ಕ್ರಾಂತಿಯ ಜ್ಯೋತಿ - ಪ್ರವಾದಿ ಮುಹಮ್ಮದ್ (ಸ) ರಾಜ್ಯವ್ಯಾಪಿ ಸೀರತ್ ಅಭಿಯಾನ

ಕ್ರಾಂತಿಯ ಜ್ಯೋತಿ - ಪ್ರವಾದಿ ಮುಹಮ್ಮದ್ (ಸ) ರಾಜ್ಯವ್ಯಾಪಿ ಸೀರತ್ ಅಭಿಯಾನ  The Beacon of Revolution – Prophet Muhammad (PBUH): State-wide Seerat Campaign

ಕೊಪ್ಪಳ, ಆ.25: ಜಮಾಅತೆ ಇಸ್ಲಾಮಿ ಹಿಂದ್ ಕೊಪ್ಪಳ ಶಾಖೆ ವತಿಯಿಂದ ಆ.26ರಿಂದ ಸೆ.6ರವರೆಗೆ ‘ಕ್ರಾಂತಿಯ ಹ್ಲ್ಖ್ಯ್ತಿಹಿ್ಲ್ಘ್ಝ್ಣೃ್ತು ಮುಹಮ್ಮದ್ (ಸ)’ ಶೀರ್ಷಿಕೆಯಡಿ ರಾಜ್ಯವ್ಯಾಪಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಸಂಚಾಲಕ ಮೊಹಮ್ಮದ್ ದಿಲಾವರ್ ಅಂಬರ್ ಖಾನ್ ತಿಳಿಸಿದರು.  

ಮಂಗಳವಾರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.  

ಸಾಹಿತ್ಯ ಪ್ರಚಾರ ಮತ್ತು ಸೌಹಾರ್ದ ಭೇಟಿ ಕಾರ್ಯಕ್ರಮಗಳ ಮೂಲಕ ಶಾಂತಿ ಪ್ರಕಾಶನದ ‘ಮಾನವ ಮನಸ್ಸಿನ ಕೃಷಿಕ ಪ್ರವಾದಿ ಮುಹಮ್ಮದ್ (ಸ)’ ಹಾಗೂ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪ್ರವಾದಿ ಮುಹಮ್ಮದ್ (ಸ)’ ಕೃತಿಗಳನ್ನು ಸಾಹಿತಿಗಳು, ವೈದ್ಯರು, ಪ್ರಾಧ್ಯಾಪಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ತಲುಪಿಸಲಾಗುವುದು ಎಂದು ವಿವರಿಸಿದರು.  

ಕೊಪ್ಪಳ ತಾಲ್ಲೂಕಿನ ಕೊಳೂರು, ಚಿಕ್ಕಸಿಂದೋಗಿ, ಹನಕುಂಟಿ, ಮಂಗಳೂರು ಹಾಗೂ ಚಿಕ್ಕಬಗನಾಳ ಗ್ರಾಮಗಳಲ್ಲಿ ಅಭಿಯಾನದ ಪರಿಚಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಲ್ಲದೆ, ಸೀರತ್ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ಸೆ.5ರಂದು ರಾತ್ರಿ 7.15ಕ್ಕೆ ನಗರದ ಸಾಹಿತ್ಯ ಭವನದಲ್ಲಿ ವಿಶೇಷ ವಿಚಾರಗೋಷ್ಠಿ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.  

ಆ.30ರಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸುವುದು ಹಾಗೂ ಹಣ್ಣು-ಹಂಪಲು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವೃದ್ಧಾಶ್ರಮ ಭೇಟಿ, ಸ್ವಚ್ಛತೆ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗುವುದು. ಸೀರತ್ ಪ್ರದರ್ಶನ ಆಯೋಜಿಸಲಾಗಿದ್ದು, ‘ಸನ್ಮಾರ್ಗ’ ವಾರಪತ್ರಿಕೆ ಹಾಗೂ ‘ಅನುಪಮಾ’ ಮಾಸಪತ್ರಿಕೆಗಳ ವಿಶೇಷಾಂಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.  

ಅಭಿಯಾನದ ಅಂಗವಾಗಿ ಸಮುದಾಯದ ಪ್ರಮುಖರು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಸ್ವಾಗತ ಮತ್ತು ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರು ಅಭಿಯಾನಕ್ಕೆ ವ್ಯಾಪಕ ಬೆಂಬಲ ನೀಡಬೇಕು ಎಂದು ಮೊಹಮ್ಮದ್ ದಿಲಾವರ್ ಅಂಬರ್ ಖಾನ್ ಮನವಿ ಮಾಡಿದರು.  

ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದ ಅಧ್ಯಕ್ಷ ಸೈಯದ್ ಹಿದಾಯತ್ ಅಲಿ, ಮಹಿಳಾ ವಿಭಾಗದ ಸಂಚಾಲಕಿ ಉಮ್ಮೇ ಸಲ್ಮಾ, ಸದಸ್ಯರಾದ ಮೊಹಮ್ಮದಿಯಾ ಅಸ್ರಾ, ರಿಜ್ವಾನಾ ಬೇಗಂ, ಮೊಹಮ್ಮದ್ ಅಶ್ಫಾಕ್ ಹುಸೇನ್, ಅಜಗರ್ ಖಾನ್, ಅಯಾಜ್ ಅಹ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.