ವಿನಾಶದ ಝಲಕ್ ತೋರಿಸುತ್ತಿರುವ ಕೊಲ್ಲಿ ಯುದ್ಧ
ಲೋಕದರ್ಶನ ವರದಿ
ನಾನು ಏನಾಗಿದ್ದೇನೆ ಎನ್ನುವುದರ ಮೇಲೆ ಸೋಲು ಗೆಲುವಿಲ್ಲ. ನಾನು ಹೇಗೆ ನಡೆದುಕೊಳ್ಳುತತ್ತೇನೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ
ಒತ್ತಡದ ಮಧ್ಯದಲ್ಲಿ ಒಂದಷ್ಟು ಸಮಯ ಮಾಡಿಕೊಂಡು ಒಂದು ಪುಸ್ತಕವನ್ನು ಓದುತ್ತ ಕೂತಿದ್ದೆ. ಅದರಲ್ಲಿ ಬಂದ ಒಂದು ಸಣ್ಣ ಕಥೆಯೊಂದು ವಾಸ್ತವದ ಬದುಕಿಗೆ ಹೋಲಿಕೆ ಮಾಡಿ ಹೇಳಿದಂತಾಯಿತು. ಅರೇ ಕಥೆ ಯಾವತ್ತಿದ್ದರು ಕಥೆಯೇ ಹೊರತು ವಾಸ್ತವವಲ್ಲ ಎಂದು ಯಾರೋ ಭಾಷಣದಲ್ಲಿ ಹೇಳಿದ ಮಾತು ನೆನಪಾಯಿತು. ಆದರೆ ಈ ಕಥೆ ಓದಿದ ಮೇಲೆ ಇದು ಕಥೆಯಲ್ಲ ವಾಸ್ತವದ ಬದುಕಿಗೆ ಹಿಡಿದ ಕನ್ನಡಿ ಎನಿಸಿತು. ಅಷ್ಟಕ್ಕೂ ಆ ಕಥೆಯಲ್ಲಿ ಬರುವ ಪಾತ್ರಗಳು ಎರಡೇ ಎರಡು. ಒಂದು ಪಾರಿವಾಳ ಮತ್ತೊಂದು ವಿಷ ಸರ್. ಒಂದು ಬಾರಿ ಕಂದಕದ ತುದಿಯಲ್ಲಿ ಹರಿದಾಡುತ್ತಿದ್ದ ಸರೊ್ವಂದು ಅಲ್ಲೇ ಹತ್ತಿರದಲ್ಲಿ ಹಾರಾಡುತ್ತಿದ್ದ ಪಾರಿವಾಳವನ್ನುದ್ಧೇಶಿ “ಓ ಪಾರಿವಾಳವೇ ನೀನು ಎಷ್ಟು ಎತ್ತರದಲ್ಲಿದ್ದೀಯಾ? ನಿನ್ನಷ್ಟು ಎತ್ತರದಲ್ಲಿ ನಾನಿರಬೇಕು ಎಂದರು ಸಾಧ್ಯವಾಗುವುದಿಲ್ಲ. ನಿನ್ನಷ್ಟು ವೇಗವಾಗಿ ನಾನು ಬೇರೆ ಕಡೆಗೆ ಹೋಗುತ್ತೇನೆ ಎಂದರು ಸಹ ಸಾಧ್ಯವಾಗುವುದಿಲ್ಲ. ನೋಡು ಈ ಕಂದಕ ದಾಟಿ ಆಚೆ ಕಡೆಗೆ ಹೋಗಿ ಬದುಕು ಕಟ್ಟಿಕೊಳ್ಳಬೇಕು ಎಂದರೂ ನಾನೆಷ್ಟು ಕಷ್ಟ ಪಡಬೇಕು. ಅದೂ ಅಲ್ಲದೆ ನಮಗೆ ಸಹಾಯ ಮಾಡುವುದಕ್ಕೆ ಯಾರೂ ಮುಂದೆ ಬರುವುದಿಲ್ಲ. ನೀನಾನದರೂ ನನಗೆ ಸಹಾಯ ಮಾಡು” ಎಂದು ಕೇಳಿತು. ಅದಕ್ಕೆ ಉತ್ತರ ನೀಡಿದ ಪಾರಿವಾಳ “ ನಿಮಗೆ ಉಪಕಾರ ಮಾಡುವುದಕ್ಕೆ ನಮಗೇನು ಸಮಸ್ಯೆ ಇಲ್ಲ. ಆದರೆ ಉಪಕಾರ ಮಾಡಿದವನಿಗೆ ಅಪಕಾರ ಮಾಡುತ್ತೀರಿ ಅಲ್ಲವೇ ಅದಕ್ಕಾಗಿ ಸಹಾಯ ಮಾಡಲು ಹೆದರಿಕೆಯಾಗುತ್ತದೆ” ಆಗ ಸರ್ ಹೇಳುತ್ತದೆ “ನಾನು ನಿನಗೆ ಏನು ಮಾಡುವುದಿಲ್ಲ ಎನ್ನುವ ಭರವಸೆ ನೀಡುತ್ತೇನೆ. ನಾನು ನಿನಗೆ ಏನು ಕೇಡು ಮಾಡುವುದಿಲ್ಲ. ದಯವಿಟ್ಟು ನಿನ್ನ ಹೆಗಲ ಮೇಲೆ ನನ್ನನ್ನು ಕೂರಿಸಿಕೊಂಡು ಕಂದಕವನ್ನು