ಅಕ್ಷರದೊಂದಿಗೆ ಲೋಕದ ಜ್ಞಾನ ನೀಡುವ ಶಕ್ತಿ ಗುರುವಿನಲ್ಲಿದೆ
The Guru has the power to impart worldly knowledge through letters
ಬ್ಯಾಡಗಿ 16: ತಾಲೂಕಿನ ಮೋಟೆಬೆನ್ನೂರಿನ ನವೋದಯ ವಿದ್ಯಾ ಸಂಸ್ಥೆಯಲ್ಲಿ ಇಂದು ಹಡಪದ ಅಪ್ಪಣ್ಣ ಜಯಂತಿ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ದಲ್ಲಿ ಮುಖ್ಯ ಅತಿಥಿಯಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಪಿ ಟಿ ಲಕ್ಕಣ್ಣವರ ಅವರು ಗುರು ಶಿಷ್ಯ ಪರಂಪರೆ ಪ್ರಾಚೀನ ಕಾಲದಿಂದಲಿರುವ ಒಂದು ಅನನ್ಯ ಸಂಬಂಧವಾಗಿದೆ ಗುರು ಎಂಬ ವ್ಯಕ್ತಿ ನಮ್ಮಲ್ಲಿ ಅರಿವನ್ನು ಮಾಡಿಸುವ ಅಕ್ಷರ ಸಂಸ್ಕಾರ ಮೂಲಕ ಲೋಕದ ಜ್ಞಾನವನ್ನು ನೀಡುವ ಗುರುತರ ಜವಾಬ್ದಾರಿ ಗುರುವಿನ ಮೇಲಿದೆ ಗುರುವಿನ ಮುಖಾಂತರ ಜ್ಞಾನವನ್ನು ಸಂಪಾದಿಸುವ ಸದ್ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ನಾಗರಿಕರಾಗ ಬೇಕಾಗಿರುವುದು ಶಿಷ್ಯ ನ ಧರ್ಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಬಳ್ಳಾರಿ ಸರ್ ಮಾತನಾಡಿ ಮಕ್ಕಳಲ್ಲಿ ಸಮಯ ಪಾಲನೆ ಶಿಸ್ತು ಸಾಮಾನ್ಯ ಜ್ಞಾನ ವಿಸ್ತರಣೆ ಮಾಡಿಕೊಳ್ಳುವಂತಹ ಶಕ್ತಿಯನ್ನು ತುಂಬುವುದು ಗುರುತರ ಜವಾಬ್ದಾರಿ ಗುರುಗಳಿಗೆ ವಿದೇಕರಾಗಿ ವರ್ತಿಸುವುದು ಶಿಷ್ಯನ ಕರ್ತವ್ಯ ಎಂದು ನುಡಿದರು.ಹಡಪದ ಅಪ್ಪಣ್ಣನವರ ಜಯಂತಿ ಬಗ್ಗೆ ವಿ ಕೆ ಭಗವಂತಗೌಡ್ರು ಮಾತನಾಡಿದರು.ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದಂತ ಶ್ರೀ ಬಿಸಿ ಹಾವೇರಿ ಮಠ ಸರ್ ಅವರು ಕಾರ್ಯದರ್ಶಿ ಗಳು ಮಲ್ಲಿಕಾರ್ಜುನ್ ವಿ ಬಳ್ಳಾರಿ ಸರ್ ಅತಿಥಿಗಳಾದಂತಹ ಕುಮಾರ ಗೌಡ್ರು ಪಾಟೀಲ್ ವರ್ತಕರು ನಿರ್ದೇಶಕರಾದಂತಹ ಡಾ. ಪ್ರೇಮಾನಂದ ಲಕ್ಕಣ್ಣನವರ ಗುರುಗಳು ಅಶೋಕ ಎಸ್ ಬಣಕಾರ್. ಎಲ್‌ಎಸ್ ಹರಿಯಾಳ . ಯು ಎಸ್ ರುದ್ರದೇವರ ಮಠ ಹಾಗೂ ವಿ ಸಿ ಹಾವೇರಿ ಮಠ. ಮಾತನಾಡಿದರು.ಶಾಲೆಯ ಎರಡು ವಿಭಾಗದ ಮುಖ್ಯ ಗುರುಗಳು ಸಿಬ್ಬಂದಿ ವರ್ಗದವರು . ಉಪಸ್ಥಿತರಿದ್ದರು ಈ ಒಂದು ಕಾರ್ಯಕ್ರಮಕ್ಕೆ ಸಂಸ್ಥೆಯ ಎಲ್ಲಾ ಗುರುಗಳು ಹಾಜರಿದ್ದು ಯಶಸ್ವಿಯಾಗಿ ನಡೆಸಿಕೊಟ್ಟರು..
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 