ವಿಜೃಂಭಣೆಯಿಂದ ನಡೆದ ಜಿಲ್ಲಾ ಮಟ್ಟದ 538ನೇ ಭಕ್ತ ಶೇಷ್ಠ ಕನಕದಾಸರ ಜಯಂತ್ಯುತ್ಸವ

ವಿಜೃಂಭಣೆಯಿಂದ ನಡೆದ ಜಿಲ್ಲಾ ಮಟ್ಟದ 538ನೇ ಭಕ್ತ ಶೇಷ್ಠ ಕನಕದಾಸರ ಜಯಂತ್ಯುತ್ಸವ  The 538th district-level Bhakta Sheshtha Kanakadasa Jayanthyutsava was held with great enthusiasm

ಮುಂಡಗೋಡ   08: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ 538ನೇ ಭಕ್ತಶೇಷ್ಠ ಕನಕದಾಸರ ಜಯಂತ್ಯುತ್ಸವನ್ನು ಕನಕದಾಸರ ಮೂರ್ತಿ ಇರುವ ಪಟ್ಟಣದ ಮಿನಿ ವಿಧಾನಸೌಧ ಎದುರಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಇಲ್ಲಿಯ ಪ್ರವಾಸ ಮಂದಿರ ಆವರಣದಲ್ಲಿ ಭಕ್ತಶೇಷ್ಠ ಕನಕದಾಸರ ಭಾವಚಿತ್ರದೊಂದಿಗೆ ಪೂಜೆ ಸಲ್ಲಿಸಿ. ಮೆರವಣಿಗೆ ಮೂಲಕ  ಅಂಬೇಡ್ಕರ್ ಓಣಿಯಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಮಾಲಾರೆ​‍್ಣ ಮಾಡಿ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಶಾಸಕ ಶಿವರಾಮ ಹೆಬ್ಬಾರ್ ರವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ಮಾತನಾಡಿ ಕುಲ ಕುಲವೆಂದು ಹೊಡದಾಡಿದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಭಕ್ತಿ ಎನ್ನುವುದು ಕೇವಲ ಆರಾಧ್ಯ ಕ್ಕೆ ಮಾತ್ರವಲ್ಲ ನಮ್ಮ ಕೆಲಸದಲ್ಲಿ ನಮ್ಮ ನಿಷ್ಠೆಯಲ್ಲಿ ಭಕ್ತಿ ತೋರಿಸಬೇಕು ನಾವು ಮಾಡುವ ಕೆಲಸದಲ್ಲಿ ವಿದ್ಯೆಯಲ್ಲಿ ಭಕ್ತಿ ತೋರಿಸಬೇಕು, ಸಮಾಜದಲ್ಲಿ ಎಲ್ಲಾ ಅಸಮಾನತೆಯಲ್ಲಿ ಆಗಿನ ಕಾಲದಲ್ಲಿ ಎತ್ತಿ ಹಿಡಿದು ಕೀರ್ತನೆಗಳ ಮೂಲಕ ಭಕ್ತಶೇಷ್ಠರಾದ ಕನಕದಾಸರು ಅತ್ಯಂತ ಪ್ರಾಮಾಣಿಕವಾಗಿ ಸಮಾಜದಲ್ಲಿ ಸೇವೆವನ್ನು ಮಾಡಿದ್ದಾರೆ ಎಂದು ಶಿರಸಿ ಉಪವಿಭಾಗಾಧಿಕಾರಿ ಕಾವ್ಯ ರಾಣಿ ಅವರು ಹೇಳಿದರು. ಪ ಪಂ ಸದಸ್ಯ ಅಶೋಕ್ ಚಲವಾದಿ ಅವರು ಮಾತನಾಡಿದರು.ಲೋಟರಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹೇಳಿದರು. ಈ ಸಂದರ್ಭದಲ್ಲಿ ಶಿರಸಿ ಉಪವಿಭಾಗಾಧಿಕಾರಿ  ಕಾವ್ಯ ರಾಣಿ ,ತಹಶೀಲ್ದಾರ ಶಂಕರ್ ಗೌಡಿ , ತಾ ಪಂ ಇಒ ಟೀ ವೈ ದಾಸನಕೊಪ್ಪ ,ಪಂ ಪಂ ಮುಖ್ಯಾಧಿಕಾರಿ ಸಂತೋಷ ಹಳಕಲ್ಲಾಪುರ ,ಕುರುಬರ ಸಮಾಜದ ತಾಲ್ಲೂಕು ಅಧ್ಯಕ್ಷ  ಶಿವಾನಂದ ಎಚ್ ಕುರುಬರ , ಕುರುಬರ ಸಮಾಜದ ತಾಲ್ಲೂಕು ಉಪಾಧ್ಯಕ್ಷ  ಶಿವಾನಂದ ಕೋ ದೊಡ್ಮನಿ , ಕುರುಬರ ಸಮಾಜದ ಕಾರ್ಯದರ್ಶಿ ಮಂಜು ಅ ಕೊಣನಕೇರಿ , ಕುರುಬರ ಸಮಾಜದ ಸಹ ಕಾರ್ಯದರ್ಶಿ ಬಸವರಾಜ ತನಿಕೆದಾರ , ಯಲ್ಲಪ್ಪ ಎಚ್ ಕುರುಬರ, ಸಂತೋಷ ವಾಸನ , ಶ್ರೀಕಾಂತ್ ಪಾಟೀಲ್ , ಪ ಪಂ ಸದಸ್ಯ ರಜಾ ಪಠಾಣ್ , ಪ ಪಂ ಸದಸ್ಯ ಅಶೋಕ್ ಚಲವಾದಿ , ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ , ರಾಜು ಗುಬ್ಬಕ್ಕನವರ , ಜ್ಞಾನೇಶ್ವರ ಗುಡಿಹಾಳ , ಕುರುಬರ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಜನಸಾಮಾನ್ಯರು ಹಾಗೂ ಉಪಸ್ಥಿತರಿದ್ದರು.