ದಾಟಿಸು” ಎಂದು ಬೇಡಿತು. ಸರ್ದ ಮಾತಿಗೆ ಕರಗಿದ ಪಾರಿವಾಳ ಸರ್ವನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಹಾರತೊಡಗಿತು. ಕಂದಕದ ಮಧ್ಯ ಭಾಗಕ್ಕೆ ಬರುವಷ್ಟರಲ್ಲಿ ಹೆಗಲೇರಿದ್ದ ಸರ್ ಪಾರಿವಾಳವನ್ನು ಕಚ್ಚಿತು. ವಿಷವೇರಿದ ಪಾರಿವಾಳ ನೋಡು ನೋಡುತ್ತಿದ್ದಂತೆ ನೆಲಕ್ಕಪಳಿಸಿತು. ಸಾಯುವ ಹಂತದಲ್ಲಿದ್ದ ಪಾರಿವಾಳ ಸರ್ವನ್ನುದ್ಧೇಶಿಸಿ “ಅಲ್ಲ...! ನಾನು ನಿನಗೆ ಸಹಾಯ ಮಾಡಿದ ಮೇಲೂ ನನ್ನನ್ನು ಕಚ್ಚಿದೆಯಲ್ಲ ಇದು ಯಾವ ನ್ಯಾಯ” ಎಂದು ಕೇಳಿತು. ಅದಕ್ಕೆ ಉತ್ತರಿಸಿದ ಸರ್; “ಅಯ್ಯಾ ಪರಿವಾಳ ದಯವಿಟ್ಟು ನನ್ನನ್ನು ಕ್ಷಮಿಸು. ನಾನೇನು ನಿನ್ನನ್ನು ಕಚ್ಚಬೇಕು ಎಂದು ಕಚ್ಚಲಿಲ್ಲ. ನಾನೇನು ಮಾಡಲಿ ನನ್ನ ಗುಣವೇ ಹಾಗಿದೆ. ಆ ಸೃಷ್ಟಿಕರ್ತ ನನ್ನ ಸ್ವಭಾವವನ್ನು ಹಾಗೆಯೇ ನಿರ್ಮಾಣ ಮಾಡಿದ್ದಾನೆ. ನನಗೆ ಹಾಲೆರೆದರೂ ನಾನು ವಿಷ ಕಾರದೆ ಇರಲು ಸಾಧ್ಯವಿಲ್ಲ. ಹೀಗಾಗಿ ನಿನ್ನನ್ನು ಕಚ್ಚಿದೆ” ಎಂದು ಹೇಳಿತು. ಹಾವಿನ ಮಾತು ಕೇಳಿ ಕಣ್ಣಂಚಲ್ಲಿ ನೀರು ಜಿನುಗಿಸಿ ಪಾರಿವಾಳ ಸತ್ತು ಹೋಯಿತು. ಮೇಲಿನಿಂದ ಬಿದ್ದ ರಬಸಕ್ಕೆ ಸರೂ್ವ ಸಹ ಸ್ವಲ್ಪ ಹೊತ್ತು ಉರುಳಾಡಿ ಹೊರಳಾಡಿ ಕೊನೆಗೆ ಉಸಿರು ಚಲ್ಲಿತು.
ಈ ಕಥೆ ವಾಸ್ತವಕ್ಕೆ ಅದೆಷ್ಟು ಹತ್ತಿರವಾಗಿದೆ ಎಂದರೆ ಇಂದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ಬೆಳಕು ಚಲ್ಲುತ್ತದ. ಅದೇ ರೀತಿ ಯಾವ ಹಾವನ್ನು ಯಾರು ಸಾಕುತ್ತಿದ್ದಾರೋ. ಯಾರನ್ನು ಯಾರು ಕಚ್ಚುತ್ತಿದ್ದಾರೋ. ಜೊತೆಗೆದ್ದೇ ಯಾರು ವಿಷ ಉಣಿಸುತ್ತಿದ್ದಾರೋ ಎನ್ನುವುದು ಅರ್ಥ ಮಾಡಿಕೊಳ್ಳುವುದು ಸಹ ಕಷ್ಟವಾಗುವಂತಾಗಿದೆ. ವಿಶ್ವದ ಹಿರಿಯಣ್ಣನ ಪಟ್ಟಕ್ಕಾಗಿ ಕಚ್ಚಾಟ ನಡೆಸಿ, ನಾನೇ ಎಲ್ಲವನ್ನು ಬಲ್ಲವನು ಎನ್ನುವ ರೀತಿಯಲ್ಲಿ ಸ್ವಾರ್ಥ ಸಾಧನೆಯಲ್ಲಿ ಗೆದ್ದು ಬೀಗಿದ ಅಮೇರಿಕಾ ಇಂದು ತನ್ನ ಕಾರ್ಯ ಸಾಧನೆಗಾಗಿ ತನಗೆ ಹೇಗೆ ಬೇಕೋ ಹಾಗೆ ಹಸಿ ಹಸಿ ಸುಳ್ಳುಗಳನ್ನು ಸೃಷ್ಠಿಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದೆ. ಯಾರೋ ಯುದ್ದ ಮಾಡಿದರೆ ಮಧದ್ಯಸ್ಥಿಕೆ ನಾನೇ ವಹಿಸಿ ಎಲ್ಲವನ್ನು ಸರಿ ಪಡಿಸದ್ದೇನೆಂದು ಬಡಾಯಿಕೊಚ್ಚಿಕೊಳ್ಳುವ ಇಂಥ ದೇಶದ ಬೆನ್ನಿಗೆ ಬಿದ್ದಿರುವ ರಾಷ್ಟ್ರಗಳಿಗೆ ಇದು ಬಿಸಿ ತುಪ್ಪವಾಗಿದೆ. ಅತ್ತಕಡೆ ಉಗಿಯುವುದಕ್ಕೂ ಆಗದೆ. ಇತ್ ಕಡೆ ನುಂಗುವುದಕ್ಕೂ ಆಗದೆ ಸಂಕಟದಲ್ಲಿ ಒದ್ದಾಡುತ್ತಲಿವೆ. ಒಟ್ಟಿನಲ್ಲಿ ಪಾರಿವಾಳಗಳು ಮಾತ್ರ ಸಾಯುತ್ತಿವೆ ಕಚ್ಚಿದ ಸರ್ ಮಾತ್ರ ಜೀವಂತವೇ ಇದೆ ಎನ್ನುವುದಕ್ಕೆ ಜಾಗತಿಕ ಘಟನೆಗಳು ಸಾಕ್ಷ್ಯ ನೀಡುತ್ತಿದೆ.
ಒಮ್ಮಿಂದೊಮ್ಮಿಲೆ ಆರಂಭವಾದ ಇರಾನ್, ಅಮೇರಿಕಾ, ಇಸ್ರೇಲ್ ಯುದ್ಧ ಇಂದು ಜಾಗತಿಕ ಮಟ್ಟದಲ್ಲಿ ಸಾವಾಲುಗಳ ಬೆಟ್ಟಗಳನ್ನೇ ಸೃಷ್ಠಿ ಮಾಡಿ ನಿಲ್ಲಿಸಿದೆ. ಯುದ್ಧ ನಡೆಯುತ್ತಿರುವುದು ಮೂರು ರಾಷ್ಟ್ರಗಳ ಮಧ್ಯದಲ್ಲಿಯೇ ಆದರೂ ನೂರು ರಾಷ್ಟ್ರಗಳು ಕಷ್ಟ ಎದುರಿಸುತ್ತಿವೆ. ಅತ್ತ ಯುದ್ಧ ನಿರತವಾದ ರಾಷ್ಟ್ರಗಳು ತಮ್ಮ ಹಿತಾಸಕ್ತಿಗಾಗಿ ಹೊಡೆದಾಡುತ್ತಿದ್ದರೆ ಸಂಬಂಧವೇ ಇಲ್ಲದ ಎಷ್ಟೋ ರಾಷ್ಟ್ರಗಳು ಆರ್ಥಿಕ ಸಂಕಷ್ಟದ ಭೀತಿ ಎದುರಿಸುತ್ತಿವೆ. ತನ್ನ ರಾಷ್ಟ್ರದಲ್ಲಿ ಭುಗಿಲೇಳುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರಲ್ಲಿಯೇ ಸಾಕಾಪ್ಪ ಸಾಕು ಎನ್ನುವ ಮಟ್ಟಕ್ಕೆ ಬಂದು ತಲುಪುತ್ತಿವೆ. ಇದರಿಂದಾಗಿ ಗೆಲುವು ಸೋಲುಗಳ ಲೆಕ್ಕಾಚಾರ ಮಾಡಬೇಕಾದ ಇರಾನ್ ಇಸ್ರೇಲ್ ಅಮೇರಿಕಾ ದೇಶಗಳು ಯುದ್ಧ ನಿರತವಾಗಿವೆ. ಆದರೆ ಅನ್ಯ ರಾಷ್ಟ್ರಗಳು ಮಾತ್ರ ತಮ್ಮ ಅಸ್ಮಿತೆಗಾಗಿ ಹೊಡೆದಾಡುವಂತ ಪರಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯವಾಗಿದೆ. ಅಮೇರಿಕಾವನ್ನು ನೆಚ್ಚಿಕೊಂಡು ಎಷ್ಟೋ ರಾಷ್ಟ್ರಗಳು ಅದನ್ನು ಸ್ನೇಹಿತನನ್ನಾಗಿ ಮಾಡಿಕೊಂಡರೂ ಸಹ ವಿಷ ಕಾರುವ ಆ ಹಿರಿಯಣ್ಣನ ಬುದ್ದಿಯನ್ನು ಅದು ಯಾವತ್ತೂ ಬಿಡುವುದಿಲ್ಲ. ಭಾರತದೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದೇವೆ. ಭಯೋತ್ಪಾದನೆಯನ್ನು ಯಾವತ್ತಿಗೂ ಖಂಡಿಸುತ್ತೇವೆ. ಎಂದು ಹೇಳುವ ಅಮೇರಿಕಾವೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತದೆ. ಒಂದು