ವಿಂಡೋಯೆಕ್, ಡಿ 1 (ಕ್ಸಿನುಹ) ನಮೀಬಿಯಾದ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಹೇಗ್ ಗೆಯಿಂಗ್ ಗೋಬ್ ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಗೆಯಿಂಗ್ ಶೇ.56.3ರಷ್ಟು ಮತಗಳಿಸಿದರೆ, ಇವರ ಎದುರಾಳಿಯಾಗಿದ್ದ ಸ್ವತಂತ್ರ ಅಭ್ಯರ್ಥಿ ಪಾಂಡುಲೇನಿ ಇತುಲಾ ಶೇ. 29.2ರಷ್ಟು ಮತ ಗಳಿಸಿದ್ದಾರೆ ಎಂದು ಅಲ್ಲಿನ ಚುನಾವಣಾ ಆಯೋಗ ಶುಕ್ರವಾರ ರಾತ್ರಿ ಪ್ರಕಟಿಸಿದೆ.
ಇತುಲಾ ಅವರು ಹಿಂದಿನ ಅಧ್ಯಕ್ಷ ಗೆಯಿಂಗ್ ಅವರಿಗೆ ಕಠಿಣ ಸ್ಪರ್ಧೆ ನೀಡಿದ್ದರು. ಕೊನೆಗೆ ಗೆಯಿಂಗ್ ಗೋಬ್ 4.62 ಲಕ್ಷ ಮತ ಗಳಿಸಿದರೆ ಇತುಲಾ 2.42 ಲಕ್ಷ ಮತಗಳಿಂದ ಪರಾಭವಗೊಂಡರು. ಇದರಿಂದ ಮುಂದಿನ ಐದು ವರ್ಷಗಳಿಗೆ ನಮೀಬಿಯಾದ ಆಡಳಿತಾರೂಢ ಸ್ವಾಪೋ ಪಕ್ಷ ಮತ್ತೊಮ್ಮೆ ಅಧಿಕಾರ ನಡೆಸಲಿದೆ.