ಸಂವಿಧಾನ ಧರ್ಮವನ್ನು ಬೋಧಿಸುತ್ತದೆ. ಅದರ ನಿರಂತರ ಓದು ನಮ್ಮ ಕರ್ತವ್ಯಗಳನ್ನು ಜಾಗೃತಗೊಳಿಸುತ್ತದೆ : ಡಾ. ಚೆನ್ನಸಿದ್ದ ಶ್ರೀಗಳು
The Constitution teaches religion. Its constant reading awakens our duties: Dr. Chennasiddha
ಲೋಕದರ್ಶನ ವರದಿ
ಮಾಂಜರಿ 28 : ಭಾರತವನ್ನು ವಿಶ್ವದ ಮುಂಚೂಣಿ ಗಣರಾಜ್ಯವನ್ನಾಗಿ ಮಾಡಲು ದೇಶದ ನಾಗರಿಕರು ಸಂವಿಧಾನದಲಿ ್ಲಅಡಕವಾಗಿರುವ ಪವಿತ್ರ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು. ಸಂತೋಷ, ಶಾಂತಿ ಮತ್ತು ಧರ್ಮದ ಸಂದೇಶವನ್ನು ಜಗತ್ತಿಗೆ ಸಾರಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಂಘ ಚಾಲಕ ಮೋಹನ್ಭಾಗವತ್ಕರೆ ನೀಡಿದ್ದಾರೆ. ಅವರು ಶನಿವಾರ ರಂದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಶೈಲಪೀಠದ ಜಗದ್ಗುರುಗಳಾದ ಡಾ. ಚೆನ್ನಸಿದ್ದ ರಾಮಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ನಡೆದ ಪಾಠಶಾಲೆಯ ನೂತನ ಕಟ್ಟಡದ ಉದ್ಘಾಟನೆ ಗೋತುಲಾಭಾರ ಉದ್ಘಾಟನಾ ಸಮಾರಂಭ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸಂವಾದ ಮತ್ತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರ್‌ಎಸ್‌ಎಸ್ ಸಂಘ ಚಾಲಕೊ ಮೋಹನಾ ಭಗವತಾ ಮಾತನಾಡುತ್ತಿದ್ದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಅಖಿಲಭಾರತ ಶಿವಾಚಾರ್ಯ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಡಾಕ್ಟರ್ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಗಳು ನುಲ್ಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಜರಿದ್ದರು.