ಕಡೆ ತೊಟ್ಟಿಲನ್ನು ತೂಗುವುದು ಮತ್ತೊಂದು ಕಡೆ ಕೂಸನ್ನು ಚಿವುಟುವುದು ಅಮೇರಿಕಾದ ಹುಟ್ಟು ಗುಣವಾಗಿದೆ. ಹೀಗಾಗಿಯೇ ಎಲ್ಲ ರಾಷ್ಟ್ರಗಳು ಪಾರಿವಾಳದಂತೆ ಅದನ್ನು ಹೆಗಲ ಮೇಲೆ ಹೊತ್ತು ಹೋದರೂ ಸಹ ಅದು ಸರ್ದಂತೆ ಕಚ್ಚದೇ ಬಿಡುವುದಿಲ್ಲ. ಈ ಕಾರಣದಿಂದಾಗಿಯೇ ಅಮೇರಿಕಾವನ್ನು ಕಂಡರೆ ಇನ್ನುಳಿದ ರಾಷ್ಟ್ರಗಳು ಸಂದೇಹದಿಂದ ನೋಡುವಂತಾಗಿದೆ. ತನ್ನ ಅಸ್ಮಿತೆಗಾಗಿ ಹಾಗೂ ತಾನು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಎಂದು ತೋರಿಸಿಕೊಳ್ಳುವುದಕ್ಕಾಗಿ ಯಾವ ಕೆಲಸವನ್ನು ಬೇಕಾದರೂ ಅಮೇರಿಕಾ ಮಾಡುತ್ತದೆ. ಒಂದು ರಾಷ್ಟ್ರವನ್ನು ಮತ್ತೊಂದು ರಾಷ್ಟ್ರದ ಮೇಲೆ ಎತ್ತಿಕಟ್ಟಿ ಮಧ್ಯಸ್ಥಿಕೆ ವಹಿಸಿ ಮಾತನಾಡುವ ಕಲೆಯನ್ನು ಪ್ರದರ್ಶಿಸುತ್ತದೆ. ನನ್ನಿಂದಲೇ ಶಾಂತಿ ಎನ್ನುವ ಭ್ರಾಂತಿಯನ್ನು ಉಂಟು ಮಾಡುತ್ತದೆ. ಇಷ್ಟೆಲ್ಲ ಮುತ್ಸದ್ದಿತನದ ಮಾತಾಡುವ ಮಾಹಾನುಭಾವು ಅಮೇರಿಕಾ ಇಂದು ತಂದೊಡ್ಡಿರುವ ಸಮಸ್ಯೆ ಅಷ್ಟು ಸುಲಭಕ್ಕೆ ಬಗೆ ಹರಿಯುವಂತದ್ದಲ್ಲ. ಒಂದೇ ದಿನದಲ್ಲಿ ಇರಾನ್ ದೇಶವನ್ನು ಮಣ್ಣು ಮುಕ್ಕಿಸಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೊಂಡು ಇರಾನ್ ತೈಲ ಭಾವಿಗಳನ್ನು ಗುರಿಯಾಗಿಸಿ ಯುದ್ಧಕ್ಕಿಳಿದಿರುವ ಟ್ರಂಪ್‌ನ ಪಡೆ ತಾನು ಬೇರೊಬ್ಬರನ್ನು ನಾಶ ಮಾಡುವುದರ ಜೊತೆಗೆ ತಾನು ನಾಶ ಹೊಂದುವ ಸ್ಥಿತಿಗೆ ಬಂದು ತಲುಪಿದೆ. ಯುದ್ದ ಪ್ರಾರಂಭವಾಗಿ ತಿಂಗಳಾಗುವ ಹೊತ್ತಿಗೆ ಬಂದರೂ ಸಹ ತಾನಿನ್ನೂ ಏನನ್ನು ಕಳೆದುಕೊಂಡಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದೆ. ಆದರೆ ಅದರ ಹಿಂದೆ ಹೇಗಾದರೂ ಮಾಡಿ ಯುದ್ಧ ನಿಲ್ಲಿಸಿದರೆ ಸಾಕಪ್ಪ ಎನ್ನುವ ರೀತಿ ನಡೆದುಕೊಳ್ಳುತ್ತಲೂ ಇದೆ. ಇದು ಸೂಕ್ಷ್ಮವಾಗಿ ಗಮನಿಸಿದವರಿಗೆ ಅರ್ಥವಾಗುತ್ತದೆ. ಆದರೂ ಅದರ ರಕ್ತ ದಾಹ ಮಾತ್ರ ತೀರಿಲ್ಲ ಎನ್ನುವುದಂತೂ ಸತ್ಯ. ಹಿಮಕರಡಿಯನ್ನು ಬೇಟೆಯಾಡುವುದಕ್ಕೆಂದು ಎರಡೂ ಕಡೆಗೂ ಚೂಪಾಗಿರುವ ಆಯುಧವನ್ನು