ಬೆಂಗಳೂರು ಗ್ರಾಮಾಂತರದಲ್ಲಿ ಘಟನಾ ಕಮಾಂಡರ್ ಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು, ಏಪ್ರಿಲ್ 18, ಕೊರೋನಾ  ವೈರಾಣು ಸೋಂಕು ತಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್-19 ಕ್ರಮಗಳನ್ನು  ಅನುಷ್ಠಾನಗೊಳಿಸಲು ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಮಂಜುನಾಥ್.ಎಸ್ ಅವರನ್ನು ಉಪ  ವಿಭಾಗ ಘಟನಾ ಕಮಾಂಡರ್ (Sub Divisional Incident Commander)  ಆಗಿ ಹಾಗೂ ಜಿಲ್ಲೆಯ  ನಾಲ್ಕು ತಾಲ್ಲೂಕುಗಳ ತಹಶೀಲ್ದಾರ್ ಗಳನ್ನು ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ತಾಲ್ಲೂಕು  ಘಟನಾ ಕಮಾಂಡರ್ (Taluk Incident Commander) ಗಳಾಗಿ‌ ನೇಮಿಸಿ ಜಿಲ್ಲಾ ದಂಡಾಧಿಕಾರಿ  ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಆದೇಶಿಸಿದ್ದಾರೆ.
ಬೆಂಗಳೂರು  ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ, ಮಧುರೆ ಹೋಬಳಿಯ ಚನ್ನಾದೇವಿ‌  ಅಗ್ರಹಾರದ ಗಾರುಡಿಗರಪಾಳ್ಯ (ಕೋಡಿಪಾಳ್ಯ) ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ  ಕೋವಿಡ್-19/ಕೊರೋನಾ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಈ ಗ್ರಾಮದಲ್ಲಿನ  ಎಲ್ಲಾ ಕುಟುಂಬಗಳನ್ನು ಹೋಂ‌ ಕ್ವಾರಂಟೀನ್ ನಲ್ಲಿರಿಸಿ, ಆ ಕುಟುಂಬಗಳಿಗೆ ಆಹಾರ,  ನೀರು, ಔಷಧಿ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸಾಮಾಜಿಕ ಅಂತರವನ್ನು  ಕಾಯ್ದುಕೊಳ್ಳಲು ಹಾಗೂ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು  ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್ ಶಿವರಾಜ್.ಪಿ.ಎಸ್. ಅವರನ್ನು 2005 ರ ವಿಪತ್ತು  ನಿರ್ವಹಣಾ ಕಾಯ್ದೆಯಡಿ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಿ ಬೆಂಗಳೂರು ಗ್ರಾಮಾಂತರ   ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶಿಸಿದ್ದಾರೆ.