ಅಹಿಂಸೊ ಪರಮೋ ಧರ್ಮ ಎಂಬ ತತ್ವವನ್ನು ಜೈನ ಸಮಾಜದವರು ಅಳವಡಿಸಿಕೊಂಡವರು : ಯಲ್ಲಪ್ಪ ಗೋಣೆಣ್ಣನವರ
The Jain community adopted the principle of Ahimso Paramo Dharma: Yallappa Gonennavara
ಲೋಕದರ್ಶನ ವರದಿ
ಶಿಗ್ಗಾವಿ 30: ಎಲ್ಲಿ ಹಿಂಸೆ ಇರುತ್ತದೆಯೋ ಅಲ್ಲಿ ನೆಮ್ಮದಿ ಇರುವದಿಲ್ಲ, ಎಲ್ಲಿ ಅಹಿಂಸೆ ಇರುತ್ತದೆಯೋ ಅಲ್ಲಿ ನೆಮ್ಮದಿ ಇರುತ್ತದೆ, ಅಹಿಂಸೊ ಪರಮೋ ಧರ್ಮ ಎಂಬ ತತ್ವವನ್ನು ಜೈನ ಸಮಾಜದವರು ಅಳವಡಿಸಿಕೊಂಡು ಬಂದಿದ್ದಾರೆ ಎಂದು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣನವರ ಹೇಳಿದರು.
ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡ ಮಹಾವೀರ ತೀರ್ಥಂಕರರ 2625 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಹಿಸೆ ತಾಂಡಾವಾಡುವ ಸಮಯದಲ್ಲಿ ಮಹಾವೀರು ಜೈನ ಧರ್ಮವನ್ನು ಬೆಳಕಿಗೆ ತಂದರು, ಈ ಸಮಾಜ ಉತ್ಕುಷ್ಟ್ರ ಸಾಹಿತ್ಯ ನೀಡಿದ ಸಮಾಜ, ದೊಡ್ಡ ದೊಡ್ಡ ಗ್ರಂಥಗಳನ್ನು ನೀಡಿದೆ, ಜೊತೆಗೆ ಅಂಹಿಸೆ, ತ್ಯಾಗ, ಪ್ರೀತಿಯ ಮೌಲ್ಯಗಳನ್ನು ಉಳಿಸಿಕೊಂಡು ಬಂದ ಸಮಾಜವಾಗಿದೆ, ಅಂಹಿಸೆ ಇಂದಿನ ಪರಿಸ್ಥಿತಿಯಲ್ಲಿ ಉತ್ತಮ ಮಾರ್ಗ ಎಂದು ತಿಳಿದು ನಾವೇಲ್ಲರೂ ಮಹಾವೀರರ ತತ್ವಗಳನ್ನು ಪಾಲಿಸಬೇಕು ಎಂದರು.
ಶಿಕ್ಷಕ ವರ್ಧಮಾನ ಛಬ್ಬಿ ಮಾತನಾಡಿ ನಮ್ಮ ಸಮಾಜ ಬದುಕು ಬದುಕಲು ಬೀಡು ಎಂಬ ಸಂದೇಶ ನೀಡುವ ಸಮಾಜವಾಗಿದೆ, ಅಂಹಿಸಾ ಪರಮೊ ಧರ್ಮ ಎಂದು ಭೋಧಿಸುತ್ತದೆ, ದ್ವೇಷ ಬಿಟ್ಟು ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು, ಎಲ್ಲವನ್ನು ಗೆದ್ದವದು ಮಹಾವೀರರಾಗಿದ್ದಾರೆ, ಅಹಿಂಸೆ, ತೊಂದರೆ ನೀಡಿ ಬದುಕುವವರ ಮಧ್ಯ ಮತ್ತೊಬ್ಬರಿಗೆ ತೊಂದರೆ ನೀಡದೆ ಬದುಕಬೇಕು ಎನ್ನುವ ತತ್ವ ಪಾಲಿಸುತ್ತಿದೆ, ಜೀವಿಸಬೇಕು, ಜೀವಿಸಲು ಬಿಡಬೇಕು ಎಂದು ಬದುಕುವವರು ಜೈನ ಸಮಾಜದವರಾಗಿದ್ದಾರೆ ಎಂದರು.
ಜೈನ ಸಮಾಜದ ತಾಲೂಕ ಅಧ್ಯಕ್ಷ ರವೀಂದ್ರ ಪಾಸಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪ್ರಕಾಶ ಧರಣ್ಯಪ್ಪನವರ, ಮುಖಂಡರಾದ ವೀರಣ್ಣ ಚವಟೆ, ಸುಧೀರ ಚಬ್ಬಿ, ಮಹಾವೀರ ಧಾರವಾಡ, ಧರಣೇಂದ್ರ ಮಣಕಟ್ಟಿ, ಶಶಿಕಾಂತ ಹಿತ್ತಲಕೇರಿ, ಕಲಾವಿದೆ ಭಾರತಿ ವರ್ಧಮಾನ ಛಬ್ಬಿ, ಪವನಕುಮಾರ ದೇಸಾಯಿ, ಕುಬೇರ ಸಿದ್ದಣ್ಣವರ, ಬಾಹುಬಲಿ ಮರಿಸಿದ್ದಣ್ಣವರ, ಭರತೇಶ ಬಳಿಗರ, ಮನೋಹರ ಸಾತಗೊಂಡ, ಬ್ರಹ್ಮೇಶ ಬಿಶೆಟ್ಟಿ, ಅಭಿನಂದನ ಪುಟ್ಟಣ್ಣವರ, ಭರಮಪ್ಪ ವರೂರ, ಧನಪಾಲ ಕೊಳೂರ ಸೇರಿದಂತೆ ಸಮಾಜದ ಬಾಂಧವರು ವಿವಿಧ ಸಮಾಜಗಳ ಮುಖಂಡರು, ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 