ತಯಾರು ಮಾಡಿ ಅದಕ್ಕೆ ಬೇರೆ ಪ್ರಾಣಿಯ ಮಾಂಸವನ್ನು ಹಚ್ಚಿ ಇಡಲಾಗುತ್ತದೆ. ರಕ್ತದ ವಾಸನೆಯ ಜಾಡು ಹಿಡಿದು ಬರುವ ಹಿಮಕರಡಿ ನಾಲಿಗೆಯನ್ನು ಸ್ಪರ್ಶಿಸಿ ನೆಕ್ಕುವುದಕ್ಕೆ ಪ್ರಾರಂಭಿಸುತ್ತದೆ. ಆದರೆ ಆಯುಧದ ಹರಿತತೆಯ ಅರಿವಿಲ್ಲದ ಕರಡಿ ರಕ್ತದ ರುಚಿಗೆ ಮನಸೋತು ಹೋಗುತ್ತದೆ. ತನ್ನ ನಾಲಿಗೆಯಿಂದ ಜಿನುಗುತ್ತಿರುವ ತನ್ನ ರಕ್ತವನ್ನೇ ಅದು ತಾನೇ ಸವಿಯಲಾರಂಭಿಸುತ್ತದೆ. ತನ್ನ ರಕ್ತದ ರುಚಿ ಅನುಭವಿಸುತ್ತಲೇ ತನ್ನನ್ನೇ ತಾನು ಮರೆತು ಸಾವಿನ ಮನೆ ಬಾಗಿಲಿಗೆ ಬಂದು ನಿಂತು ಬಿಡುತ್ತದೆ. ರಕ್ತದ ದಾಹ ತೀರುವ ಹೊತ್ತಿಗೆ ತನನ್ನೇ ತಾನು ಸಾಯಿಸಿಕೊಳ್ಳುತ್ತದೆ. ಪ್ರಸ್ತುತ ಅಮೇರಿಕಾದ ಸ್ಥಿತಿಯು ಹಾಗೇ ಆಗಿದೆ. ತನ್ನ ತೆವಲಿಗೆ ಮಾಡಿಕೊಂಡ ಯುದ್ಧದಿಂದಾಗಿ ಸ್ವತಃ ತಾನೇ ನಷ್ಟ ಅನುಭವಿಸುತ್ತಿದೆ. ಅದರ ಜೊತೆಯಲ್ಲಿ ತಪ್ಪು ಮಾಡದೇ ತನ್ನಷ್ಟಕ್ಕೆ ತಾನಿದ್ದ ರಾಷ್ಟ್ರಗಳು ಸಹ ಸಂಕಟ ಪಡುವಂತೆ ಮಾಡಿದೆ.
ಯುದ್ಧ ಎಂದರೆ ಏನು? ಎನ್ನುವ ಪ್ರಶ್ನೆಗೆ ಯಾರೋ ನೀಡಿದ ಒಂದು ಉತ್ತರ ನನಗೆ ನೆನಪಾಗುತ್ತಿದೆ. ಯುದ್ದವೆಂದರೆ ವ್ಯಾಪಾರ ಎನ್ನುವ ಅವರ ಉತ್ತರ ನಿಜಕ್ಕೂ ಈ ಸಂದರ್ಭದಲ್ಲಿ ಸತ್ಯ ಎನಿಸುತ್ತಿದೆ. ನನ್ನ ಬಳಿಯಲ್ಲಿರುವ ಶಸ್ತ್ರಾಸ್ತ್ರಗಳನ್ನು ನಾನು ಪ್ರಯೋಗ ಮಾಡಿ ತೋರಿಸಿದಾಗ ಮಾತ್ರ ಜಗತ್ತು ತನ್ನ ಕಡೆಗೆ ಖರಿದಿಗೆ ಬರುತ್ತದೆ ಎನ್ನುವ ಆಸೆಯಿಂದಲೂ ಈ ರೀತಿಯ ಯುದ್ಧಗಳು ನಡೆಯುತ್ತವೆ. ಬಲವಿದ್ದವನು ಬಾಳುತ್ತಾನೆ ಎನ್ನುವ ಮಾತು ರಾಜ್ಯಶಾಸ್ತ್ರದಲ್ಲಿ ಬರುವ “ಅಂತರಾಷ್ಟ್ರೀಯ ಸಂಬಧಗಳಲ್ಲಿ” ನಾನು ಓದಿದ್ದೇನೆ. ಆದರೆ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ದಿನ ನಿತ್ಯದ ವಸ್ತುಗಳಿಗಿಂತ ಮನುಕುಲನಾಶದ ಶಸ್ತ್ರಾಸ್ತ್ರಗಳ ಮಾರಾಟವೇ ಭರದಿಂದ ಸಾಗಿವೆ. ತಿನ್ನುವುದಕ್ಕೆ ಅನ್ನವಿಲ್ಲದ ರಾಷ್ಟ್ರವು ಸಹ ಅಣುಬಾಂಬ ತಯಾರಿಕೆಯ ಕನಸು ಕಾಣುತ್ತಿವೆ. ಮುಂದು ವರಿದ ರಾಷ್ಟ್ರಗಳು ಹಾಗೂ ಮುಂದುವರಿಯುತ್ತಿರುವ ರಾಷ್ಟ್ರಗಳು ತನ್ನ ದೇಶದ ಆದಾಯದಲ್ಲ್ಲಿ ಅತೀ ಹೆಚ್ಚಿನ ಪ್ರಮಾಣ ರಕ್ಷಣಾ ವ್ಯವಸ್ಥೆಗಾಗಿಯೇ ಖರ್ಚು ಮಾಡುತ್ತಲಿದೆ. ಹೀಗಿರುವಾಗ ಯಾವ ರಾಷ್ಟ್ರದಿಂದ ಏನು ನೀರೀಕ್ಷೆ ಮಾಡಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಎಲ್ಲೆಡೆ ಬರೀ ಶಕ್ತಿ ಸಿದ್ಧಾಂತವೇ ಮುಖ್ಯವಾಗುತ್ತಿರುವಾಗ ಅಭಿವೃದ್ಧಿಯ ಸಿದ್ಧಾಂತ ಎನ್ನುವುದು ಮಾತ್ರ ಮರೆಯಾಗಿ ಹೋಗಿದೆ. ಇನ್ನು ಈ ಬಾರಿಯ ಯುದ್ಧವನ್ನು ಅವಲೋಕನ ಮಾಡಿ ನೋಡಿದರೆ ಕರಾಳ ಭವಿಷ್ಯ ಕಣ್ಮುಂದೆ ಬಂದು ಕುಣಿಯುತ್ತದೆ. ಸಾವಿನ ನೆರಳು ನಮ್ಮ ಸುತ್ತಲು ಸುತ್ತುತ್ತದೆ. ಒಂದು ಕಾಲದಲ್ಲಿ ಯುದ್ಧವೆಂದರೆ ಶತ್ರುಗಳ ಮೇಲೆ ಸೈನಿಕರು ದಂಡೆತ್ತಿ ಹೋಗಿ ಕೊಲ್ಲುವುದಾಗಿತ್ತು. ಆದರೆ ಇಂದು ಎಲ್ಲಿಯೂ ಸೈನಿಕರು ಕಾಣುತ್ತಿಲ್ಲ. ಯಾವೊಬ್ಬ ಸೈನಿಕನು ಕೈಯಲ್ಲಿ ಆಯುಧ ಹಿಡಿದು ಮುನ್ನುಗ್ಗುತ್ತಿಲ್ಲ. ಹೆಗಲ ಮೇಲೆ ಲಾಂಚರ್‌ಗಳನ್ನು ಹೊತ್ತಂತವರು ಎದುರು ಸಿಗುತ್ತಿಲ್ಲ. ಆದರೂ ನಿರಂತರವಾಗಿ ಯುದ್ಧ ನಡೆಯುತ್ತಲೇ ಇದೆ. ಯಾವ ಕ್ಷಣದಲ್ಲಿ ಎಲ್ಲಿ ಏನು ಅನಾಹುತವಾಗುತ್ತದೆಯೋ ಎನ್ನುವುದು ಅರಿವಿಗೆ ಬರುವುದರೊಳಗಾಗಿ ಬಹಳಷ್ಟು ಸಾವು ನೋವುಗಳು ಆಗಿ ಹೋಗುತ್ತಿವೆ. ಯಾರನ್ನು ಯಾರು ಏತಕ್ಕಾಗಿ ಕೊಲ್ಲುತ್ತಿದ್ದಾರೆ ಎನ್ನುವುದೇ ಅರ್ಥವಾಗದ ರೀತಿಯಲ್ಲಿ ಯುದ್ಧ ನಡೆಯುತ್ತಿದೆ. ರಾಜಕೀಯ ತೆವಲಿಗಾಗಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಶಾಲೆಯಲ್ಲಿ ಕುಳಿತ ಮಕ್ಕಳು ಕಾರಣವಾಗುತ್ತಾರಾ? ಇಲ್ಲ ತಾನೇ. ಆದರೂ ಆ ಮಕ್ಕಳ ಮೇಳೆ ಮಿಸೈಲ್ ಉಡಾಯಿಸಿ ಕೊಲ್ಲಲಾಗುತ್ತಿದೆ. ನಾಗರಿಕರನ್ನು ಕಾಯಬೇಕಾದ ದೇಶಗಳೇ ನಾಗರೀಕರನ್ನು ಸಾವಿನ ಸುಳಿಗೆ ನೂಕುತ್ತಿರುವುದು ಧುರಂತವಲ್ಲದೇ ಮತ್ತೇನು? ಇದರಿಂದ ಯುದ್ಧ ನಿರತ ರಾಷ್ಟ್ರಗಳು ಏನು ಸಾಧಿಸಿದವೋ ನನಗಂತೂ ಅರ್ಥವಾಗುತ್ತಿಲ್ಲ. ಅದರಲ್ಲೂ ಮುಂದುವರಿದ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡು ಈ ಜಗತ್ತನ್ನು ಆಳಲು ಹೊರಟಿರುವ ರಕ್ತ ಪಿಪಾಸುಗಳನ್ನು ಕಂಡಾಗಂತೂ ಮುಂದೆ ಈ ಜಗತ್ತಿಗೆ ಏನು ಗಂಡಾಂತರ ಕಾದಿದೆಯೋ ತಿಳಿಯುತ್ತಿಲ್ಲ.
