ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ: ಬಿ.ಎಸ್‌. ಪಾಟೀಲ

ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ: ಬಿ.ಎಸ್‌. ಪಾಟೀಲ  The Congress party's contribution to the country's independence is immense: B.S. Patil

ತಾಳಿಕೋಟಿ 16 : ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಹನೀಯರು ಕಾಂಗ್ರೆಸ್ ಪಕ್ಷದವರಾಗಿದ್ದರು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಎಸ್‌. ಪಾಟೀಲ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಜಾತಿ-ಮತ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದ್ದು, ಭಾರತದ ಜಾತ್ಯಾತೀತ ತತ್ವವನ್ನು ಕಾಂಗ್ರೆಸ್ ಪಕ್ಷ ಸದಾ ಎತ್ತಿಹಿಡಿದಿದೆ ಎಂದು ಹೇಳಿದರು. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಂ.ಜಿ. ಪಾಟೀಲ, ಸಿದ್ದನಗೌಡ ಪಾಟೀಲ ಪ್ರಭುಗೌಡ ಮದರಕಲ್ಲ, ಸಿಕಂದರಸಾಬ ವಠಾರ, ಮಹಬೂಬ ಕೆಂಭಾವಿ, ಎ.ಕೆ. ನಮಾಜಕಟ್ಟಿ, ಮಹೆಬೂಬಶಾ ಮಕಾನದಾರ, ನೀಲಮ್ಮಗೌಡ್ತಿ ಪಾಟೀಲ, ಕೆ.ಎ. ಸಗರ, ಹಸನಸಾಬ ಮನಗೂಳಿ, ಚಾಂದಸಾಬ ಲಾಹೋರಿ, ಸಂಗನಗೌಡ ದೇಸಾಯಿ, ಮೋದಿನಸಾ ನಗಾರ್ಚಿ, ಫಯಾಜ್ ಉತ್ನಾಳ, ಸದ್ದಾಮ ಹೊನುಟಗಿ, ಮುದ್ದು ಪಟೇಲ, ಇಬ್ರಾಹಿಂ ಆರಬೋಳ, ತನ್ವೀರ ಮನಗೂಳಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.