ಕಡೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ.ಆದರೆ ತಾಲೂಕಿನ ಬಯಲು ಸೀಮೆ ಎಂದೇ ಕರೆಸಿಕೊಳ್ಳುವ ಕಡೂರು ತಾಲೂಕಿನಲ್ಲಿ ಮಳೆಯ ಅಬ್ಬರವೇ ಇಲ್ಲದೇ ರೈತರು ಆಕಾಶ ನೋಡುವಂತಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಬರ ಪೀಡಿತ ಆಗಿದ್ದ ಕಡೂರು ತಾಲೂಕು ಈ ಬಾರಿಯೂ ವರುಣನ ಅವಕೃಪೆಗೆ ಗುರಿಯಾಗಿದೆ. ಜಿಲ್ಲೆಯಲ್ಲಿ ಮಳೆಯ ಅಬ್ಬರವಿದ್ದರೂ ನಮ್ಮ ತಾಲೂಕಿನಲ್ಲಿ ಮಳೆ ಇಲ್ಲದಿರುವುದು ಇಲ್ಲಿನ ರೈತರ ಪಾಲಿಗೆ ಶಾಪಾವಾಗಿ ಪರಿಣಮಿಸಿದೆ.
ಜೂನ್ನಲ್ಲಿ ಆರಂಭವಾದ ವರ್ಷಧಾರೆ ತುಂತುರು ಮಳೆಯೊಂದಿಗೆ ಆರಂಭವಾಯಿತು. ಇಲ್ಲಿನ ರೈತರು ಖುಷಿಯಿಂದಲೇ ಹೆಸರು ಕಾಳು ಬೀಜವನ್ನ ಬಿತ್ತಿದರು.ಆದರೆ ನಂತರದಲ್ಲಿ ಮಳೆ ನಿಂತಿದ್ದರಿಂದ ಹೆಸರು ಕಾಳು ಬೆಳೆ ರೈತರಿಗೆ ಕೈಕೊಟ್ಟಿತ್ತು.
ನಂತರ ಸೋನೆ ಮಳೆ ಸುರಿದ್ದಿದ್ದರಿಂದ ರೈತರು ರಾಗಿಯನ್ನ ಬಿತ್ತಿದ್ರು. ಸ್ವಲ್ಪ ಸೋನೆ ಮಳೆ ಸುರಿದಿದ್ದರಿಂದ ರೈತರು ಸ್ವಲ್ಪ ಸಂತಸದಲ್ಲಿದ್ದಾರೆ. ಮಹಾ ಮಳೆಗೆ ಜಿಲ್ಲೆಯ ನದಿ ಕೆರೆಗಳು ತುಂಬಿ ಹರಿಯುತ್ತಿದ್ದರೆ ಕಡೂರು ತಾಲೂಕಿನ ಕೆರೆಗಳು ಹನಿ ನೀರಿಲ್ಲದೇ ಬರಿದಾಗಿವೆ.
ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿರುದತ್ತದೆ. ಜೋರಾಗಿ ಗಾಳಿಯು ಬೀಸುತ್ತದೆ. ಸೋನೆ ಮಳೆ ಮಾತ್ರ ಸುರಿದು ರೈತರನ್ನ ನಿರಾಸೆಗೊಳಿಸುತ್ತಿದೆ.
ಮುಂದಿನ ದಿನಗಳಾಲ್ಲದರೂ ಮಳೆ ಸುರಿಯುತ್ತಾ ? ಕೆರೆಕಟ್ಟೆಗಳು ತುಂಬುತ್ತಾ ಅಂತ ರೈತರು ಲೆಕ್ಕಾಚಾರಗಳನ್ನ ಹಾಕಿದ್ದಾರೆ.