ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮರೆದ ಪ್ರಭು
The Lord who returned the gold chain and forgot his honesty
ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮರೆದ ಪ್ರಭು
ಶಿಗ್ಗಾವಿ 01: ತಾಲೂಕಿನ ಹುಲಗೂರ ಗ್ರಾಮದ ಎಟಿಎಂ ಒಂದರ ಬಳಿ ಸಿಕ್ಕಿದ್ದ 2.50 ಲಕ್ಷ ರೂ. ಮೌಲ್ಯದ 25 ಗ್ರಾಂ ಚಿನ್ನದ ಸರವನ್ನು ಹುಲಗೂರ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಗ್ರಾಮದ ಪ್ರಭು ಬಸವಣ್ಣೆಪ್ಪ ಬೀಳಗಿ ಪ್ರಾಮಾಣಿಕತೆ ಮೆರೆದಿದ್ದಾರೆ. ತಾಲೂಕಿನ ಬಸನಾಳ ಗ್ರಾಮದ ಲಲಿತಾ ರುದ್ರ್ಪ ಒಡ್ಡಟ್ಟಿ ಎಂಬುವರು ಹುಲಗೂರ ಗ್ರಾಮದ ಎಟಿಎಂ ಬಳಿ ಚಿನ್ನದ ಸರ ಕಳೆದುಕೊಂಡಿದ್ದರು. ಮಧ್ಯಾಹ್ನ ಎಟಿಎಂ ಬಳಿ ಬಂದಿದ್ದ ಪ್ರಭು ಬೀಳಗಿ ಅವರಿಗೆ ಸರ ಸಿಕ್ಕಿತ್ತು. ಪ್ರಭು ಆ ಸರವನ್ನು ತೆಗೆದುಕೊಂಡು ಹೋಗಿ ಹುಲಗೂರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಹುಲಗೂರ ಠಾಣೆ ಪಿಎಸ್‌ಐ ಪರಶುರಾಮ ಕಟ್ಟಿಮನಿ ಹಾಗೂ ತಂಡ, ಸರ ಕಳೆದುಕೊಂಡಿದ್ದ ಲಲಿತಾ ಅವರನ್ನು ಪತ್ತೆ ಮಾಡಿ, ಗುರುವಾರ ಠಾಣೆಗೆ ಕರೆಸಿ ಪ್ರಭು ಅವರ ಸಮ್ಮುಖದಲ್ಲಿ ಲಲಿತಾ ಅವರಿಗೆ ಸರವನ್ನು ಒಪ್ಪಿಸಿದರು. ತಾಯಿ- ಮಗನಿಗೆ ಸನ್ಮಾನ: ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಪ್ರಭು ಹಾಗೂ ಅವರ ತಾಯಿ ರತ್ನಮ್ಮ ಬೀಳಗಿ ಅವರನ್ನು ಇಲಾಖೆ ಪರವಾಗಿ ಪಿಎಸ್‌ಐ ಪರಶುರಾಮ ಕಟ್ಟಿಮನಿ ಸನ್ಮಾನಿಸಿದರು. ಠಾಣೆ ಅಧಿಕಾರಿ, ಸಿಬ್ಬಂದಿ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 