11 ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಕ್ಯಾನ್ಸರ್ ಆಸ್ಪತ್ರೆ

ಡಾ.ರವೀಂದ್ರ ಎಂ. ಜೋಶಿ 

ಲೋಕದರ್ಶನ ವರದಿ

ಕಾಗವಾಡ 08: ವೈದ್ಯಕೀಯ ಸೇವೆಯಲ್ಲಿ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿ 11 ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಮಿರಜದ ಡಾ. ಜೋಶಿ ಕ್ಯಾನ್ಸರ್ ಸೆಂಟರ್ನ 11 ನೇ ವಾಷರ್ಿಕೋತ್ಸವ ಸಮಾರಂಭದ ಶನಿವಾರ ದಿ. 9-11-2019 ರಂದು ಜರುಗಲಿದ್ದು, ಅದರ ಅಂಗವಾಗಿ ಈ ವಿಶೇಷ ಲೇಖನ.

ಕ್ಯಾನ್ಸರ್ ಚಿಕಿತ್ಸೆಯಿಂದ ಕ್ಯಾನ್ಸರ್ ಜಯಿಸುವ ಕಡೆಗೆ ಇಂದಿನ ನಿಜಸ್ಥಿತಿ

ಕ್ಯಾನ್ಸರ್ ರೋಗ ಒಂದು ಮಹಾಮಾರಿ. ಎಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂಬುದು ವಸ್ತುಸ್ಥಿತಿ. ಈ ರೋಗದ ಹೆಸರು ಕೇಳಿಯೇ ಎಷ್ಟೋ ಜನ ಗಾಬರಿಯಾಗಿ ಜೀವಕಳೆದುಕೊಂಡ ಉದಾಹರಣೆಗಳಿವೆ. ಮೊದಲಿನಿಂದಲೂ ಕ್ಯಾನ್ಸರ್ ರೋಗದ ನಿಧಾನವಾಗುತ್ತಿದ್ದಂತೆಯೇ, ಮರಣಾಂತಿಕ ಜೀವನ ಎಂಬುದು ಸ್ಪಷ್ಟವಾಗುತ್ತಿತ್ತು. ಆದ್ದರಿಂದಲೇ ಕ್ಯಾನ್ಸರ್ ಎಂದರೆ ಕ್ಯಾನ್ಸಲ್ ಎಂಬ ಪ್ರತೀತಿ ಬೆಳೆದು ಬಂದಿರಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ರಯೋಗ ವಿಜ್ಞಾನದಲ್ಲಿ ಆದ ಪ್ರಗತಿ ಹೊಸ ಔಷಧಿಗಳನ್ನು ಕಂಡು ಹಿಡಿದಿದ್ದರಿಂದ, ಎಷ್ಟೋ ಕ್ಯಾನ್ಸರ್ ರೋಗಿಗಳಿಗೆ ದೀರ್ಘಾಯುಷ್ಯ ಹಾಗೂ ಕೆಲವು ರೋಗಿಗಳು ಪೂರ್ಣ ಗುಣಮುಖರಾಗುವಂತಾಗಿದೆ.

