ಭಕ್ತರಿಂದಲೇ ನಿರ್ಮಾಣವಾದಕಪ್ಪರ ಪಡಿಯಮ್ಮ ದೇವಿ ಸಭಾಮಂದಿರ ಇಂದು ಲೋಕಾರ್ಪಣೆ ರೂ. 50ಲಕ್ಷ ವೆಚ್ಚದಲ್ಲಿ ನಿರ್ಮಾಣ

ಭಕ್ತರಿಂದಲೇ ನಿರ್ಮಾಣವಾದಕಪ್ಪರ ಪಡಿಯಮ್ಮ  ದೇವಿ ಸಭಾಮಂದಿರ ಇಂದು ಲೋಕಾರ್ಪಣೆ ರೂ. 50ಲಕ್ಷ ವೆಚ್ಚದಲ್ಲಿ ನಿರ್ಮಾಣ The Kappara Padiamma Devi Sabha Mandir, built by devotees, was inaugurated today at a cost of Rs. 50

ಬೀಳಗಿ 21; ತಾಲ್ಲೂಕಿನ ನಾಗರಾಳ ಹಲವು ವಿಶಿಷ್ಟತೆಯಿಂದ ಕೂಡಿದ ಗ್ರಾಮವು ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸದಾಕಾಲ ಹೊಸದನ್ನೇ ಪ್ರಯೋಗ ಮಾಡುವ ಈ ಗ್ರಾಮದ ಜನರು ಸರ್ಕಾರದ ಸಹಾಯಕ್ಕಾಗಿ ಕೈಚಾಚಿ ಕುಳಿತುಕೊಳ್ಳದೆ ಈ ಬಾರಿ ಗ್ರಾಮದ ಭಕ್ತರಿಂದಲೇ ಸುಮಾರು 50 ಲಕ್ಷ ರೂ. ಹಣವನ್ನು ಕ್ರೂಡಿಕರಿಸಿ ಸಾವಿರಾರು ಜನ ಕುಳಿತುಕೊಳ್ಳಬಹುದಾದ  ಬೃಹತ್ ಕಪ್ಪರ ಪಡಿಯಮ್ಮ ದೇವಿ ಸಭಾಮಂದಿರ ನಿರ್ಮಾಣ ಮಾಡಿ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದ್ದಾರೆ ಎಂದು ನಾಗರಾಳ ದಿಗಂಬರೇಶ್ವರ ಮಠದಶೇಷಪ್ಪಯ್ಯ ಗುರುನಿಂಗಪ್ಪಯ್ಯ ಸ್ವಾಮೀಜಿ ಅವರು ಹೇಳಿದರು. 

ತಾಲೂಕಿನ ನಾಗರಾಳ ಗ್ರಾಮದ ದಿಗಂಬತೇಶ್ವರ ಮಠದ ಪಕ್ಕದಲ್ಲಿನ ಕಪ್ಪರ ಪಡಿಯಮ್ಮ ದೇವಿ ಸಭಾಮಂದಿರದ ಲೋಕಾರೆ​‍್ಣ ಸಮಾರಂಭದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಗರಾಳ ಗ್ರಾಮದ ಭಕ್ತರು ಕೇವಲ ಎರಡು ತಿಂಗಳಲ್ಲಿ ಸಮುದಾಯ ಭವನ ನಿರ್ಮಿಸಿ ನವರಾತ್ರಿ ಉತ್ಸವದಂತಹ ಧಾರ್ಮಿಕ ಹಾಗೂ ಸಾಹಿತ್ಯಿಕ ,ಸಾಂಸ್ಕೃತಿಕ, ಶೈಕ್ಷಣಿಕವಾದ  ಸಮಾಜಮುಖಿ ಕಾರ್ಯಕ್ರಮಗಳಿಗೆ ಸುಸಜ್ಜಿತವಾದ ವೇದಿಕೆಯನ್ನು ಒದಗಿಸಿದ್ದಾರೆ.ಪ್ರತಿದಿನ ಗ್ರಾಮದ 40 ರಿಂದ 50 ಯುವಕರು,ಹಿರಿಯರು ಸೇರಿಕೊಂಡು ಬೆಳಿಗ್ಗೆ ಮಠಕ್ಕೆ ಆಗಮಿಸಿದರೆ, ಒಮ್ಮೆಲೇ ಕೆಲಸವನ್ನು ಮುಗಿಸಿಕೊಂಡು ಸಾಯಂಕಾಲವೇ ಮರಳಿ ಮನೆಗೆ ಹೋಗುತ್ತಿದ್ದರು. ಕೆಲವರು ಕಟ್ಟಡ ಕಟ್ಟಿದರೆ ಕೆಲವರು ಕೈಯಲ್ಲಿ ಸಿಮೆಂಟ್, ಇಟ್ಟಿಗೆಯ ಕೊಡುವ ಕೆಲಸ ಇನ್ನೂ ಕೆಲವರು ಕಟ್ಟಡಕ್ಕೆ ನೀರು ಹೊಡೆಯುವುದು ಹೀಗೆಯೇ ಅವರವರ ದೈಹಿಕ ಸಾಮರ್ಥ ಮತ್ತು ತಾವೂ ಪರಿಣಿತಿಯನ್ನು ಹೊಂದಿದ ಕುಲಕಸಬನ್ನು ಆಯ್ಕೆ ಮಾಡಿಕೊಂಡು ನಿರಂತರವಾಗಿ 2 ತಿಂಗಳ ಪರ್ಯಂತರ ಕಾರ್ಯನಿರ್ವಹಿಸಿದರು. ಆದರೆ ಯಾವೊಬ್ಬ ಭಕ್ತರು ಈ ಕಾರ್ಯಕ್ಕೆ  ಒಂದು ರೂಪಾಯಿ ಸಂಬಳವನ್ನು ಪಡೆಯದೆ ಉಚಿತವಾಗಿ  ಭಕ್ತಿಯ ಸೇವೆಯನ್ನು ಸಮರ​‍್ಿಸಿರುವುದು ಅಭಿನಂದನಾರ್ಹ ಕಾರ್ಯವಿದು ಎಂದರು.ಸಪ್ಟೆಂಬರ್ 22ರಂದು ಬೆಳಿಗ್ಗೆ 7 ಕ್ಕೆ ಹೋಮ ಹವನ ಪೂಜಾ ಕಾರ್ಯಕ್ರಮ 8 ಗಂಟೆಗೆ ನಾಡದೇವಿ ಮೂರ್ತಿ ಭವ್ಯ ಮೆರವಣಿಗೆ. 501 ಮಹಿಳೆಯರಿಂದ ಕುಂಭಮೇಳ. ನಾವಲಗಿಯ ಪ್ರಸಿದ್ಧ ಸಂಬಳ ವಾದನ ನಾಡಿನ ಪ್ರಸಿದ್ಧ ಕಲಾವಿದರಿಂದ ಭವ್ಯ ಮೆರವಣಿಗೆ. ನಂತರ 11 ಗಂಟೆಗೆ 1001 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ನಾಡಿನ ಹರ ಗುರು ಚರಮೂರ್ತಿಗಳ ಅಮೃತ ಹಸ್ತದಿಂದ ಮಂದಿರ ಲೋಕಾರೆ​‍್ಣ ಕಾರ್ಯಕ್ರಮ ನಡೆಯಲಿದೆ. 

