ಎಲ್ಲರಿಗೂ ಅವಕಾಶ ಹಾಗೂ ಸಮಾನ ನ್ಯಾಯ ಒದಗಿಸುವುದು ಸಂವಿಧಾನದ ಆಶಯ

ಎಲ್ಲರಿಗೂ ಅವಕಾಶ ಹಾಗೂ ಸಮಾನ  ನ್ಯಾಯ ಒದಗಿಸುವುದು ಸಂವಿಧಾನದ ಆಶಯ The Constitution aims to provide equal opportunity and justice to all.

ಹಾವೇರಿ 12 : ಭಾರತಕ್ಕೆ  ಒಂದು  ಕಾಯ್ದೆ  ರಚನೆಗೆ, ಬೇರು-ಬುನಾದಿ ಸಂವಿಧಾನ, ಎಲ್ಲ  ಕಾನೂನುಗಳನ್ನು  ಸಂವಿಧಾನದ ಅಡಿಯಲ್ಲಿ  ಜಾರಿಗೆ ತರಲಾಗಿದೆ.  ಎಲ್ಲರಿಗೂ ಸಮಾನ  ಅವಕಾಶ ಹಾಗೂ ಸಮಾನ  ನ್ಯಾಯ ಒದಗಿಸುವುದು ಸಂವಿಧಾನದ ಆಶಯವಾಗಿದೆ ಎಂದು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವಿಂದ್ರಾ​‍್ಪ ಎನ್‌. ಅವರು ಹೇಳಿದರು. 

ನಗರದ ಜಿಲ್ಲಾ ಆಸ್ಪತ್ರೆ ಸಭಾಭವನದಲ್ಲಿ ಬುಧವಾರ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಮಾನಸಿಕ ಆರೋಗ್ಯ ಕಾರ್ಯಕ್ರಮವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ  ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ  ಜೀವನದಲ್ಲಿ ನಮ್ಮ ಇಚ್ಚೆಯಂತೆ ಹಾಗೂ  ಬೇರೆಯವರಿಗೆ ತೊಂದರೆಯಾಗದಂತೆ   ಬದುಕು ನಡೆಸಿದಾಗ  ಮಾತ್ರ ಮಾನವ ಹಕ್ಕುಗಳ ರಕ್ಷಣೆ ಮಾಡಿದಂತೆ.  ನಮ್ಮ  ಸಮಾಜ  ವ್ಯವಸ್ಥೆಯಲ್ಲಿ  1851 ರಿಂದಲೇ ಕಾನೂನು ಸೇವೆಗಳ ಉಲ್ಲೇಖವಿದೆ.  ಎಲ್ಲರಿಗೂ ಕಾನೂನಿನ  ತಿಳುವಳಿಕೆ ಅವಶ್ಯವಾಗಿದೆ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ  ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್‌.ಎಂ.ರಮೇಶ ಅವರು ಮಾತನಾಡಿ, ಈ ಮೊದಲು  ಅವಿಭಕ್ತ ಕುಟುಂಬಗಳಲ್ಲಿ ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, , ಚಿಕ್ಕಪ್ಪ-ಚಿಕ್ಕಮ್ಮ,  ಅಕ್ಕ-ತಂಗಿ, ಅಣ್ಣ-ತಮ್ಮ ಹೀಗೆ ತುಂಬು ಕುಟುಂಬಗಳು  ನೋಡಬಹುದಿತ್ತು. ಆಗ ಹಣದ ಕೊರತೆ ಇದ್ದರೂ ಪ್ರೀತಿ-ಪ್ರೇಮಕ್ಕೆ ಕೊರತೆ ಇರಲಿಲ್ಲ,  ಯಾರಿಗೇ ಸಮಸ್ಯೆಯಾದರೂ ಎಲ್ಲರೂ ಬೆಂಬಲವಾಗಿ ನಿಲ್ಲುತ್ತಿದ್ದರು. ಈಗ ವಿಭಕ್ತ ಕುಟುಂಬಗಳ  ಸಂಖ್ಯೆ ಹೆಚ್ಚಾಗಿವೆ,  ಕೆಲಸದ ಹಿನ್ನಲೆಯಲ್ಲಿ ಗಂಡ ಒಂದು ಕಡೆ, ಹೆಂಡತಿ ಒಂದು ಕಡೆ ಹಾಗೂ ಮಗು ಒಂದು ಕಡೆ ಇರುತ್ತದೆ. ಹಾಗಾಗಿ  ಒಂಟಿತನ, ಕೆಲಸದ ಒತ್ತಡ ನಾನಾ ಕರಣಗಳಿಂದ ಖಿನ್ನತೆ ಉಂಟಾಗಿ ಮಾನಸಿಕತೆ ಉಂಟಾಗುತ್ತದೆ.   ಮಾನಸಿಕತೆಯನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ  ನೀಡಿ ಗುಣಪಡಿಸಬಹುದು ಹಾಗೂ ಅವರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ  ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಪ್ರದೀಪಕುಮಾರ ಎಂ.ವಿ. ಅವರು ಮಾತನಾಡಿ, ಆಸ್ಪತ್ರೆಗೆ ಬರುವ ಮಾನಸಿಕ ವ್ಯಕ್ತಿಗಳಿಗೆ  ಸೂಕ್ತ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆ ವೈದ್ಯರು ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ.  ಈ ನಿಟ್ಟಿನಲ್ಲಿ  ಮಾನಸಿಕ ವ್ಯಕ್ತಿಗಳ ಚಿಕಿತ್ಸೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ನೆಲಮಹಡಿಯಲ್ಲಿ  ಜಿಲ್ಲಾ ಮಾನಸಿಕ ವಿಮರ್ಶೆ ಕೇಂದ್ರವನ್ನು ನ್ಯಾಯಾಧೀಶರು ಉದ್ಘಾಟಿಸಿದರು.  

ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶ್ರೀಶೈಲಜಾ ಎಚ್‌.ವಿ, ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್‌.ಹಾವನೂರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ,   ಮುಖ್ಯ ಕಾನೂನು ನೆರವು ಅಭಿರಕ್ಷಣಾ  ವಕೀಲರಾದ ವಿ.ಜಿ.ದೊಡ್ಡಗೌಡರ, ಎಂ.ಚಿ.ಭರಮ್ಮನವರ ಇತರರು ಉಪಸ್ಥಿತರಿದ್ದರು.