ಕೆಲ ಪ್ರಕಾರದ ಕ್ಯಾನ್ಸರ್ಗಳು: ಉದಾ: ಸ್ತನ, ಕರುಳು ಅಂಡಾಶಯ, ಶ್ವಾಸಕೋಶ, ಎಲುಬುಗಳ ಕ್ಯಾನ್ಸರ್ಗಳಲ್ಲಿ ಪೂರ್ಣ ಗುಣಮುಖರಾಗುವಂತೆ ಉಪಚರಿಸಬಹುದು. ಈ ಎಲ್ಲ ಪ್ರಕಾರದ ಕ್ಯಾನ್ಸರ್ಗಳು ಮೊದಲನೇ ಹಂತ, ಪ್ರಾರಂಭಿಕ ಮಟ್ಟದಲ್ಲಿ ಇದ್ದರೇ ಮಾತ್ರ, ಇನ್ನು ಕೆಲವು ಬೆಳೆದ ಕ್ಯಾನ್ಸರ್ಗಳಲ್ಲಿಯೂ ಕೂಡ ಗುಣಮುಖರಾಗುವಂತೆ ಉಪಚರಿಸಬಹುದು. ಉದಾ: ಓಊಐ: ಂಐಐ: ಇತಿಟಿರ ಖಚಿತಠಡಿಟಿಚಿ, & ಠಣಛಿಠ ಖಚಿಡಿಛಿಠಟಚಿ. ಅಂಡಾಶಯ ಕ್ಯಾನ್ಸರ್ ಉಅಖಿ ಇತ್ಯಾದಿ. ಈ ಪರಿಸ್ಥಿತಿ ಒಮ್ಮಿಂದೊಮ್ಮೆಲೆ ಬಂದಂಥ ಪ್ರತಿಫಲವಲ್ಲ. ಜಗತ್ತಿನಾದ್ಯಂತ ಕ್ಯಾನ್ಸರ್ ರೋಗ ಚಿಕಿತ್ಸೆ ಮೇಲೆ ನಡೆದಂಥ ಪ್ರಯೋಗಗಳಿಂದ ಅನೇಕ ವರ್ಷಗಳ ಪರಿಶ್ರಮದಿಂದ ಸಿಕ್ಕಂತಹ ಯಶಸ್ಸಾಗಿದೆ.

ಇದರಲ್ಲಿ ಮಹತ್ವದ ಬೆಳವಣಿಗೆಯೆಂದರೆ, ಎಲ್ಲ ಪ್ರಕಾರದ ಚಿಕಿತ್ಸೆ ಪದ್ದತಿಗಳನ್ನು (ಶಸ್ತ್ರಕ್ರಿಯೇ, ಕೆಮೋ ಥೆರಪಿ & ರೇಡಿಯೋ ಥೆರಪಿ) ಒಗ್ಗೂಡಿಸಿ ಚಿಕಿತ್ಸೆಯನ್ನು ಫಲಕಾರಿ ಮಾಡುವುದು. ಆದ್ದರಿಂದ ಕ್ಯಾನ್ಸರ್ ಚಿಕಿತ್ಸೆ ಪದ್ದತಿಯಲ್ಲಿ ಹೆಚ್ಚು ಯಶಸ್ಸನ್ನು ಕಂಡುಕೊಳ್ಳಬಹುದು. ಉದಾ: ಇತಿಟಿರ ಖಚಿಡಿಛಿಠಟಜ ದಲ್ಲಿ ಶಸ್ತ್ರಕ್ರೀಯೆ ಒಂದರಿಂದ 5-10 % ಯಶಸ್ಸನ್ನು ಕಾಣಬಹುದು. ಆದರೆ ಈ ಉಪಚಾರದಲ್ಲಿ ಕೆಮಾಥೆರಪಿಯನ್ನು ಒಗ್ಗೂಡಿಸಿ ಕೊಟ್ಟರೆ, ನಾವು 60-65 % ಯಶಸ್ಸನ್ನು ಪಡೆಯಬಹುದಾಗಿದೆ. ಇದೂ ಅಲ್ಲದೇ ಖಣಠಿಠಿಠಡಿಟತಜ (ಬೆಂಬಲ ಚಿಕಿತ್ಸೆ) ಯನ್ನು ಮಾಡುವುದು. ಅಂದರೆ, ರೋಗದ ಕಾರಣ ಹಾಗೂ ಅದರ ಚಿಕಿತ್ಸೆಗಳಿಂದ ಕೆಲವು ದುಷ್ಟರಿಣಾಮಗಳು ಆಗುವವು. ಈ ದುಷ್ಟರಿಣಾಮಗಳಿಗಾಗಿ, ಬೆಂಬಲ ಚಿಕಿತ್ಸೆ ಹಾಗೂ ಕಾಳಜಿ ಮಾಡುವುದು. ರಕ್ತ ಹಾಗೂ ರಕ್ತ ಘಟಕಗಳನ್ನು ಕೊಡುವುದು. ಸಂಸರ್ಗ ಜನ್ಯ ರೋಗದ ಉಪಚಾರ ಹಾಗೂ ಜೀವನ ಸತ್ವಗಳನ್ನು ಕೊಡುವುದು. ಹೆಚ್ಚು ಯಶಸ್ಸನ್ನು ಪಡೆಯುವಲ್ಲಿ ಸಹಾಯವಾಗುವವು.