ಸಂವಿಧಾನ ಧರ್ಮವನ್ನು ಬೋಧಿಸುತ್ತದೆ. ಅದರ ನಿರಂತರ ಓದುನಮ್ಮ ಕರ್ತವ್ಯಗಳನ್ನು ಜಾಗೃತಗೊಳಿಸುತ್ತದೆ. ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆ ಓದಲು, ರಾಜ್ಯನೀತಿ, ಮೂಲಭೂತ ಕರ್ತವ್ಯ ಮತ್ತು ಹಕ್ಕುಗಳನ್ನು ತಿಳಿಯಲು ಪ್ರೇರೇಪಿಸಬೇಕು’ .’ ಸಂವಿಧಾನ ರಚನಾಕಾರರು ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಅಂಬೇಡ್ಕರ್ ಅವರೂ ಧರ್ಮದ ಅಗತ್ಯದ ಬಗ್ಗೆ ಹಲವು ಬಾರಿ ಹೇಳಿದ್ದರು. ದೇಶದಲಿ ್ಲಕಾನೂನುಗಳಿವೆ. ಆದರೆ, ಎಲ್ಲವೂ ಧರ್ಮದ ಆಧಾರದ ಮೇಲೆ ನಡೆಯುತ್ತದೆ’ ಭಾರತ ಹಿಂದೂ ರಾಷ್ಟ್ರವಾಗಿದೆ. ಅಲ್ಲದೆ ಭಾರತೀಯ ಸಂಸ್ಕೃತಿಯನ್ನು ಎಲ್ಲಿಯವರೆಗೆ ಪ್ರಶಂಸಿಸಲಾಗುತ್ತದೆಯೋ ಅಲ್ಲಿಯವರೆಗೆ ಅದು ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ’
ಸೂರ್ಯ ಪೂರ್ವದಿಕ್ಕಿನಲ್ಲಿ ಉದಯಿಸುತ್ತಾನೆ; ಇದು ಎಂದಿನಿಂದ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಹಾಗೆಂದು, ಇದಕ್ಕೂ ಸಾಂವಿಧಾನಿಕ ಅನುಮೋದನೆಯ ಅಗತ್ಯವಿದೆಯೇ? ಹಿಂದೂಸ್ತಾನವು ಹಿಂದೂದೇಶ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವವರು, ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರು ಇರುವ ತನಕ ಇದು ಹಿಂದೂದೇಶ. ಅಷ್ಟೇಏಕೆ, ಹಿಂದೂಸ್ತಾನದಲ್ಲಿ ತಮ್ಮ ಪೂರ್ವಜರ ವೈಭವ, ಸಂಸ್ಕೃತಿಯನ್ನು ನಂಬುವ ಮತ್ತು ಪಾಲಿಸುವಂತಹ ಒಬ್ಬ ವ್ಯಕ್ತಿಜೀವಂತವಾಗಿದ್ದರೂ ಇದು ಹಿಂದೂರಾಷ್ಟ್ರವೇ ಆಗಿರುತ್ತದೆ. ಇದೇ ಸಂಘದ ಸಿದ್ಧಾಂತವೂ ಆಗಿದೆ’ ಎಂಬುದಾಗಿ ಅವರು ಹೇಳಿದರು.
ವೇಳೆ ಶ್ರೀಶೈಲ್ಪೀಠದ ಜಗದ್ಗುರುಳಾದ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳ ಮಾತನಾಡಿ ಆರೋಗ್ಯಕರ ಮತ್ತು ಸದೃಢ ಸಮಾಜವನ್ನು ನಿರ್ಮಿಸಲು ನೈತಿಕ ಮೌಲ್ಯಗಳು, ಶಿಸ್ತಿನ ನಡವಳಿಕೆ, ಸಾಂಸ್ಕೃತಿಕ ನೆಲೆಗಟ್ಟು ಮತ್ತು ಸರಿಯಾದ ಪ್ರಯತ್ನಗಳ ಸಾಮರಸ್ಯದ ಮಿಶ್ರಣದ ಅಗತ್ಯವಿದೆ’ ಕುಟುಂಬ ಪ್ರಬೋಧನ’ದ (ಕುಟುಂಬ ಜಾಗೃತಿ) ಮಹತ್ವವನ್ನು ಅವರು ಒತ್ತಿ ಹೇಳಿದರು. ಮನೆಗಳಲ್ಲಿ ಅರ್ಥಪೂರ್ಣವಾಗಿ ಸಂಭಾಷಣೆನಡೆಸುವ ಸಂಸ್ಕೃತಿಯನ್ನು ಪೋಷಿಸಬೇಕು. ಇಲ್ಲಿಂದಲೇ ಮಕ್ಕಳು ಸರಿ ತಪ್ಪುಗಳನ್ನು ಕಲಿಯುತ್ತಾರೆ.
