ಸಸ್ಯ ಸಂಕಲದಲ್ಲಿ ದೇವರ ನೆಲೆ: ಡಾ. ಚರಂತಯ್ಯ ಹಿರೇಮಠ
The Abode of the Divine in the Plant Kingdom: Dr. Charantayya Hiremath
ಲೋಕದರ್ಶನ
ಧಾರವಾಡ 09: ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ದೇವರೆಂದು ನಂಬಲಾಗಿದೆ. ಮನುಕುಲದ ಒಳಿತಿಗಾಗಿ ದೇವರು ನೀಡಿದ ಅಮೂಲ್ಯ ಕೊಡುಗೆ ಸಸ್ಯ ಸಂಪತ್ತು ಎಂದು ಹುಬ್ಬಳ್ಳಿಯ ಸಂಜೀವಿನಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಚರಂತಯ್ಯ ಹಿರೇಮಠ ಅಭಿಪ್ರಾಯಪಟ್ಟರು. ಹುಬ್ಬಳ್ಳಿಯ ಕ.ವಿ.ವಿ. ಸಂಘದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಆರ್.ಎಫ್. ಇಂಚಲ ಅವರು ಬರೆದ ‘ಸಸ್ಯ ಸಂಕಲದಲ್ಲಿ ದೇವರು’ ಕೃತಿಯನ್ನು ಲೋಕಾಪರ್ಣೆ ಮಾಡಿ ಅವರು ಮಾತನಾಡಿದರು.
ಸಸ್ಯಗಳಿಂದ ಆಯುರ್ವೇದ ಓಷಧ ನಮ್ಮ ಸಂಸ್ಕೃತಿಯ ಭಾಗವಾಗಿರುವ ಆಯುರ್ವೇದವು ಸಸ್ಯ ಹಾಗೂ ಗಿಡಮೂಲಿಕೆಗಳಿಂದ ಓಷಧ ನೀಡುವ ಪದ್ಧತಿಯನ್ನು ಪರಂಪರೆಯಿಂದ ಮುಂದುವರಿಸಿಕೊಂಡು ಬಂದಿದೆ. ವೇದಗಳ ಕಾಲದಲ್ಲಿಯೂ ಸಾವಿರಾರು ಸಸ್ಯಗಳ ಮಹತ್ವದ ಕುರಿತು ಉಲ್ಲೇಖಗಳಿವೆ. ಜಗತ್ತಿನ ಬಹುತೇಕ ಸಸ್ಯರಾಶಿಗಳಲ್ಲಿ ಓಷಧೀಯ ಗುಣಗಳಿವೆ ಎಂದು ಹೇಳಿದರು.
ಅಶ್ವತ್ಥ, ತುಳಸಿ, ನೆಲ್ಲಿ, ದರ್ಭೆ, ಉತ್ತರಾಣಿ, ಧೂಪ ಹಾಗೂ ಬಿಲ್ವಪತ್ರೆ ಸೇರಿದಂತೆ ಹಲವು ಸಸ್ಯಗಳು ಓಷಧೀಯ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ದೇವರ ನೆಲೆ ಇದೆ ಎಂಬ ಭಾವನೆ ಭಾರತೀಯ ಸಂಸ್ಕೃತಿಯಲ್ಲಿದೆ. ಪ್ರಾಣಿ, ಪಕ್ಷಿಗಳನ್ನೂ ಪೂಜ್ಯಭಾವದಿಂದ ಕಾಣುವ ಸಂಪ್ರದಾಯ ನಮ್ಮದಾಗಿದೆ. ಹಲವು ವ್ರತಾಚರಣೆ ಹಾಗೂ ಪೂಜಾ ವಿಧಾನಗಳಲ್ಲಿಯೂ ಸಸ್ಯಗಳನ್ನು ಬಳಸಲಾಗುತ್ತದೆ ಎಂದರು.
ಪ್ರಕೃತಿಯಲ್ಲೇ ದೇವರ ದರ್ಶನ ಧಾರವಾಡ ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ, ಸಕಲ ಜೀವ ರಾಶಿಗಳಲ್ಲಿಯೂ ದೇವರನ್ನು ಕಾಣುವ ಪರಂಪರೆ ನಮ್ಮದು. ನಿಸರ್ಗದಲ್ಲಿಯೇ ದೇವರಿದ್ದಾನೆ. ವಿವಿಧ ಸಸ್ಯಸಂಕುಲಗಳನ್ನು ದೇವರು ನಮಗೆ ದಯಪಾಲಿಸಿದ್ದಾನೆ. ಸಸ್ಯಗಳ ಬಳಕೆಯಲ್ಲಿ ಜ್ಞಾನ, ವಿಜ್ಞಾನ, ಆಧ್ಯಾತ್ಮಿಕತೆ ಹಾಗೂ ಆರೋಗ್ಯ ಅಡಗಿದೆ ಎಂದು ಹೇಳಿದರು.
ಓಂಕಾರ ಸ್ಮರಣೆ ಪವಿತ್ರ ಡಾ. ಡಿ.ಎಂ. ಹಿರೇಮಠ ಮಾತನಾಡಿ, ದೇವರ ನಾಮಸ್ಮರಣೆಯಲ್ಲಿ ನಾವು ಪಠಿಸುವ ಎಲ್ಲ ಮಂತ್ರಗಳಲ್ಲಿಯೂ ದೊಡ್ಡ ಶಕ್ತಿಯಿದೆ. ಅವುಗಳಲ್ಲಿ ‘ಓಂಕಾರ’ ನಾಮಸ್ಮರಣೆ ಪರಮಪವಿತ್ರವಾದುದು. ಸಕಲ ಚರಾಚರ ವಸ್ತುಗಳಲ್ಲಿಯೂ ದೇವರಿದ್ದಾನೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ‘ಸಸ್ಯ ಸಂಕಲದಲ್ಲಿ ದೇವರು’ ಕೃತಿ ಮನೋಜ್ಞವಾಗಿದೆ. ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ ಇದಾಗಿದೆ. ಜನಸಾಮಾನ್ಯರಿಗೂ ಅರ್ಥವಾಗುವಂತೆ ಡಾ. ಆರ್.ಎಫ್. ಇಂಚಲ ಅವರು ಕೃತಿ ರಚಿಸಲು ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದು ಹೇಳಿದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 