ಸುಕ್ಷೇತ್ರ ದೇವು ಅಳಂದಿಗೆ ರವಾನೆಯಾದ ಕಿತೋಳೆ ಕುಟುಂಬದವರ ಮಾನದ ಕುದುರೆ
The Kitole family's horse was sent to Sukshetra Dev Alandi
ಮಾಂಜರಿ 08: ಸಮೀಪದ ಅಂಕಲಿ ಗ್ರಾಮದ ಅಂಕಲಿಕರ ಕಿತೋಳೆ ಸರಕಾರ ಕುಟುಂಬದವರ ಮಾನದ ಕುದುರೆಯು ದಿ. ಜುಲೈ 6 ರಂದು ಜರುಗಲಿರುವ ಪಂಢರಪೂರದ ಆಷಾಢ ಏಕಾದಶಿ ಅಂಗವಾಗಿ ಅಂಕಲಿಯಿಂದ ಮಹಾರಾಷ್ಟ್ರದ ಸುಕ್ಷೇತ್ರ ದೇವು ಅಳಂದಿಗೆ ರವಿವಾರ 8 ರಂದು ಮುಂಜಾನೆ ರವಾನೆಯಾಯಿತು.
ಪ್ರತಿ ವರ್ಷ ಆಷಾಢ ಮಾಸದ ಏಕಾದಶಿ ದಿನದಂದು ನಡೆಯುವ ಪಂಢರಪೂರದ ವಿಠ್ಠಲನ ಜಾತ್ರೆಯಲ್ಲಿ ಅಂಕಲಿ ಸರಕಾರರ ಮಾನದ ಕುದುರೆಗೆ ಮಹತ್ವದ ಸ್ಥಾನ ನೀಡುತ್ತಾರೆ. ಈ ವರ್ಷ ಜುಲೈ 6 ರಂದು ಪಂಢರಪೂರದಲ್ಲಿ ನಡೆಯಲಿರುವ ಆಷಾಢ ಏಕಾದಶಿ ನಿಮಿತ್ಯ ಸುಕ್ಷೇತ್ರ ದೇವು ಆಳಂದಿಯಿಂದ ನಡೆಯಲಿರುವ ಭವ್ಯ ಪಾದಯಾತ್ರೆಯಲ್ಲಿ ಅಂಕಲಿ ಸರಕಾರರ ಈ ಮಾನದ ಕುದುರೆ ಪಾಲ್ಗೊಳ್ಳಲಿದೆ.
ಪ್ರಾರಂಭದಲ್ಲಿ ಇಂದು ರವಿವಾರ ಮುಂಜಾನೆ ಅಂಕಲಿ ಸರಕಾರ ಉರ್ಜಿತಶಿಂಹ ರಾಜೆ ಶೀತೋಳೆ ಸರಕಾರ ಮತ್ತು ಮಹದಜಿರಾಜೆ ಶೀತೋಳೆ ಸರಕಾರ ಮಾನದ ಕುದುರೆಯ ಪೂಜೆ ಸಲ್ಲಿಸಿದನಂತರ ಗ್ರಾಮದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಟ್ಟರು.
ಅಳಂದಿಯ ಬಾಬಾಸಾಹೇಬ ಅರಫಾಳಕರಬಂಡೋಪಂತಕುಲಕರ್ಣಿ ಮತ್ತು ರಾಹುಲಜೋಷಿ, ಸುಭಾಷ ಮಹಾರಾಜ, ಜ್ಞಾನೇಶ್ವರ ಗುಳುಂಜಕರ, ಸಿದ್ದರಾಮ ಸ್ವಾಮಿ, ಪುಣೆಯ ಸುಭಾಷ ಪರಾಟಿ ಮತ್ತು ಶಂಕರ ಲೋಖಂಡೆ ಸೇರಿದಂತೆ ಅಂಕಲಿ, ಯಡೂರ, ಮಾಂಜರಿ, ಚಂದೂರಗ್ರಾಮದವಿಠಲನ ಭಕ್ತರು ಮತ್ತು ಗ್ರಾಮರ್ಸತರು ಪಾಲ್ಗೊಂಡಿದ್ದರು. '
ಮೈಶಾಳ, ಮಿರಜವಾಡಿ, ಸಾಂಗಲವಾಡಿಪೇಠನಾಕಾ, ಮಹಾಗಾಂವ, ಲಿಂಬ, ಭರತಗಾಂವ, ಬೋಯಿಜ, ಸೀಖಳ, ಶೀಂದೆವಾಡಿ ಮಾರ್ಗವಾಗಿ ಹೋಗಿ ಪೂಣೆಯಲ್ಲಿ ಮುಕ್ಕಾಂ ಸುಕ್ಷೇತ್ರ ಅಳಂದಿಗೆ ಕುದುರೆ 11 ದಿನಗಳ ನಂತರ ತಲಪುವುದು ಅಲ್ಲಿಂದ ಪಂಢಪೂರಕ್ಕೆ ತೆರಳುವದು ಒಟ್ಟು 30 ದಿನಗಳಕಾಲ ಕುದುರೆ ಪ್ರವಾಸ ಕೈಗೊಳ್ಳುವುದು ಎಂದು ಸರಕಾರ ತಿಳಿಸಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 