ಇಂಗ್ಲೀಷ್ ಭಾಷಾ ಶಿಕ್ಷಕ ಮರುನೇಮಕಕ್ಕೆ ಆಗ್ರಹಿಸಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಲೋಕದರ್ಶನ ವರದಿ

ಕುಮಟಾ 22: ತಾಲೂಕಿನ ನ ಸಂತೇಗುಳಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಗರಡಿಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಭಾಷಾ ಶಿಕ್ಷಕರನ್ನು ಮರುನಿಯುಕ್ತಿಗೊಳಿಸಬೇಕು ಹಾಗೂ ಗುಣಮಟ್ಟದ ಶಿಕ್ಷಣವನ್ನು ವಿದ್ಯಾಥರ್ಿಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಶಾಲಾ ಎಸ್ಡಿಎಂಸಿ ಸದಸ್ಯರು, ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗರಡಿಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಪ್ರತ್ಯೇಕ ಶಿಕ್ಷಕರು ಪಾಠ ಹೇಳುತ್ತಿದ್ದರು. ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಈ ಶಾಲೆಯ ಇಂಗ್ಲೀಷ್ ಭಾಷಾ ಶಿಕ್ಷಕರನ್ನು ಹೆಚ್ಚುವರಿ ಎಂದು ಪ್ರಕಟಿಸಿ ವಗರ್ಾವಣೆಗೊಳಿಸಲಾಗಿದೆ. ಆದರೆ ಅಂದು ನಡೆದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ನಡೆದು ಗೊಂದಲ ಸೃಷ್ಟಿಯಾಗಿತ್ತು. ಪರಿಸ್ಥಿತಿಯ ಗಾಂಭಿರ್ಯತೆಯನ್ನು ಅರಿತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ತಕ್ಷಣ ಈ ಪ್ರಕ್ರಿಯೆಗೆ ತಡೆ ನೀಡಿ ಸೂಕ್ತ ಆದೇಶ ನೀಡಿದ್ದರು. ಹೀಗಾಗಿ ಹೆಚ್ಚುವರಿ ಶಿಕ್ಷಕರ ವಗರ್ಾವಣೆ ಸ್ಥಗಿತಗೊಂಡಿತ್ತು. ಆದರೆ ಆಗಲೇ ಕೆಲವು ಶಿಕ್ಷಕರು ಬಿಡುಗಡೆಗೊಂಡು ವಗರ್ಾವಣೆಗೊಂಡ ಶಾಲೆಗೆ ನಿಯುಕ್ತಿಗೊಂಡಿದ್ದಾರೆ. ಮುಖ್ಯಮಂತ್ರಿಗಳ ಆದೇಶದಂತೆ ಶಿಕ್ಷಣ ಆಯುಕ್ತರು ಆದೇಶ ನೀಡಿ ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆಯಲ್ಲಿ ವಗರ್ಾವಣೆಗೊಂಡ ಶಿಕ್ಷಕರು ಮರು ಮೂಲ ಶಾಲೆಗೆ ಬಂದು ಹಾಜರಾಗಬೇಕೆಂದು ಆದೇಶ ನೀಡಿದ್ದಾರೆ. ಈ ಆದೇಶ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಶಿಕ್ಷಕರ ಮರುನಿಯುಕ್ತಿ ಪ್ರಕ್ರಿಯೆ ಆಗಿಲ್ಲ ಎಂದು ಜನರ ಆಕ್ಷೇಪವಾಗಿದೆ. ಹೀಗಾಗಿ ಗರಡಿಬೈಲ್ ಶಾಲೆಯ ಇಂಗ್ಲೀಷ್ ಶಿಕ್ಷಕಿ ಮರುನಿಯುಕ್ತಿಗೊಳ್ಳದಿರುವದು ಪಾಲಕರನ್ನು ಕೆರಳಿಸಿದೆ. ಅಲ್ಲದೇ ಕಳೆದ 2 ತಿಂಗಳಿನಿಂದ ಇಂಗ್ಲೀಷ್ ಶಿಕ್ಷಕಿಯನ್ನು ಮರು ನಿಯುಕ್ತಿಗೊಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಶಾಲೆಗೆ ಬೀಗ ಹಾಕಿ ಪ್ರತಿಭಟಿಸುವದು ಅನಿವಾರ್ಯವಾಯಿತೆಂದು ಪಾಲಕರು ಹೇಳಿದರೆ, ವಿದ್ಯಾಥರ್ಿಗಳು ಕೂಡ ನಮಗೆ ಪಾಠ ಕಲಿಸಲು ಇಂಗ್ಲಿಷ್ ಶಿಕ್ಷಕರು ಬೇಕು ಎಂದು ಪ್ರತಭಟನೆ ಸಂದರ್ಭದಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸುರೇಶ ನಾಯ್ಕ ಅವರು ಗುಡ್ಡ ಬೆಟ್ಟಗಳಿಂದ ಕೂಡಿದ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿರುವ ಗರಡಿಬೈಲ್ ಶಾಲೆಗೆ ಕುಂಬ್ರಿ ಮರಾಠಿ, ಹಾಲಕ್ಕಿ ಒಕ್ಕಲು ಹಾಗೂ ಮುಸ್ಲಿಂ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಮಲೆನಾಡು ಪ್ಯಾಕೇಜನ್ನು ಅನ್ವಯಿಸಿ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಈಗಾಗಲೇ ಶಿಕ್ಷಣ ಇಲಾಖೆಗೆ ಮನವಿ ಮೂಲಕ ಕೋರಲಾಗಿದೆ. ಆದರೆ ನಮ್ಮ ಮನವಿಗೆ ಸರಿಯಾದ ಸ್ಪಂದನೆ ದೊರೆತಿಲ್ಲ. ಈ ಶಾಲೆಯಲ್ಲಿ 77 ಮಂದಿ ವಿದ್ಯಾಥರ್ಿಗಳು ಕಲಿಯುತ್ತಿದ್ದಾರೆ. ಪದೋನ್ನತ ಮುಖ್ಯಾಧ್ಯಾಪಕರ ಸಹಿತ 5 ಶಿಕ್ಷಕರಿದ್ದರು. ಬಸ್ತಿಕೇರಿಯಿಂದ ಉಳ್ಳೂರಮಠದ ಮಜಿರೆಯ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತೀಚಿನ ಹೆಚ್ಚುವರಿ ಶಿಕ್ಷಕರ ವಗರ್ಾವಣೆಯಿಂದ ನಮ್ಮ ಶಾಲೆಯ ಇಂಗ್ಲೀಷ್ ಕಲಿಸುತ್ತಿದ್ದ ಶಿಕ್ಷಕಿಯನ್ನು ಬೇರೆಡೆ ವಗರ್ಾಯಿಸಲಾಗಿದೆ. ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಿಲ್ಲದಿರುವದರಿಂದ ಗುಣಮಟ್ಟದ ಶಿಕ್ಷಣಕ್ಕೆ ಕೊರತೆಯುಂಟಾಗಿದೆ ಎಂದು ತಿಳಿಸಿದರು.