ಇದಲ್ಲದೇ ಕ್ಯಾನ್ಸರ್ ರೋಗದ ನಿದಾನಕ್ಕಾಗಿ ಹೊಸ ಪದ್ದತಿಗಳನ್ನು ಅಳವಡಿಸುವುದು. ಉದಾ: ಒಠಟಛಿಛಿಣಟಚಿಡಿ ಜಚಿರಟಿಠ,; ಕಇಖಿ ಅಖಿ; ಇತ್ಯಾದಿ. ಈ ಪ್ರಕಾರದ ನಿದಾನ ಪದ್ಧತಿಗಳಿಂದ ಕ್ಯಾನ್ಸರ್ ರೋಗದ ನಿದಾನ, ಅದರ ತೀವ್ರತೆ ಮತ್ತು ಅವಯವಳಿಗೆ ಪಸರಿಸುವ ಬಗ್ಗೆ ಹೆಚ್ಚು ಮಾಹಿತಿ ಸಿಗುವುದರಿಂದ, ಹೆಚ್ಚು ಪರಿಣಾಮಕಾರಿಯಾಗಿ, ಎಲ್ಲ ಪದ್ಧತಿಗಳನ್ನು ಒಳಗೂಡಿಸಿ ಚಿಕಿತ್ಸೆ ಮಾಡಲು ಅನುಕೂಲವಾಗುತ್ತದೆ. 

ಇತ್ತೀಚಿನ ಹೊಸ ಚಿಕಿತ್ಸೆಯೆಂದರೆ, ಈ ಚಿಕಿತ್ಸೆಗಳಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಕ್ಷ್ಸೇ ಗುರುತಿಸಿ, ನಾಶಪಡಿಸಿ, ಉಳಿದ ಜೀವಕೋಶಗಳಿಗೆ ಏನೂ ಬಾಧೆಯಾಗದಂತೆ ಚಿಕಿತ್ಸೆ ಮಾಡುವುದು. ರಕ್ತ ಕ್ಯಾನ್ಸರ್ದಲ್ಲಿ ಆದ್ದರಿಂದ ಕ್ಯಾನ್ಸರ್ ರೋಗದಲ್ಲಿ ನಾವು ಕ್ಯಾನ್ಸರ್ ಉಪಚಾರದಿಂದ ರೋಗಮುಕ್ತರಾಗುವ ಪ್ರಯತ್ನದಲ್ಲಿ ಯಶಸ್ಸನ್ನು ಕಂಡುಕೊಳ್ಳುತ್ತಿದ್ದೇವೆ. ಇಂದಿನ ನಿಜಸ್ಥಿತಿಯಲ್ಲಿ ಕ್ಯಾನ್ಸರ್ ರೋಗದ ಚಿಕಿತ್ಸೆಯಿಂದ ಕ್ಯಾನ್ಸರ್ ರೋಗವನ್ನು ಜಯಿಸುವ ಕನಸು ನನಸಾಗುವದರಲ್ಲಿ ಸಂದೇಹವಿಲ್ಲ. ನಮ್ಮ ಹಾಸ್ಪಿಟಲ್ದಲ್ಲಿ ಮೇಲ್ಕಾಣಿಸಿದ ಎಲ್ಲ ಪ್ರಕಾರದ ರೋಗಗಳಿಗೆ ಸೂಕ್ತ ನಿದಾನ ಹಾಗೂ ಚಿಕಿತ್ಸೆ ಒದಗಿಸಿ ಯಶಸ್ಸನ್ನು ಕಂಡಿರುವ ಸಂಗತಿಯನ್ನು ತಿಳಿಸಲು ಅತೀವ ಆನಂದವಾಗುತ್ತದೆ.

@@@@@@@@@@@@