ನಂತರ ಗೌರವ ಸಮರೆ​‍್ಣ 10,000 ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.ಸಂದರ್ಭದಲ್ಲಿ ನಾಗರಾಳ ದಿಗಂಬರೇಶ್ವರ ಮಠದ ನಿಂಗಪ್ಪಯ್ಯ ಗುರು ಶೇಷಪ್ಪಯ್ಯ ಸ್ವಾಮಿಜಿ ಹಾಗೂ ಸಮಸ್ತ ನಾಗರಾಳ ಗ್ರಾಮದ ಹಾಗೂ ರಾಣಾ ಪ್ರತಾಪ್ ನಗರದ ಗುರು ಹಿರಿಯರು ಮತ್ತು ಯುವಕರು ಮಠದ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.ಬಾಕ್ಸ್‌:ಕಪ್ಪರಪಡಿಯಮ್ಮ ದೇವಿ  ಸಭಾಮಂದಿರ ಸಪ್ಟೆಂಬರ್ 22ರಂದು  ಲೋಕಾರೆ​‍್ಣ:ಇಂಗಳೇಶ್ವರ ವಚನ ಶಿಲಾಮಂಟಪ ವಿರಕ್ತಮಠ ಚನ್ನಬಸವ ಸ್ವಾಮೀಜಿ,ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ,ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿದಿವ್ಯಸಾನಿದ್ಯ ವಹಿಸುವರು.ಬೀಳಗಿ ಸೋಮಪ್ಪಯ್ಯನ ಮಠದಚನ್ನಬಸವ ಸ್ವಾಮೀಜಿ,ಬನಹಟ್ಟಿ ಹಿರೇಮಠ ಶರಣಬಸವ ಶಿವಾಚಾರ್ಯ ಸ್ವಾಮೀಜಿ,ಕೊಣ್ಣೂರು ಹೊರಗಿನ ಮಠದ ವಿಶ್ವಪ್ರಭು ಶಿವಾಚಾರ್ಯ ಸ್ವಾಮೀಜಿ, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ,ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯಸ್ವಾಮೀಜಿ ಸಾನಿಧ್ಯ ವಹಿಸುವರು.ನಾಗರಾಳ ದಿಗಂಬರೇಶ್ವರ ಮಠದಶೇಷಪ್ಪಯ್ಯ ಗುರುನಿಂಗಪ್ಪಯ್ಯ ಸ್ವಾಮೀಜಿ ಹಾಗೂ ನಿಂಗಪ್ಪಯ್ಯ ಗುರುಶೇಷಪ್ಪಯ್ಯ ಸ್ವಾಮೀಜಿ ನೇತೃತ್ವ ವಹಿಸುವರು,ಮಂಟೂರ ಬ್ರಹನ್ಮಠದಸದಾನಂದ ಸ್ವಾಮೀಜಿ ಬಾಗಲಕೋಟ ದಿಗಂಬರೇಶ್ವರ ಮಠದ  ಬಸವರಾಜ ಸ್ವಾಮೀಜಿ,ಸುನಗ ಅನ್ನಪೂರ್ಣೇಶ್ವರಿ ಬೃಹನ್ಮಠ ಶಿವಾನಂದ ಸ್ವಾಮೀಜಿ, ಬೀಳಗಿ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ, ಸಿದ್ದಾಪೂರ ಮಾನಪ್ಪಯ್ಯ ಹುಚ್ಚಪ್ಪಯ್ಯ ಸ್ವಾಮೀಜಿ ಸಮ್ಮುಖ ವಹಿಸುವರು.