ಕಾಶಿ ಜಗದ್ಗುರುಗಳಿಂದ ಪಂಢರಪುರದ ವಿಠ್ಠಲನಿಗೆ ಇಷ್ಟಲಿಂಗ ಧಾರಣೆ
The Kashi Jagadguru bestowed the Ishtalinga on Vitthal of Pandharpur.
ಕಾಶಿ ಜಗದ್ಗುರುಗಳಿಂದ ಪಂಢರಪುರದ ವಿಠ್ಠಲನಿಗೆ ಇಷ್ಟಲಿಂಗ ಧಾರಣೆ
ಧಾರವಾಡ, 05 : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರ್ರದೇಶದ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಹಾರಾಷ್ಟ್ರದ ಪ್ರಸಿದ್ಧ ಪಂಢರಪುರ ಕ್ಷೇತ್ರದಲ್ಲಿಯ ವಿಠಲ ರುಕ್ಮಿಣಿ ಮಂದಿರದ ಸಹ ಅಧ್ಯಕ್ಷ ಓಸಾಸಂಸ್ಥಾನದ ಶ್ರೀ ಗಹನಿನಾಥ ಮಹಾರಾಜರ ಭಕ್ತಿ ಸೇವೆಯ ಸಂಕಲ್ಪ ಮತ್ತು ಅವರ ಅಪೇಕ್ಷೆಯಂತೆ ಪಂಢರಪುರ ವಿಠ್ಠಲನ ಕೊರಳಿಗೆ ಇಷ್ಟಲಿಂಗ ಯುಕ್ತವಾದ ಚಿನ್ನದ ಕರಡಗಿ(ಗುಂಡಗಡಿಗಿ)ಯನ್ನು ರವಿವಾರ ಧಾರಣೆ ಮಾಡಿದರು.
ಪ್ರಸ್ತುತ ಆಷಾಢ ಶುದ್ಧ ಏಕಾದಶಿಯ ಪರ್ವಕಾಲದಲ್ಲಿ ಫಂಡರಪುರ ವಿಠ್ಠಲ-ರುಕ್ಮಿಣಿಯರ ವಿಶೇಷ ಆರಾಧನೆ ಜರುಗುತ್ತಿದ್ದು, ಈ ಸಂದರ್ಭದಲ್ಲಿ ಸಮಾವೇಶಗೊಂಡಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರು ಇದು ಅತ್ಯಂತ ವಿಶೇಷವೆಂದು ಕಣ್ತುಂಬಿಕೊಂಡರು.
ಪೂರ್ಣಕುಂಭ ಸ್ವಾಗತ : ರವಿವಾರ ಪಂಢರಪುರ ಕ್ಷೇತ್ರಕ್ಕೆ ಆಗಮಿಸಿದ್ದ ಕಾಶಿ ಪೀಠದ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರನ್ನು ವಿಠ್ಠಲ ಮಂದಿರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಪ್ರಧಾನ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿ ಗೌರವಿಸಿ ಭಕ್ತಿಯಿಂದ ಗರ್ಭಗೃಹಕ್ಕೆ ಬರಮಾಡಿಕೊಂಡರು. ಚಿನ್ನದ ಕರಡಗಿ(ಗುಂಡಗಡಿಗಿ)ಯ ಸೇವಾಕರ್ತರಾದ ಓಸಾಸಂಸ್ಥಾನದ ಶ್ರೀ ಗಹನಿನಾಥ ಮಹಾರಾಜರನ್ನು ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಗೌರವಿಸಿ ಆಶೀರ್ವದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 