ಸಂತೇಗುಳಿ ಗ್ರಾಪಂ ಸದಸ್ಯ ವಿನಾಯಕ ಭಟ್ ಮಾತನಾಡಿ, ಗರಡಿಬೈಲ್ ಶಾಲೆಗೆ ಪುನಃ ಇಂಗ್ಲೀಷ್ ಶಿಕ್ಷಕರನ್ನು ನಿಯೋಜಿಸಬೇಕು. ಹೆಚ್ಚುವರಿ ಶಿಕ್ಷಕರನ್ನು ಪರಿಗಣಿಸಿ ವಗರ್ಾವಣೆ ಮಾಡುವಾಗ ಎಲ್ಲಾ ಶಾಲೆಗಳಿಗೂ ಒಂದೇ ಮಾನದಂಡ ಹಾಗೂ ಸಮಾನ ನ್ಯಾಯವನ್ನು ಒದಗಿಸಬೇಕು.  ಮುಖ್ಯವಾಗಿ ಶಾಲೆಯ ಶಿಕ್ಷಕರಿಗೆ ಬೋಧನಾ ದಿನಗಳಲ್ಲಿ ಯಾವುದೇ ಅನ್ಯ ಕಾರ್ಯಭಾರ ಹೇರಬಾರದು. ಈಗಾಗಲೇ ಶಿಕ್ಷಕರ ಹೆಚ್ಚುವರಿ ವಗರ್ಾವಣೆಯಲ್ಲಿ ವಗರ್ಾವಣೆಗೊಂಡ ಶಿಕ್ಷಕರು ಮೂಲ ಶಾಲೆಗೆ ಮರಳುವಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆಯುಕ್ತರು ಆದೇಶ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಭಾರೆ ಡಿಡಿಪಿಐ ಇರುವುದರಿಂದ ಸಮಸ್ಯೆ ಬಗೆ ಹರುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಆಯುಕ್ತರ ಆದೇಶ ಉತ್ತರ ಕನ್ನಡ ಜಿಲ್ಲೆಯಲ್ಲೂ ಜಾರಿಯಾಗಬೇಕಾಗಿದೆ ಎಂದು ಉತ್ತಾಯಿಸಿದರು. 