ಕೇವಲ ಉಪದೇಷಗಳು ಸಾಕಾಗುವುದಿಲ್ಲ. ಒಳ್ಳೆಯ ವಾತಾವರಣವು ಮಾತ್ರವೇ ಮಕ್ಕಳನ್ನು ತಪ್ಪುದಾರಿಗೆ ಹೋಗದಂತೆ ತಡೆಯುತ್ತದೆ’ ಹೊರಗಿನಿಂದ ನೋಡಿ ಸಂಘವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಂಘದಲ್ಲಿ ಇದ್ದಲ್ಲಿ ಮಾತ್ರವೇ ಅದರ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ಕಲೆ ಮತ್ತು ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲಿ ್ಲನಮ್ಮ ಸ್ವಯಂ ಸೇವಕರು ಸಕ್ರಿಯರಾಗಿದ್ದಾರೆ’ ಎಂದು ಹೇಳಿದರು. ಇವೇಳೇ ಅಖಿಲ ಭಾರತ ಶಿವಾಚಾರ್ಯ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾಕ್ಟರ್ಚಂದ್ರಶೇಖ ರ್ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಜಾತಿ ಹೆಸರಿನಲ್ಲಿನ ತಾರತಮ್ಯವು ಧರ್ಮ ಹಾಗೂ ಸಮಾಜ ಎರಡಕ್ಕೂ ಹಾನಿಯುಂಟು ಮಾಡುತ್ತದೆ. ಮೇಲು ಮತ್ತು ಕೀಳು ಎಂಬ ವ್ಯತ್ಯಾಸ ಎಲ್ಲಿಂದ ಬಂತು? ಜಾತಿ ಮತ್ತು ವರ್ಗ ವ್ಯವಸ್ಥೆಗಳು ಅಸ್ತಿತ್ವದಲ್ಲಿರಬಹುದು. ಆದರೆ ಅದು ತಾರತಮ್ಯದ ಉದ್ದೇಶಕ್ಕಾಗಿ ಅಲ್ಲ’ ’ದೇವರ ಸೃಷ್ಟಿಯಲ್ಲಿ, ಒಣಗಿದ ಒಂದು ಹುಲ್ಲುಕಡ್ಡಿಗೂ ಅದರದೇ ಆದ ಉದ್ದೇಶವಿರುತ್ತದೆ. ಪ್ರತಿಸೃಷ್ಟಿಯೂ ಉದ್ದೇಶವನ್ನು ಹೊಂದಿದೆ.
ಎಲ್ಲರೊಂದಿಗೂ ಸೇರುವ ಭಾವನೆಯು ಸಾಮಾಜಿಕ ಸಾಮರಸ್ಯದ ಮೂಲತತ್ವವಾಗಿದೆ. ಪ್ರತಿಯೊಬ್ಬರೂ ದೇವರ ಸೃಷ್ಟಿಯಾಗಿದ್ದು, ಎಲ್ಲರನ್ನೂ ಅಪ್ಪಿಕೊಳ್ಳುವುದೇ ಸಾಮಾಜಿಕ ಸಾಮರಸ್ಯ’ ಎಂದು ಹೇಳಿದರು. ನಾವು ಸನಾತನ ಧರ್ಮವನ್ನು ಅನುಸರಿಸಿದಾಗ ಧರ್ಮರಕ್ಷಣೆಯೂ ಅದರೊಂದಿಗೇ ಆಗುತ್ತದೆ. ಧರ್ಮ ಮತ್ತು ಸಂಸ್ಕೃತಿಯನ್ನು ಅನುಸರಿಸಲು ಜನರಲಿ ್ಲಏಕತೆ ಅಗತ್ಯ. ಇವುಗಳನ್ನು ರಕ್ಷಿಸಲು ನೀವುಬಯಸಿದರೆ ಅವುಗಳನ್ನು ಅನುಸರಿಸುವವರನ್ನು ರಕ್ಷಿಸಿ. ಧರ್ಮವನ್ನು ಅನುಸರಿಸುವವರು ಧರ್ಮದಿಂದಲೇ ರಕ್ಷಿಸಲ್ಪಡುತ್ತಾರೆ ಎಂದು ಪ್ರತಿಪಾದಿಸಿದರು. ಈ ವೇಳೆ ನುಲ್ಮಠದ ಗುರುಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿಗಳು ಡಾಕ್ಟರ್ಮೋಹನ್ಭಗವತ್ ಇವರು ಪರಿಚಯ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಪದಾಧಿಕಾರಿಗಳು ಗ್ರಾಮಸ್ಥರು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು ಶ್ರೀಕಾಂತ್ ಉಮರಾನೇ ಸ್ವಾಗತಿಸಿ ಅಖಿಲ್ಭಾರತ ವೀರಶೈವ ಮಹಾಸಭಾ ಕಾರವಾರ ಜಿಲ್ಲಾಧ್ಯಕ್ಷರಾದ ಶಿವಲಿಂಗಯ್ಯ ಅಲ್ಲಯ್ಯನ ವರಮಠ ನಿರೂಪಿಸಿ ಶಿವಾನಂದ ಹಕಾರೆ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 