದರ್ಶನ ವರದಿ
ಹಾವೇರಿ 25: ನಿಮ್ಮ ಸಾಧನೆಯಿಂದ ಹಾವೇರಿ ಜಿಲ್ಲೆಯ ಕೀರ್ತಿ ರಾಜ್ಯದಲ್ಲಿ ಪಸರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ನಿವೇದಿತಾ ಪರಶುರಾಮ ಅಜ್ಜಮ್ಮನವರ್ ಅವರನ್ನು ಅಭಿನಂದಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿರುವ ಕದರಮಂಡಲಗಿ ಸ್ಪಂದನಾ ಪ್ರೌಢಶಾಲೆ ವಿದ್ಯಾರ್ಥಿನಿ ನಿವೇದಿತಾ ಅವರಿಗೆ ಶುಕ್ರವಾರ ಕರೆ ಮಾಡಿ ಅಭಿನಂದಿಸಿದ ಸಚಿವರು, ನಿಮ್ಮ ಈ ಸಾಧನೆಯಿಂದ ಹಾವೇರಿ ಜಿಲ್ಲೆಯ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುಂತಾಗಿದೆ. ನಿಮ್ಮ ಭವಿಷ್ಯದ ಕನಸುಗಳು ನನಸಾಗಲಿ ಎಂದು ಹಾರೈಸಿದರು.
ಅಭ್ಯಾಸ ಕ್ರಮದ ಬಗ್ಗೆ ಮಾಹಿತಿ ಪಡೆದ ಸಚಿವರು, ನಿಮ್ಮ ಈ ಸಾಧನೆ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಾಧನೆಯ ಕನಸಿಗೆ ನೀರೆರದಂತಾಗಿದೆ. ನಗರ ಪ್ರದೇಶದ ಶಾಲೆಗಳ ಮಕ್ಕಳೊಂದಿಗೆ ಸ್ಪರ್ಧೆ ಮಾಡಿ ಗ್ರಾಮೀಣ ಮಕ್ಕಳು ಸಾಧನೆ ಮಾಡುವುದು ಸುಲಭವಲ್ಲ. ನಿಮ್ಮ ಸಾಧನೆಯ ಪರಂಪರೆ ಜಿಲ್ಲೆಯಲ್ಲಿ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.ಮುಂದಿನ ಬಾರಿ ಹಾವೇರಿ ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ನಿಮ್ಮನ್ನ ಭೇಟಿ ಮಾಡುತ್ತೇನೆ. ಭವಿಷ್ಯದ ಕನಸುಗಳು ನನಸಾಗಲಿ ಎಂದು ಹಾರೈಸಿದರು. ನಿವೇದಿತಾ ಅವರ ತಂದೆಯೊಂದಿಗೂ ಮಾತನಾಡಿ, ನಿಮ್ಮ ಮಗಳಿಗೆ ಒಳ್ಳೆಯ ಭವಿಷ್ಯವಿದೆ. ಹಾವೇರಿ ಜಿಲ್ಲೆಯ ಹೆಮ್ಮೆ ಅವರು ಎಂದು ಹೇಳಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 