ಸ್ಥಳಕ್ಕೆ ಭೇಟಿನೀಡಿದ ಜಿಪಂ ಸದಸ್ಯ ಗಜಾನನ ಪೈ, ಬಿಇಓ ಎ ಜಿ ಮುಲ್ಲಾ, ಬಿಆರ್ಸಿ ಎಂ ಜಿ ನಾಯ್ಕ ಆಗಮಿಸಿ ಪ್ರತಿಭಟನಾಕಾರರನ್ನು ಸಮಾದಾನ ಪಡಿಸಿ, ಜನರ ಜೊತೆ ಚಚರ್ಿಸಿದರು. ಸ್ಪಷ್ಟ ಆಶ್ವಾಸನೆ ನೀಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಹೀಗಾಗಿ ಜನರ ಆಕ್ರೋಶಕ್ಕೆ ತಣ್ಣಗಾದ ಶಿಕ್ಷಣಾಧಿಕಾರಿ ಅವರು 2-3 ದಿನದಲ್ಲಿ ಇಂಗ್ಲೀಷ್ ಶಿಕ್ಷಕರನ್ನು ಮರುನಿಯೋಜಿಸುವದಾಗಿ ಭರವಸೆ ನೀಡಿದರು. ನಂತರ ಸಾರ್ವಜನಿಕರು ಹಾಗೂ ಪಾಲಕರು ಪ್ರತಿಭಟನೆ ಹಿಂಪಡೆದರು. 

ಶಾಲಾ ಎಸ್ಡಿಎಂಸಿ ಸದಸ್ಯರು, ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಜಡಿದಿರುವುದರಿಂದ ಶಿಕ್ಷಕರು ಮಕ್ಕಳನ್ನು ಶಾಲೆಯ ಆವರಣದಲ್ಲೇ ಬೆಳಿಗ್ಗೆಯ ಪ್ರಾರ್ಥನೆಯನ್ನು ಮಾಡುವ ಪರಿಸ್ಥಿತ ಉಂಟಾಯಿತು. ಅಲ್ಲದೇ ಸುಮಾರು 2 ತಾಸು ಶಿಕ್ಷಕರು ಹಾಗೂ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಯಿತು. ಪ್ರತಿಭಟನೆ ಹಿಂಪಡೆದ ಬಳಿಕ ಶಾಲಾ ತರಗತಿ ಪುನಃ ಆರಂಭಗೊಂಡಿತು.

ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ರೇಣುಕಾ ನಾಯ್ಕ, ಸದಸ್ಯರಾದ ಸೀತೆ ಗೌಡ, ಲಕ್ಷ್ಮೀ ಗೌಡ, ಆಸ್ಮಾ ಸಾಬ್, ನಾಜೀಮಾ ಸಾಬ್, ಮಂಜುನಾಥ ಗೌಡ, ಗಣಪತಿ ನಾಯ್ಕ, ಗೌರಿ ಮರಾಠಿ, ಗಣಪತಿ ಭಂಡಾರಿ, ಈಶ್ವರ ಗೌಡ, ಶಂಕರ ಗೌಡ, ಹಳೇ ವಿದ್ಯಾಥರ್ಿ ಸಂಘದ ಅಧ್ಯಕ್ಷ ದೀಪಕ ನಾಯ್ಕ,  ಪಾಲಕರಾದ ಗೀತಾ ಗೌಡ, ನಾರಾಯಣ ಗೌಡ, ದೀಪಕ ನಾಯ್ಕ, ಶಾರದಾ ನಾಯ್ಕ, ಜಯಲಕ್ಷಿ ್ಮ ಗೌಡ, ವೀಣಾ ನಾಯ್ಕ ಗಣಪತಿ ಗೌಡ ಹಾಗೂ ಊರನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.