ಹಾನಗಲ್ ಗುರುಕುಮಾರ ಶಿವಯೋಗಿಗಳ ಆಶಯದಂತೆ ಘಟ ಬೆಳಗುತಿದೆ :ಮಹಾಂತೇಶ ಕವಟಗಿಮಠ
The Ghat is dawning as per the wishes of Hangal Gurukumar Shivayogi: Mahantesh Kavatagi Math
ಮಾಂಜರಿ 14 : ಚಿಕ್ಕೋಡಿ ತಾಲೂಕಿನ ಚಿಂಚಣಿ ಸಿದ್ದ ಸಂಸ್ಥಾನ ಮಠಕ್ಕೆ ತನ್ನದೇಯಾದ ಪರಂಪರೆ ಇದೆ ವೀರಶೈವ ಲಿಂಗಾಯತ ಸಮಾಜದ ಧೀಮಂತ ಪೀಠವಾಗಿದ್ದೂ ಹಾನಗಲ್ ಗುರು ಕುಮಾರ ಶಿವಯೋಗಿಗಳ ಆಶಯದಂತೆ ನಡೆಯುತಿದೆ ಹಿಂದಿನ ಪೂಜ್ಯರನ್ನು ಸ್ಮರಿಸಿ ಪ್ರಸ್ತುತ ಪೂಜ್ಯರ ಘನ ಕಾಯಕ ಶ್ಲಾಘಿಸಿ ಮಠದಿಂದ ಘಟ ಬೆಳಗಬಾರದು ಘಟದಿಂದ ಮಠ ಬೆಳಗಬೇಕು ಎನ್ನುವ ಪೂಜ್ಯ ಗುರು ಕುಮಾರ ಶಿವಯೋಗಿಗಳ ಮಾತಿನಂತೆ ಚಿಂಚಣಿ ಮಠ ಇಂದು ಘಟದಿಂದ ಬೆಳಗುತಿದೆ ಹಿಂದೆ ನಮ್ಮ ತಂದೆಯವರಾದ ಲಿಂ ಮಲ್ಲಯ್ಯ ಸ್ವಾಮಿ ಕವಟಗಿಮಠರು ಈ ಮಠದ ಸೇವೆ ಮಾಡಿದ್ದಾರೆ ಅವರ ಹಾದಿಯಲ್ಲಿ ನಾವು ನಡೆದಿದ್ದೇವೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ್ ಕೌಟಿಗಿಮಠ ಹೇಳಿದರು ಅವರು ಚಿಕ್ಕೋಡಿ ತಾಲೂಕಿನ ಚಿಂಚಣಿ ಸಿದ್ದಸಂಸ್ಥಾನ ಮಠದ ದಾಸೋಹ ಜಾತ್ರೆಯ ಬಸವ ಪುರಾಣ ಶನಿವಾರದಂದು ರಾತ್ರಿ ನಡೆದ 5 ನೇ ದಿನದ ಭವ್ಯ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ವಿಧಾನಪರಿಷತ್ ಸದಸ್ಯರೂ ಕೆ ಎಲ್ ಇ ನಿರ್ದೇಶಕರಾದ ಮಹಾಂತೇಶಣ್ಣಾ ಕವಟಗಿಮಠ ಮಾತನಾಡುತ್ತಿದ್ದರು
ಸದೃಢ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರವಾಗಿದ್ದೂ ಚಿಂಚಣಿ ಸಿದ್ದ ಸಂಸ್ಥಾನ ಮಠ ಗಡಿಭಾಗದ ಶ್ರದ್ದಾಕೇಂದ್ರ ಕನ್ನಡ ಕಾಯುವ ಜ್ಞಾನಮಂದಿರ ಎಂದರು ದಿವ್ಯ ಸಾನಿಧ್ಯವನ್ನು ಶಿರಹಟ್ಟಿ ಫಕಿರೇಶ್ವರ ಸಂಸ್ಥಾನ ಮಠದ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು,ಸಮ್ಮುಖವನ್ನು ಖಡಕಲಾಟ ಅಪ್ಪನವರ ಕುಮಾರೇಶ್ವರ ವಿರಕ್ತಮಠದ ಮನಿಪ್ರಸ್ವ ಶಿವಬಸವ ಮಹಾಸ್ವಾಮಿಗಳು, ಘೋಡಗೇರಿ ವಿರಕ್ತಮಠದ ಮನಿಪ್ರಸ್ವ ಕಾಶಿನಾಥ ಮಹಾಸ್ವಾಮಿಗಳು,ಖೆಳಗಿ ವಿರಕ್ತಮಠದ ಮನಿಪ್ರಸ್ವ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಮಂಠಾಳ ವಿರಕ್ತಮಠದ ಮನಿಪ್ರಸ್ವ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಹಿತ ವಿವಿಧ ಪೂಜ್ಯರು ವಹಿಸಿದ್ದರು ಅಜಯ ಕವಟಗಿಮಠ ಸಹಿತ ವಿವಿಧ ಗಣ್ಯರು ವೇದಿಕೆಯಲ್ಲಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 