97ನೇ ದಿನದ ಬಲ್ಡೋಟ ಹಠಾವೋ ಧರಣಿ ಸಂಪೂರ್ಣ
The 97th day of the Baldota Hathao sit-in has ended.
ಲೋಕದರ್ಶನ ವರದಿ
97ನೇ ದಿನದ ಬಲ್ಡೋಟ ಹಠಾವೋ ಧರಣಿ ಸಂಪೂರ್ಣ
ಬಂಡವಾಳಶಾಹಿ ಐನಾತಿ ಜಾಗವನ್ನೆ ಹುಡುಕುತ್ತದೆ : ಚಂದ್ರಕಾಂತ ತಾಲೇಡಾ
ನಾನು ಚಾರ್ಟರ್ಡ್ ಅಕೌಂಟಂಟ್ ಮಾತ್ರವಲ್ಲ: ಎಂ.ಕೆ. ಶೆಟ್ಟರ್
ಕೊಪ್ಪಳ 04 : 97ನೇ ದಿನದವಾದ ಬುಧವಾರದಂದು ಕಾರ್ಖಾನೆ ವಿರೋಧಿ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಚಾರ್ಟರ್ಡ್ ಅಕೌಂಟಂಟ್ ಚಂದ್ರಕಾಂತ ತಾಲೇಡಾ ಅವರು ಮಾತನಾಡಿ ಕೊಪ್ಪಳ ಮತ್ತು ಭಾಗ್ಯನಗರ ಒಳಗೊಂಡು ಒಂದೂವರೆ ಲಕ್ಷ ಜನರ ಆರೋಗ್ಯ, ಜೀವ ರಕ್ಷಣೆ ಮಾಡುವುದನ್ನು ಸರ್ಕಾರ ಕಡೆಗಣಿಸಬಾರದು. ಕಾರ್ಖಾನೆ ಬಾಧಿತ 20 ಹಳ್ಳಿಯ ಐವತ್ತು ಸಾವಿರ ಜನರ ಆರೋಗ್ಯ ದುಷ್ಪರಿಣಾಮದಿಂದ ಸರಣಿಯಾಗಿ ಸಾವೀಗೀಡಾಗುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಭವಿಷ್ಯದಲ್ಲಿ ಕೊಪ್ಪಳಕ್ಕೆ ಬರಬಾರದು ಎಂದಾದರೆ ಬಲ್ಡೋಟ ಕಾರ್ಖಾನೆ ವಿಸ್ತರಣೆ ಆಗದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆ ಆರೋಗ್ಯದಿಂದಿರಲು ಸಾಧ್ಯ. ಕ್ಯಾನ್ಸರ್ ರೋಗ ಈ ಬಾಧಿತ ಹಳ್ಳಿಯ ಜನರಿಗೆ ಸಾಮಾನ್ಯವಾಗುತ್ತಿದೆ. ಇದರ ಅಪಾಯದ ಎಚ್ಚರಿಕೆ ಇಟ್ಟುಕೊಳ್ಳೋಣ ಎಂದರು. ಇನ್ನೊಬ್ಬ ಚಾರ್ಟರ್ಡ್ ಅಕೌಂಟಂಟ್ ಬಸವಪ್ರಭು ಶೆಟ್ಟರ್ ಮಾತನಾಡಿ ' ನಾನು ಬರಿ ಲೆಕ್ಕಪರಿಶೋಧಕನಲ್ಲ. ನನಗೂ ಭೂಮಿ ಇದೆ. ಆ ಬೆಳೆ ಈ ಕಾರ್ಖಾನೆಗಳ ಧೂಳಿನಿಂದ ಇಳುವರಿ ಕುಂಠಿತವಾಗುತ್ತದೆ. ಇದನ್ನು ಕೇವಲ ಸಾಮಾನ್ಯ ಮಾಲಿನ್ಯವೆಂದು ಅಂದುಕೊಳ್ಳಬಾರದು. ಜೀವ ತೆಗೆಯುವ ಮಟ್ಟದಲ್ಲಿ ಇರುವ ಈ ಕಾರ್ಖಾನೆಗಳನ್ನು ಯಾರೂ ಸಹಿಸಿಕೊಳ್ಳಬಾರದು. ಲಕ್ಷಗಟ್ಟಲೆ ಜೀವಗಳಿಗೆ ಸಂಚಕಾರ ತರುವ ಯಾವುದೇ ಕಾರ್ಖಾನೆ ಇಲ್ಲಿ ತಳವೂರಲು ಬಿಡಬಾರದು. ಸರ್ಕಾರ ಶೀಘ್ರ ನಿರ್ಣಯ ಮಾಡಿ ಜನರ ಆತಂಕ ದೂರ ಮಾಡಬೇಕು' ಎಂದರು. ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಶರಣು ಶೆಟ್ಟರ್, ಪುಟ್ಟರಾಜ ಪಾಟೀಲ್, ದ್ಯಾಮಣ್ಣ ಚಲುವಾಡಗಿ, ಎಸ್.ಬಿ. ರಾಜೂರು, ಗಂಗಾಧರ ಖಾನಾಪುರ, ಹುಲುಗಪ್ಪ ಕಟ್ಟಿಮನಿ, ಎಂ.ಎಸ್. ಬೀರಲದಿನ್ನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ರಟ್ಟಿ ಸಾಬ್, ಎಂ.ಕೆ. ಸಾಹೇಬ್, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ವೀರಣ್ಣ ಹುರಕಡ್ಲಿ, ಸಿಬಿ ಪಾಟೀಲ್, ಕಾಶಪ್ಪ ಚಲವಾದಿ, ಮಹಾದೇವಪ್ಪ ಮಾವಿನಮಡು, ಚಿದಾನಂದಪ್ಪ ಹಡಪದ, ರಾಜಶೇಖರ ಏಳುಬಾವಿ, ಮಂಗಳೇಶ ರಾಠೋಡ್, ಮುಸ್ತಫಾ ಹಗಲುದಿವಟಿಗಿ, ಅಕ್ಬರ್, ಕೆ ಈಶ್ವರ್ಪ, ರತ್ನಮ್ಮ ದೊಡ್ಡಮನಿ, ಗಂಗಮ್ಮ ಮುಂಡರಗಿ, ಮುಕ್ಬುಲ್ ರಾಯಚೂರು ಪಾಲ್ಗೊಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 