ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಒತ್ತು ನೀಡಿತ್ತು. ಆದರೆ, ಈಗ ಶಿಕ್ಷಣ ಕಳಪೆಯಾಗಿದೆ : ರವಿಕುಮಾರ

ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಒತ್ತು ನೀಡಿತ್ತು. ಆದರೆ, ಈಗ ಶಿಕ್ಷಣ ಕಳಪೆಯಾಗಿದೆ : ರವಿಕುಮಾರ The BJP had prioritized the education sector; however, the quality of education has now deteriorated

ಲೋಕದರ್ಶನ ವರದಿ 

ಕಂಪ್ಲಿ 15   : ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಆದರೆ, ಈಗಿನ ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕಳಪೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ ಹೇಳಿದರು. ಪಟ್ಟಣದ ಬ್ರೈಟ್‌ವೇ ಶಾಲೆಯಲ್ಲಿ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಎಂಎಲ್ಸಿ ಚುನಾವಣೆಗಳು ಅಕ್ಟೋಬರ್ ಕೊನೆವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಕಂಪ್ಲಿ 213, ಕುರುಗೋಡು 120 ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ 3302 ಶಿಕ್ಷಕ ಮತದಾರರಿದ್ದಾರೆ. ಶಿಕ್ಷಣ ಕ್ದೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡುವ ಜೊತೆಗೆ ಅನುದಾನ ಮತ್ತು ನೇಮಕಾತಿಯನ್ನು ಬಿಜೆಪಿ ಮಾಡಿತ್ತು. ಮತ್ತು ಶಿಕ್ಷಣಕ್ಕೆ ಒತ್ತು ನೀಡಿದೆ. ಈಗ ಶಿಕ್ಷಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ಇಲ್ಕದಂತಾಗಿದೆ. ಶಿಕ್ಷಕರ ನೇಮಕ ಗಂಭೀರವಾಗಿದೆ. ಇಂದಿನ ದಿನಮಾನದಲ್ಲಿ ಶಿಕ್ಷಣದ ಗುಣಮಟ್ಟ ಕಳಪೆಯಾಗುತ್ತಿದೆ.

ನಾಲ್ಕು ಬಾರಿ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿ ಶಶೀಲ್ ನಮೋಶಿ ಹೊರ ಹೊಮ್ಮಿ, ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಶಿಕ್ಷಕರು ಮುಂಬರುವ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಶೀಲ್ ಜಿ.ನಮೋಶಿ ಅವರನ್ನು ಮತ್ತೊಮ್ಮೆ ಗೆಲ್ಲಿಸಲು ಮತದಾರರ ಬಳಿ ತೆರಳಬೇಕಾಗಿದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಮಾತನಾಡಿ, ಬಳ್ಳಾರಿ ಜಿಲ್ಲಾ ಪ್ರವಾಸದಲ್ಲಿದ್ದೇವೆ. ಪರಿಸರ, ಸಮುದಾಯದಲ್ಲಿ ನಾಯಕತ್ವಯೊಂದಿಗೆ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಚುನಾವಣೆ ಎಂಬ ಪ್ರಜಾಪ್ರಭುತ್ವ ಹಬ್ಬದಲ್ಲಿ ಶಿಕ್ಷಕರು ಉತ್ತಮ ಅವಕಾಶಗಳಾಗಿ ಬಳಸಿಕೊಳ್ಳಿ. 

ನಿಮ್ಮ ಬೆಳವಣಿಗೆ ಈ ಚುನಾವಣೆ ಅನುಕೂಲವಾಗಬೇಕು ಎಂದರು. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಅಳ್ಳಳ್ಳಿ ವಿರೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಶಶೀಲ್ ನಮೋಶಿ ಅವರು ಸಾಕಷ್ಟು ಸೇವಾ ಕಾರ್ಯಗಳೊಂದಿಗೆ ಈಶಾನ್ಯ ಶಿಕ್ಷಕರ ಮನಗೆದ್ದಿದ್ದಾರೆ. ದೇಶದ ಜನರ ಕಾಳಜಿ ಸೇರಿದಂತೆ ದೇಶದ ಅಭಿವೃದ್ಧಿಯಲ್ಲಿ ಬಿಜೆಪಿ ಪಾತ್ರ ದೊಡ್ಡದಿದೆ. ವಿಧಾನ ಪರಿಷತ್ನಲ್ಲಿ ಅನೇಕ ಬಾರಿ ಜನರಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಅಡವಿಸ್ವಾಮಿ, ಎಸ್‌.ಎಂ.ನಾಗರಾಜ,  ಟಿ.ವಿ.ಸುದರ್ಶನರೆಡ್ಡಿ, ಶರಣಕುಮಾರ, ಶಿವರಾಜ ಸೇರಿದಂತೆ ಶಿಕ್ಷಕರು ಇದ್ದರು.