ಶರಣರಿಂದ ಕನ್ನಡ ಭಾಷೆ ಬೆಳೆಯಿತು: ಲಕ್ಷ್ಮಣ ನಿರಾಣಿ

    ಶರಣರಿಂದ ಕನ್ನಡ ಭಾಷೆ ಬೆಳೆಯಿತು: ಲಕ್ಷ್ಮಣ ನಿರಾಣಿ  The Kannada language flourished thanks to the Sharanas: Lakshman Nirani

ಲೋಕದರ್ಶನ ವರದಿ 

ಮಹಾಲಿಂಗಪು 01 : ಬೆಳಗಲಿ ಗ್ರಾಮದ ಹೊರವಲಯದಲ್ಲಿರುವ ಸಿದ್ಧಾರೂಢ ಆಶ್ರಮದಲ್ಲಿ ನಡೆದ ಮಾಸಿಕ ಧಾರ್ಮಿಕ ವಿಚಾರ ಸಂಕಿರಣದಲ್ಲಿ ಬಾಡಗಂಡಿ ಬೀಳಗಿ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಲಕ್ಷ್ಮಣ ಆರ್‌. ನಿರಾಣಿ ಮಾತನಾಡಿದರು. ಶರಣರು ಧಾರ್ಮಿಕ ವಿಚಾರ ಹಾಗೂ ಆಚರಣೆಗಳನ್ನು ಕನ್ನಡದಲ್ಲಿ ಬೋಧಿಸುವ ಮೂಲಕ ಕನ್ನಡ ಭಾಷೆಯನ್ನು ಶಕ್ತಿಶಾಲಿಯಾಗಿ ಬೆಳೆಸಿದರು. ಧರ್ಮವನ್ನು ಜನರ ಭಾಷೆಯಲ್ಲಿ ತಿಳಿಸಬೇಕು ಎಂಬುದು ಶರಣರ ಮಹತ್ವದ ನಿರ್ಧಾರವಾಗಿತ್ತು ಎಂದು ಅವರು ಹೇಳಿದರು. ಬದುಕಿನ ಕ್ಷಣಿಕತೆ ಹಾಗೂ ನಶ್ವರತೆಯ ಅರಿವಿನಿಂದ ಕೋಪ, ತಾಪ ಮತ್ತು ಅಹಂಕಾರವನ್ನು ದೂರ ಮಾಡಿಕೊಳ್ಳಬೇಕು ಎಂದರು. ಶರಣೆ ಕಾಶಿಬಾಯಿ ಪುರಾಣಿಕ ಮಾತನಾಡಿ, “ಅರಿವೇ ಗುರು, ಜ್ಞಾನವೇ ಬೆಳಕು, ಸರಳ ನಡೆಯೇ ಪೂಜೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಜನೆ ಹಾಗೂ ಗ್ರಂಥ ಪಠಣ ನಡೆಯಿತು.