ಪವಿತ್ರ ಕುರಾನ್ ಪ್ರತಿ ದಹಿಸಲು ಯತ್ನ ; ನಾವರ್ೆ ರಾಯಭಾರಿಗೆ ಪಾಕಿಸ್ತಾನ ಸಮೆನ್ಸ್

ಇಸ್ಲಾಮಾಬಾದ್, ನ 24:  ನಾವರ್ೆಯ  ಕ್ರಿಸ್ಟಿಯಾನ್ ಸ್ಯಾಂಡ್  ನಗರದಲ್ಲಿ  ಇಸ್ಲಾಮ್ ಧರ್ಮದ ಪವಿತ್ರ ಗ್ರಂಥ  ಕುರಾನ್  ಅಪವಿತ್ರಗೊಳಿಸಿರುವ ಘಟನೆ ಬಗ್ಗೆ  ತೀವ್ರ ಕಳವಳ ವ್ಯಕ್ತಪಡಿಸಿರುವ  ಪಾಕಿಸ್ತಾನ,  ತನ್ನ ರಾಜಧಾನಿಯಲ್ಲಿರುವ  ನಾವರ್ೆ ರಾಯಭಾರಿಯನ್ನು     ವಿದೇಶಾಂಗ ಕಚೇರಿಗೆ  ಬರುವಂತೆ ಸಮನ್ಸ್ ನೀಡಿದೆ. 

ಕ್ರಿಸ್ಟಿಯಾನ್ ಸ್ಯಾಂಡ್ ನಲ್ಲಿ   ವಾರದ ಆರಂಭದಲ್ಲಿ ನಡೆದ  "ನಾವರ್ೆಯಲ್ಲಿ ಇಸ್ಲಾಮೀಕರಣ ತಡೆ" ಆಂದೋಲನದ   ನಡೆಸಿದ   ಸಮಾವೇಶದಲ್ಲಿ,   ಆಂದೋಲನಾದ ಹೋರಾಟಗಾರ  ಲಾಸರ್್ ಥೋರಸನ್,  ಪೊಲೀಸರು ಎಚ್ಚರಿಕೆ ನೀಡಿದರೂ  ಪವಿತ್ರ ಕುರಾನ್  ಪ್ರತಿಯನ್ನು ದಹಿಸಲು ಯತ್ನಿಸಿದರು,  ಧರ್ಮಗ್ರಂಥ ಪ್ರತಿ ಸುಡುವುದನ್ನು  ಅಪರಿಚಿತ ವ್ಯಕ್ತಿಯೊಬ್ಬರು ತಡೆಯಲು ಮುಂದಾದಾಗ  ಸ್ಥಳದಲ್ಲಿ  ಗಲಾಟೆ ನಡೆದಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.    

ನಾವರ್ೆ  ರಾಯಬಾರಿಯನ್ನು   ವಿದೇಶಾಂಗ  ಕಚೇರಿ  ಇಂದು  ಸಂಪಕರ್ಿಸಿ,  ನಾವರ್ೆಯ ಕ್ರಿಸ್ಟಿಯಾನ್ ಸ್ಯಾಂಡ್ ನಗರದಲ್ಲಿ  ಪವಿತ್ರ ಗ್ರಂಥವನ್ನು ಅಪಮಾನಿಸುವ  ಘಟನೆಗೆ ಪಾಕಿಸ್ತಾನದ ಜನತೆ ಹಾಗೂ  ಸಕರ್ಾರದ  ತೀವ್ರ ಕಳವಳವನ್ನು ಮನದಟ್ಟುಮಾಡಿಕೊಡಲಾಗಿದೆ.  ಘಟನೆ ಸಂಬಂಧ ಪಾಕಿಸ್ತಾನದ ಖಂಡನೆಯನ್ನು ಪುನರುಚ್ಚರಿಸಲಾಗಿದೆ. ಇಂತಹ ಕೃತ್ಯಗಳು  ಪಾಕಿಸ್ತಾನ ಸೇರಿದಂತೆ ಜಗತ್ತಿನೆಲ್ಲೆಡೆಯಿರುವ 1.3  ಬಿಲಿಯನ್ ಮುಸ್ಲಿಮರ ಭಾವನೆಗಳನ್ನು ತೀವ್ರ ಘಾಸಿಗೊಳಿಸುತ್ತವೆ. ಇಂತಹ  ಕ್ರಮಗಳನ್ನು  ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಸಮಥರ್ಿಸಿಕೊಳ್ಳಲು ಸಾಧ್ಯವಿಲ್ಲ  ಎಂದು ಪಾಕ್  ವಿದೇಶಾಂಗ ಸಚಿವಾಲಯ ಹೇಳಿದೆ. 

ಘಟನೆಯನ್ನು  ಖಂಡಿಸಿರುವ  ಪಾಕಿಸ್ತಾನದಲ್ಲಿರುವ ನಾವರ್ೆ ರಾಯಭಾರಿ  

ಕೆಜೆಲ್-ಗುನ್ನಾರ್ ಎರಿಕ್ಸೆನ್,  ನಾವರ್ೆ ದೇಶದಲ್ಲಿರುವ  ಪ್ರತಿಯೊಬ್ಬರಿಗೂ  ಅಭಿವ್ಯಕ್ತಿ ಹಾಗೂ ತಮ್ಮ ಧಮರ್ಾಚರಣೆಯ ಹಕ್ಕು ಕಲ್ಪಿಸಲಾಗಿದೆ ಎಂದು ಸಮಥರ್ಿಸಿಕೊಡಿದ್ದಾರೆ 

ಇಂತಹ ಘಟನೆಗಳೆ ಕಾರಣರಾದ  ವ್ಯಕ್ತಿಗಳನ್ನು ಬಂಧಿಸಿ  ಸೂಕ್ತ ಕ್ರಮ ಜರುಗಿಸಬೇಕು,  ಭವಿಷ್ಯದಲ್ಲಿ  ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು  ಪಾಕಿಸ್ತಾನ  ನಾವರ್ೆ ಸಕರ್ಾರವನ್ನು ಆಗ್ರಹಿಸಿದೆ.