ಇರಾನ್ ಬಂದು ಸೌದಿ, ಖತಾರ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿರುವ ತೈಲ ದಾಸ್ತಾನುಗಳ ಮೇಲೆ ಹಾಗೂ ತೈಲ ಬಾವಿಗಳ ಮೇಲೆ ಬಾಂಬು ಹಾಕಿ ಉಡಾಯಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಇರಾನ್ ತೈಲ ಸಂರಕ್ಷಣಾ ಘಟಕಗಳ ಮೇಲೆ ದಾಳಿ ಮಾಡುತ್ತಿದೆ. ಈ ಎಲ್ಲ ರಾಷ್ಟ್ರಗಳು ಸಹ ಹಿಮಕರಡಿಯಂತೆ ತಾವೇ ಬಲಿಯಾಗುತ್ತಿದ್ದೇವೆ ಎನ್ನುವ ಅರಿವೆಯೇ ಇಲ್ಲದಂತೆ ವರ್ತಿಸುತ್ತಿರುವುದು ಶೋಚನೀಯವಾಗಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಒಂದು ರಾಷ್ಟ್ರ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಪೂರ್ವಜರು ಪಟ್ಟ ಕಷ್ಟವನ್ನು ಯುದ್ಧ ದಾಹದಿಂದ ನಾಶ ಮಾಡುವ ಈ ಮನಸ್ಸುಗಳು ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಬಾರಿಯ ಯುದ್ಧವಂತೂ ಮನುಕುಲಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿದ್ದಂತೂ ಸತ್ಯ. ಒಂದು ದೇಶದ ಭೂಮಿಯಿಂದ ಆಗಸಕ್ಕೆ ನೆಗೆಯುವ ಕ್ಷಿಪಣಿಯೊಂದು 4000 ಕಿಲೋ ಮಿಟರ್ ನಷ್ಟು ದೂರದ ಗುರಿಯನ್ನು ತಲುಪುತ್ತಿದೆ ಎಂದರೆ ಒಂದು ರಾಷ್ಟ್ರ ತನ್ನ ದೇಶದಲ್ಲಿಯೇ ಕುಳಿತು ಇನ್ನೊಂದು ರಾಷ್ಟ್ರವನ್ನು ನಾಶ ಮಾಡುತ್ತದೆ. ಇನ್ನು ಇತ್ತಕಡೆಯವರೇನು ಬಳೆ ತೊಟ್ಟುಕೊಂಡಿರುವುದಿಲ್ಲ. ಅವರು ಅದನ್ನೆ ಅನುಸರಿಸುತ್ತಾರೆ. ಕೊನೆಗೆ ಹಾಳುರಿಗೆ ಉಳಿದವನೆ ಗೌಡ ಎನ್ನುವಂತೆ ಅಳಿದುಳಿದ ಜನಗಳಿಂದ ಈ ಜಗತ್ತು ಮುನ್ನಡೆಯುತ್ತದೆ. ಇದೆಲ್ಲವೂ ಮುಂಬರುವ ದಿನಗಳ ಸೂಚನೆ ಎನ್ನುವಂತೆ ನಡೆಯುತ್ತಿದೆ. ಕಮೈನಿಯಂತ ವ್ಯಕ್ತಿಯನ್ನು ಹೊಡೆದುರುಳಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುತ್ತಾರೆ ಎಂದ ಮೇಲೆ ಯಾರನ್ನು ಬೇಕಾದರೂ ಸಹ ಹಾಳುವ ಮಾಡುವುದಕ್ಕೆ ಇವರು ಅದನ್ನು ಸಮರ್ಕವಾಗಿ ಬಳಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಧ್ಯಕ್ಕಂತು ಪೆಟ್ರೋಲ್ ಡಿಸೇಲ್ ಎಲ್‌ಪಿಜಿ ಕೊರತೆ ಜಗತ್ತಿಗೆ ಬಿಸಿ ಮುಟ್ಟಿಸಿದೆ. ಪುಣ್ಯಕ್ಕೆ ಭಾರತ ದೇಶವು ತಾನು ಅಳವಡಿಸಿಕೊಂಡ ವಿದೇಶಾಂಗ ನೀತಿಯ ಪ್ರಭಾವದಿಂದ ಒಂದಷ್ಟು ನಿಟ್ಟುಸಿರು ಬಿಡುತ್ತಿದೆ. ಹಾಗೆಂದು ಮುಂದೆಯೂ ಹಾಗೆ ಇರುತದೆ ಎಂದು ಹೇಳುವುದಕ್ಕೆ ಆಗದಂತಹ ಸ್ಥಿತಿ ಎದುರಾಗಿದೆ. ಪಕ್ಕದ ಪಾಕಿಸ್ತಾನ ಅಲ್ಲೋಲ ಕಲ್ಲೋಲವಾಗಿ ಹೋಗಿದೆ. ಶ್ರೀಲಂಕಾ ಕರುಣಾಜನಜಕ ಸ್ಥಿತಿಗೆ ತಲುಪಿದೆ. ಬೇರೆ ದೇಶಗಳಂತೂ ಮುಂದಿನ ದಿನಗಳ ಲೆಕ್ಕಾಚಾರದಲ್ಲಿ ಇಂದಿನ ದಿನಗಳನ್ನು ಹಾಳು ಮಾಡಿಕೊಳ್ಳುತ್ತಿವೆ. ಹೀಗೆ ಹೋದರೆ ಹೇಗೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬದುಕು ಸಾಗಿಸುತ್ತಿವೆ. ಜಗತ್ತಿನ ಬೆಳವಣಿಗೆಗೆ ಬೇಕಾಗಿದ್ದ ತಂತ್ರಜ್ಞಾನ ಜಗತ್ತು ನಾಶವಾಗುವುದಕ್ಕೆ ಕಾರಣವಾಗುತ್ತಿರುವುದಂತೂ ಧುರಂತವೇ ಸರಿ. ಅದರಲ್ಲೂ ಕೃತಕ ಬುದ್ಧಿಮತ್ತೆಯ ದುರುಪಯೋಗವಾಗುತ್ತಿರುವ ಬಗ್ಗೆಯಂತೂ ಜಗತ್ತು ಗಮನ ಹರಿಸಲೇ ಬೇಕು. ಕುಲಕ್ಕೆ ಮೃತ್ಯು ಕೊಡಲಿಯ ಕಾವು ಎನ್ನುವಂತೆ ಮನುಷ್ಯ ಕೃತಕ ಬುದ್ದಿಮತ್ತೆಯನ್ನು ಬಳಸಿಕೊಂಡು ರೋಬೋಗಳನ್ನು ತಯಾರಿಸುತ್ತಿದ್ದಾನೆ. ತಾಸಿನ ಕೆಲಸವನ್ನು ನಿಮಿಷಕ್ಕೆ ಮಾಡಿ ಮುಗಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಹೊರಟಿದ್ದಾನೆ. ಮಿಶಿನ್‌ಗಳು ಸಹ ಮನುಷ್ಯರಂತೆ ಬದುಕಲಿ ಎಂದು ಆಶಿಸುತ್ತಿದ್ದಾನೆ. ಇದೆಲ್ಲವನ್ನು ನೋಡಿದಾಗ ನನಗೆ ರಜನಿಕಾಂತ ಅಭಿನಯದ ರೋಬೋ ಚಿತ್ರ ನೆನಪಾಗುತ್ತಿದೆ. ಅದರಲ್ಲಿ ವಿಜ್ಞಾನಿ ತಯಾರಿಸಿದ ರೋಬೋ ವಿಜ್ಞಾನಿಯನ್ನೇ ಸಾಯಿಸಲು ಹೋರಡುವುದು. ರೋಬೋಗೆ ಭಾವನೆಗಳು ಉಂಟಾಗುವಂತಹ ಪ್ರೋಗ್ರಾಂ ಅಳವಡಿಸಿದಾಗ ಅವನ ಪ್ರೇಯಸಿಯನ್ನೇ ಪ್ರೀತಿಸುವುದನ್ನು ನೋಡಿದಾಗ ನಾವು ಕಂಡುಕೊಂಡ ವಿಜ್ಞಾನ ಅಭಿವೃದ್ಧಿ ಮುಂದೆ ನಮ್ಮನ್ನು ನಾಶ ಮಾಡುವ ಸಮಯ ಬಹಳ ದೂರವಿಲ್ಲ ಎನಿಸುತ್ತದೆ. ಸಧ್ಯಕ್ಕಂತೂ ಏನು ಉತ್ತರಿಸಲಾಗದ ಸ್ಥಿತಿಯಲ್ಲಿದ್ದೇವೆ. ಇದನ್ನು ಓದಿದ ಮೇಲೆ ನಿಮಗೂ ಹಲವಾರು ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಉತ್ತರ ನೀಡುವ ಸಾಮರ್ಥ್ಯ ನನ್ನಲ್ಲಂತೂ ಇಲ್ಲ. ಆದರೆ ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲದಕ್ಕೂ ಕಾಲ ಉತ್ತರಿಸುತ್ತದೆ. ಸುಮ್ಮನೆ ನೋಡುವುದೊಂದೆ ನಮ್ಮ ಕೆಲಸ. ಮಿಕ್ಕಿದ್ದೆಲ್ಲ ಕಾಲನ ಕೈಯಲ್ಲಿನ ಸೂತ್ರದಲ್ಲಿ ನಡೆಯುವ ಆಟದಂತೆ ಅಷ್ಟೆ.
ಮಂಜುನಾಥ ಮ. ಜುನಗೊಂಡ
ವಿಜಯಪುರ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 