ದಿ. 22ರಂದು ರುದ್ರಮುನಿ ಸ್ವಾಮಿಗಳ 42ನೇ ಪುಣ್ಯ ಸ್ಮರಣೋತ್ಸವ
The 42nd commemoration of Rudramuni Swami on the 22nd
ಲೋಕದರ್ಶನ ವರದಿ
ಸವಣೂರ : ತಾಲ್ಲೂಕಿನ ಹತ್ತಿಮತ್ತೂರಿನ ಶ್ರೀ ವಿರಕ್ತ ಮಠದಲ್ಲಿ ದಿ,22 ಶುಕ್ರವಾರ ಬೆಳಿಗ್ಗೆ 10 ಘಂಟೆಗೆ ಲಿಂ.ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳ 42ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಹತ್ತಿಮತ್ತೂರ ಶ್ರೀ ವಿರಕ್ತ ಮಠದ ಶ್ರೀ ಮ.ನಿ.ಪ್ರ.ನಿಜಗುಣ ಶಿವಯೋಗಿಗಳು ಹೇಳಿದರು. ಇಲ್ಲಿನ ಹತ್ತಿಮತ್ತೂರಿನ ಶ್ರೀ ವಿರಕ್ತ ಮಠದಲ್ಲಿ ಸ್ಮರಣೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶ್ರೀಗಳು ಮಾತನಾಡಿದರು. ಲಿಂ.ಶ್ರೀ ಮ.ನಿ.ಪ್ರರುದ್ರಮುನಿ ಮಹಾಸ್ವಾಮಿಗಳು ತಮ್ಮದೆಯಾದ ಛಾಪು ಮೂಡಿಸಿ ಭಕ್ತಿ ಪ್ರೀತಿಗೆ ಪಾತ್ರರಾಗಿದ್ದರು. ಸಮಾಜಕ್ಕೆಉತ್ತಮ ಸಂದೇಶಗಳನ್ನು ನೀಡುವಲ್ಲಿ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಪಾತ್ರ ಬಹುಮುಖ್ಯವಾಗಿದೆ.
ಅವರ ಸಂದೇಶಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ದಿ,22ರ ಕಾರ್ಯಕ್ರಮಕ್ಕೆ ಹತ್ತಿಮತ್ತೂರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಎಲ್ಲರ ಸಹಾಯ ಸಹಕಾರದೊಂದಿಗೆ ಮಹಾಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಮುನ್ನಡಿಯೋಣ ಎಂದು ಶ್ರೀಗಳು ಹೇಳಿದರು. ಈ ಸಂದರ್ಭದಲ್ಲಿ ಹನುಮಂತಗೌಡ್ರ ಉಳ್ಳಾಗಡ್ಡಿ, ಬಸವರಾಜ ಕೋಳಿವಾಡ, ಬಸಲಿಂಗಯ್ಯ ಆರಾಧ್ಯಮಠ, ಗೀರೀಶ ಪಾಟೀಲ,ರಮೇಶ ಅಣ್ಣೆಪ್ಪನವರ, ಯಲ್ಲಪ್ಪ ರೊಡ್ಡಣ್ಣವರ,ಶಿವಯೋಗಿ ಹಾಲಪ್ಪನವರ, ಪ್ರಭು ಮಲ್ಲೂರು, ಅಣ್ಣಪ್ಪತುದಿಗಾಲ, ವೀರಣ್ಣ ಪಟ್ಟಣಶೆಟ್ಟಿ, ಅಜ್ಜಯ್ಯ ಕುಲಕರ್ಣಿ ಇನ್ನೂ ಅನೇಕರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 