ಅಣಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಸಂಭ್ರಮ
The Grand Celebration of the Ani Mallikarjuna Jatra Mahotsava
ಅಣಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಸಂಭ್ರಮ
ಬೀಳಗಿ 12: ತಾಲೂಕಿನ ಕುಂದರಗಿ ಗ್ರಾಮದ ಶ್ರಾವಣ ಮಾಸದ ಅಂಗವಾಗಿ ಗುಡ್ಡದ ಮೇಲಿರುವ ಅಣಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ಜರುಗಿತು. ಜಾತ್ರೆಯ ನಿಮಿತ್ತ ಮುಂಜಾನೆ ದೇವಾಲಯದಲ್ಲಿ ಅಣಿ ಮಲ್ಲಿಕಾರ್ಜುನ, ಅಯ್ಯಪ್ಪ ಸ್ವಾಮಿ, ಷಣ್ಮುಖ ಸ್ವಾಮಿ ಹಾಗೂ ಗಣಪತಿ ಮೂರ್ತಿಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜೆ ಹಾಗೂ ಅಲಂಕಾರ ಸೇವೆ ನೆರವೇರಿಸಲಾಯಿತು. ಸಿದ್ದಯ್ಯ ಚರಂತಿಮಠ, ಸುರೇಶ ಮುದಕನ್ನವರ ಹಾಗೂ ಚಂದು ಅಂಬಿಗೇರ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರಾವಣ ಮಾಸದ ಪ್ರಯುಕ್ತ ಪ್ರತಿನಿತ್ಯವೂ ದೇವರಿಗೆ ರುದ್ರಾಭಿಷೇಕ ನಡೆಯುತ್ತಿದೆ. ಚರಂತಿಮಠದ ಪೀಠಾಧಿಪತಿ ವೀರಸಂಗಮೇಶ್ವರ ಶಿವಾಚಾರ್ಯರು ಮಾತನಾಡಿ, ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಅಣಿ ಮಲ್ಲಿಕಾರ್ಜುನ ಸ್ವಾಮಿ ಭಕ್ತರ ಪಾಲಿನ ಜಾಗೃತ ದೈವವಾಗಿದೆ. ಗುಡ್ಡ ಏರಿ ದೇವರ ದರ್ಶನ ಪಡೆಯುವ ಭಕ್ತರಿಗೆ ಮನಸ್ಸಿನ ಅಹಂಕಾರ ದೂರವಾಗಿ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂದರು. ಹನಮಂತ ಮಡಿವಾಳರ ಮಾತನಾಡಿ, ದೇವರು ನೀಡಿರುವ ಸಂಪತ್ತು ಹಾಗೂ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ದಾನ-ಧರ್ಮದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದ ಒಳಿತಿಗಾಗಿ ಮಾಡುವ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಜಾತ್ರೆಯ ಹಿಂದಿನ ದಿನ ರಾತ್ರಿ ಅಲ್ಲಮಪ್ರಭುದೇವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಗ್ರಾಮದ ಮಹಿಳೆಯರು, ಹಿರಿಯರು ಹಾಗೂ ಮಕ್ಕಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಣಿ ಮಲ್ಲಿಕಾರ್ಜುನ ಸೇವಾ ಸಮಿತಿ ಹಾಗೂ ಗ್ರಾಮದ ಮುಖಂಡರು ಪೂಜ್ಯರಾದ ವೀರಸಂಗಮೇಶ್ವರ ಶಿವಾಚಾರ್ಯರು, ಸಿದ್ದಯ್ಯ ಚರಂತಿಮಠ ಹಾಗೂ ವಿವಿಧ ಸಮಾಜದ ಮುಖಂಡರು ಮತ್ತು ತಿಪ್ಪಣ್ಣ ಮಾಲಕರಿ ದಂಪತಿಯನ್ನು ಸನ್ಮಾನಿಸಿದರು. ಅನ್ನಪ್ರಸಾದದ ವ್ಯವಸ್ಥೆಯನ್ನು ತಿಪ್ಪಣ್ಣ ಮಾಲಕರಿ ಮಾಡಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಲಕ್ಷ್ಮಣ ಪಾತೋಟ, ಬಸಲಿಂಗಯ್ಯ ಓಣಿ, ಮುತ್ತಯ್ಯ ಜಡೀಮಠ, ರಾಜಪ್ಪ ಗೌಡ, ಸನಗೌಡ್ರ, ವಿಠ್ಠಲ ಕಟ್ಟಿಮನಿ, ಗೋವಿಂದಪ್ಪ ಉತ್ತೂರ, ಸಂಗಮೇಶ ಚರಂತಿಮಠ, ಗೀರೀಶ ಜಡೆಯಮ್ಮನವರ, ಬಸವರಾಜ ಕುಂಬಾಳಾವತಿ, ಹಣಮಂತ ಹಳ್ಳಿ, ಯಲ್ಲಪ್ಪ ಡೊಳ್ಳಿನ, ವೈ.ಎಲ್. ಅತಾಲಟಿ, ಬಸವರಾಜ ಅಂಬಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 